ಐತಿಹಾಸಿಕ ಕೋಟೆ ಸೇರಿದಂತೆ, ನಗರದ ಪ್ರಮುಖ ವೃತ್ತಗಳಲ್ಲಿ  ಅದ್ಧೂರಿಯಾಗಿ ದ್ವಜಾರೋಹಣ; ಟಿ, ಎನ್, ಭೀಮುನಾಯಕ

ಯಾದಗಿರಿ : ರಾಜ್ಯದಲ್ಲಿ ಹಲವು ಭಾಷಿಕರು ನೆಲೆಸಿದ್ದಾರೆ. ಅವರು ಭಾಷಾ ಸಾಮರಷ್ಯವನ್ನು ಅಳವಡಿಸಿಕೊಳ್ಳಬೇಕು, ಪ್ರತಿಯೊಬ್ಬರೂ ತಮ್ಮ ಭಾಷೆಯ ಮೇಲೆ ಪ್ರೀತಿ ಇರಬೇಕು, ಆದರೆ ನಾಡಿನ ಭಾಷೆಯ ಮೇಲೆ ಕೂಡ ಗೌರವದಿಂದ ಎಲ್ಲರೂ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕು ಎಂದು ನಗರದ ಕರವೇ ಜಿಲ್ಲಾ ಕಾರ್ಯಾಲಯದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದ ನೇತೃತ್ವವಹಿಸಿ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ಹೇಳಿದರು.

ನಗರದ ಹೃದಯ ಭಾಗವಾಗಿರುವ ಐತಿಹಾಸಿಕ ಕೋಟೆ, ಸೇರಿದಂತೆ ನಗರದ ಪ್ರಮುಖ ವೃತ್ತಗಳಾದ ವಾಲ್ಮೀಕಿ ವೃತ್ತ, ಸುಭಾಷ್‌ಚಂದ್ರ ಬೋಸ್ ವೃತ್ತ, ಶಾಸ್ತ್ರಿ ವೃತ್ತ, ಹೊಸ ಬಸ್ ನಿಲ್ದಾಣ, ಲುಂಬಿನಿ ಉದ್ಯಾನವನ, ಹಾಗೂ ಬಸವೇಶ್ವರ ವೃತ್ತ, ಮಹಾತ್ಮಗಾಂಧಿ ವೃತ್ತ, ಮತ್ತು ಕನಕ ವೃತ್ತ ಧ್ವಜಾರೋಹಣ ಮಾಡುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.

ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಕರವೇ ಕಾರ್ಯಕರ್ತರು ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲಿ ಆಚರಿಸಿ, ನಮ್ಮ ಸಂಭ್ರಮದಲ್ಲಿ ಪಾಲ್ಗೊಂಡಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.  ಪ್ರತಿ ವರ್ಷವು ಬೆಳಿಯುತ್ತಿರುವ ಸಂಘಟನೆಯ ಕಾರ್ಯಕರ್ತರ ಹುಮ್ಮಸ್ಸು ಗಮನಾರ್ಹವಾಗಿದೆ ಎಲ್ಲಾ ಕಾರ್ಯಕರ್ತರು ನಮ್ಮ ಕರೆಗೆ ಒಗೊಟ್ಟು ಪ್ರತಿ ಮನೆ ಮನೆ ಮೇಲೆ ದ್ವಜವನ್ನು ಹಾರಿಸಿರುವುದು ನಾಡಿಗೆ ಇನ್ನಷ್ಟು ಗೌರವ ಸೂಚಿಸಿದಂತಾಗಿದೆ ಎಂದು ನುಡಿದರು.

ಕನ್ನಡ ಭಾಷೆಯು ಸುಮಾರು ೨೦೦೦ ವರ್ಷದ ಇತಿಹಾಸವಿದೆ ಪ್ರಪಂಚದಲ್ಲಿ ಕನ್ನಡ ಭಾಷೆ ಅತಿ ಶ್ರೇಷ್ಠವಾದ ಭಾಷೆಯಾಗಿದ್ದು ಈ ಒಂದು ಭಾಷಾಭಿಮಾನ ಕೇವಲ ರಕ್ಷಣಾ ವೇದಿಕೆ ಕಾರ್ಯಕರ್ತರಿಗೆ ಸಿಮಿತವಾಗಬಾರದು, ಗಡಿ ಭಾಗಗಳಲ್ಲಿ ಏಕ್ಕಡ, ಏನ್ನಡ ಮರೆ ಮಾಚುತ್ತಿದೆಂದರೆ ಅದು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರಿಂದಲೇ ಎಂದು ಹೇಳಲು ಹೆಮ್ಮೆ ಅನಿಸುತ್ತದೆ ಎಂದು ಕಾರ್ಯಕರ್ತರಿಗೆ ಶಹಭಾಸ್ ಹೇಳಿದರು.

ಈ ವೇಳೆ ಐತಿಹಾಸಿಕ ಕೋಟೆ ಯಾದಗಿರಿ ಹೃದಯ ಭಾಗದಲ್ಲಿ ವಿಧ್ಯಾರ್ಥಿ ಘಟಕ ಅಧ್ಯಕ್ಷ ವಿಶ್ವರಾಜ ಹೊನಗೇರಾ ರವರ ನೇತೃತ್ವದಲ್ಲಿ ವಿಧ್ಯಾರ್ಥಿಗಳನೊಳಗೊಂಡು ಧ್ವಜಾರೋಹಣ ನೇರವೇರಿಸಿದರು.

ನಗರದ ಸುಭಾಷ್ ವೃತ್ತದಲ್ಲಿ ನಗರಸಭೆಯ ಅಧ್ಯಕ್ಷೇ ಕು.ಲಲಿತಾ ಅನಪೂರ ರವರಿಂದ ಧ್ವಜಾರೋಹಣ ನೇರವಿರಸಲಾಯಿತ್ತು ನಗರಸಭೆ ಸಿಬ್ಬಂದಿ ವರ್ಗವೂ ಹಾಜರಿದ್ದರು.

ವಿಶೇಷ ಅತಿಥಿಗಳಾಗಿ ಧ್ವಜಾರೋಹಣ ನೇರವೆರಿಸಿದ ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ, ಯಾದಗಿರಿ ತಹಸೀಲ್ದಾರ ಸುರೇಶ ಅಂಕಲಿಗಿ, ಪೋಲೀಸ್ ವೃತ್ತ ನೀರಿಕ್ಷಕ ಸುನೀಲ ಮೂಲಿಮನಿ, ನಗರಸಭೆ ಪೌರಾಯುಕ್ತ ರಜಿನಿಕಾಂತ್ ಶ್ರಿಂಗೇರಿ, ಮತ್ತು ನಗರಸಭೆ ಸದಸ್ಯರಾದ ಹಣಮಂತ ಇಟಗಿ, ಹಣಮಂತನಾಯಕ ರವರಿಗೆ ಗೌರವಹಿಸಿ ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಕರವೇ ಮುಖಂಡರಾದ ಸಿದ್ದುನಾಯಕ ಹತ್ತಿಕುಣಿ, ವಿಶ್ವರಾಧ್ಯ ದಿಮ್ಮೆ, ಅಂಬ್ರೇಶ ಹತ್ತಿಮನಿ, ಸಂತೋಷ ನಿರ್ಮಲಕರ್, ಹಣಮಂತ ಖಾನಳ್ಳಿ, ಪಪ್ಪುಗೌಡ ಚಿನ್ನಾಕರ್, ಹಣಮಂತ ಅಚ್ಚೋಲಾ, ಸಾಹೇಬ್‌ಗೌಡ ನಾಯಕ, ಶರಣು ಸಾಹುಕಾರ, ಸಿದ್ದಪ್ಪ ಕೂಯಿಲೂರು, ಯಮನಯ್ಯ ಗುತ್ತೆದಾರ, ಅರ್ಜುನ ಪವಾರ, ವೆಂಕಟೇಶ ಮಿಲ್ಟ್ರಿ, ಭೀಮರಾಯ್ ರಾಮಸಮುದ್ರ, ಸಿದ್ದಪ್ಪ ಕ್ಯಾಸಪನಳ್ಳಿ, ಸಿದ್ದಲಿಂಗರೆಡ್ಡಿ ಮುನಗಲ್, ಸೈದಪ್ಪ ಬಾಂಬೆ, ನಾಗು ತಾಂಡೂಲ್ಕರ್, ಅನೀಲ ದಾಸನಕೇರಿ, ಕಾಶೀನಾಥ ನಾನೇಕ, ಅಬ್ದುಲ್ ಅಜೀಜ್, ಲಕ್ಷö್ಮಣ ಜಿನಕೇರಾ, ಯಲ್ಲು ಚಾಮನಾಳ, ಹಣಮಂತ ದೊರೆ, ಬಸವರಾಜ ಕಡ್ಡಿ, ಸಾಬಣ್ಣ ಕೂಡ್ಲೂರು, ಹುಲಗಪ್ಪ ಬಜಂತ್ರಿ, ರೆಡ್ಡಿ ಕೌಳೂರು, ಮರೆಪ್ಪನಾಯಕ ಕಡ್ಡಿ, ದೇವಪ್ಪ ಕಂಚಗಾರಹಳ್ಳಿ, ಹಣಮಂತ ಶೆಟ್ಟಗೇರಾ, ಸಾಬು ಪೂಜಾರಿ, ರಮೇಶ.ಡಿ. ನಾಯಕ ಸೇರಿದಂತೆ ಅನೇಕ ಕರವೇ ಕಾರ್ಯಕರ್ತರು ಹಾಗೂ ಕನ್ನಡ ಮನಸುಗಳು ಭಾಗಿಯಾಗಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!