ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಜಿಲ್ಲಾ ಸಮಿತಿ ಬೃಹತ್ ಪ್ರತಿಭಟನೆ | ಗೇಟ್ ನಲ್ಲಿ ಕೆಲಕಾಲ ತಡೆದಿದ್ದಕ್ಕೆ ಹೋರಾಟಗಾರ ಆಕ್ರೋಶ | ಪ್ರಗತಿಪರ ಹೋರಾಟಗಾರ್ತಿ ನೀಲಾ ಕೆ. ಭಾಗಿ
ಯಾದಗಿರಿ: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ಕಾರ್ಯಾಲಯದ ಮುಂದೆ ಬೃಹತ್ ಪ್ರತಿಭಟನೆ ನಡೆಯಿತು.
ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಜಾರಿಗಾಗಿ ಸತತ 100 ದಿನಗಳ ಕೆಲಸಕ್ಕಾಗಿ, ಸಮರ್ಪಕ ಕೂಲಿ ಪಾವತಿ, ಕಂಪ್ಯೂಟರ್ ಆಪರೇಟರ್ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ಒತ್ತಾಯಿಸಿ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ಹೋರಾಟಗಾರ್ತಿ ನೀಲಾ ಕೆ, ಮಲ್ಲಮ್ಮ ಕೊಡ್ಲಿ ಭಾಗವಹಿಸಿ ಮಾತನಾಡಿದರು. ಸಂಘಟನೆ ಜಿಲ್ಲಾಧ್ಯಕ್ಷ ದಾವಲ್ ಸಾಬ್ ನದಾಫ್ ಸೇರಿದಂತೆ ಕೃಷಿ ಕೂಲಿ ಕಾರ್ಮಿಕರು ಭಾಗವಹಿಸಿದ್ದರು.
ಮಾರ್ಚ್ 26ಕ್ಕೆ ಸಭೆ ನಿಗದಿ ಹೋರಾಟ ಗಾರರಿಗೆ ಆಹ್ವಾನಿಸಿದ ಜಿ.ಪಂ. ಸಿಇಒ : ಕೃಷಿ ಕೂಲಿ ಕಾರ್ಮಿಕರ ಹೋರಾಟ ಕ್ಕೆ ಸ್ಪಂದಿಸಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಲವೀಶ ಓರಾಡಿಯಾ ಅವರು ಮಾರ್ಚ್ 26ಕ್ಕೆ ಸಂಜೆ ಸಭೆ ಕರೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹೋರಾಟಗಾರರ ಸಮಕ್ಷಮದಲ್ಲಿ ಸಭೆ ನಡೆಸಿ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ಸ್ಥಳೀಯವಾಗಿ ಸುಧಾರಣೆ ಮಾಡಬೇಕಿರುವ ಸಮಸ್ಯೆ ಶೀಘ್ರವೇ ಬಗೆಹರಿಸಲು ಆದೀನ ಅಧಿಕಾರಿಗಳಿಗೆ ಸೂಚನೆ ನೀಡಲಿದ್ದು, ಸರ್ಕಾರದ ಮಟ್ಟದಲ್ಲಿ ಇದ್ದರೆ ಸೂಕ್ತ ಪತ್ರ ವ್ಯವಹಾರ ನಡೆಸುವ ಭರವಸೆ ನೀಡುವ ಸಾಧ್ಯತೆಗಳಿದೆ ಎಂದು ತಿಳಿದು ಬಂದಿದೆ. ಸಮಸ್ಯೆಗಳು ಈ ಹಂತದಲ್ಲೇ ಬಗೆಹರಿಯುವವೇ ಕಾದು ನೋಡೋಣ.
