ಯಾದಗಿರಿ: ತಾಲೂಕಿನ ಕಟಗಿ ಶಹಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 17 ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕ ಜಗದೀಶ್ ಹಾಗೂ ಅವರ ದಂಪತಿಗಳಿಗೆ ಹಳೆಯ ವಿದ್ಯಾರ್ಥಿಗಳಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಕಟಗಿ ಶಹಾಪುರ ಗ್ರಾಮದಿಂದ ಗೋಕಾಕ್ ತಾಲೂಕಿಗೆ ವರ್ಗಾವಣೆ ಆದ ಸಂಗತಿ ತಿಳಿದ, ಶಿಕ್ಷಕರ ಮಾರ್ಗದರ್ಶನದಲ್ಲಿ ಕಳೆದ 17 ವರ್ಷಗಳಿಂದ ಓದಿದ ಹಳೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಹೃದಯಸ್ಪರ್ಶಿ ಬೀಳ್ಕೊಡುಗೆ ಏರ್ಪಡಿಸಿದ್ದರು.
ಎಸ್ ಡಿ ಎಂ ಸಿ ಅಧ್ಯಕ್ಷ ದೇವೇಂದ್ರಪ್ಪ, ಪ್ರಭಾರ ಮುಖ್ಯ ಗುರುಗಳು ಈಶಪ್ಪ, ಬಿ ಆರ್ ಪಿ ಕೃಷ್ಣಾರೆಡ್ಡಿ, ಸಿದ್ದಲಿಂಗಪ್ಪ ಕೋರಿ, ಬನ್ನಪ್ಪ, ಗುರುನಾಥ್ ರೆಡ್ಡಿ, ನಾಗರಾಜ್ ಸಿಲ್ವಂತ್, ಹನುಮಂತಪ್ಪ ತಳವಡಿ, ಸನ್ನಮೀರಾ ಗ್ರಾಮ ವಿದ್ಯಾರ್ಥಿಗಳಾದ ಬಸವರಾಜ್, ತಾಯಪ್ಪ, ದೇವರಾಜ್, ಶರಣ ಬಸವ, ಸಾಬಣ್ಣ, ಗಂಗಪ್ಪ, ದುರ್ಗಪ್ಪ ರೆಡ್ಡಿ, ಶರಣಪ್ಪ, ಶಿವಪ್ಪ, ದುರ್ಗಪ್ಪ, ಮೈಪಾಲ್ ರೆಡ್ಡಿ , ಹೊನ್ನಪ್ಪ, ಶರಣಪ್ಪ, ಮಂಜು, ಮಲ್ಲು, ಭೀಮರಾಯ, ಸಿದ್ದರಾಮ ರೆಡ್ಡಿ , ಬಾಗಪ್ಪ, ರಾಜಪ್ಪ, ಶೇಖರ್ ಶಿಕ್ಷಕರಾದ ಗುರುಸಿದ್ದಯ್ಯ , ಮಂಜುನಾಥ್ ಗೌಡ, ಶರಣಪ್ಪ, ಖಜಾಹುಸೇನ್, ಶಿಕ್ಷಕಿ ಜ್ಯೋತಿ, ಲಕ್ಷ್ಮಿ, ಅಕ್ಕಮ್ಮ, ಮಹಾದೇವಮ್ಮ, ಶರಣಗೌಡ ಹಾಜರಿದ್ದರು.
ವಿದ್ಯಾರ್ಥಿ ಮೌನೇಶ್ ನಿರೂಪಿಸಿದರು. ರಡ್ಡಿ ಭೀಮರಾಯ ಬಿಡುಗಡೆ ಹೊಂದಿದ ಶಿಕ್ಷಕರ ಕುರಿತು ಮಾತನಾಡಿ, ಜಗದೀಶ್ ಸರ್ ಕೈಯಲ್ಲಿ ಓದಿ, ಬೆಳೆದು ಉತ್ತಮ ನಾಗರಿಕರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.