ಯಾದಗಿರಿಯಲ್ಲಿ ವಸ್ತು ಪ್ರದರ್ಶನ…

ಯಾದಗಿರಿ: ವಸ್ತು ಪ್ರದರ್ಶನದಲ್ಲಿ ಖಾದಿಯ 75 ಮಳಿಗೆಗಳನ್ನು ನಿರ್ಮಿಸಲಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ರಾಮನಗರ, ಬೆಂಗಳೂರು, ಬೀದರ್, ಬಳ್ಳಾರಿ, ಧಾರವಾಡ, ವಿಜಯಪುರ ಬಾಗಲಕೋಟೆ, ಗದಗ ತುಮಕೂರು, ಹಾವೇರಿ, ಮೈಸೂರು, ಯಾದಗಿರಿ, ದಾವಣಗೆರೆ, ಕೊಪ್ಪಳ, ಚಿತ್ರದುರ್ಗ, ಗುಲ್ಬರ್ಗ ನಗರ ಹಾಗೂ ಇತರೆ ಜಿಲ್ಲೆಗಳಿಂದ ಖಾದಿ ಮಂಡಳಿಯಿಂದ ಹಾಗೂ ಖಾದಿ ಆಯೋಗದಿಂದ ಆರ್ಥಿಕ ಸಹಾಯ ಪಡೆದ ಖಾದಿ ಸಂಘ ಸಂಸ್ಥೆಗಳು ಹಾಗೂ ವೈಯಕ್ತಿಕ ಫಲಾನುಭವಿಗಳು ತಯಾರಿಸಿದ ವಸ್ತುಗಳನ್ನು ಉತ್ಪಾದಕರಿಂದ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲಾಗುತ್ತಿದೆ.

ವಸ್ತು ಪ್ರದರ್ಶನದಲ್ಲಿ ವೈವಿದ್ಯಮಯ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಖಾದಿ, ರೇಷ್ಮೆ ಸೀರೆಗಳು ಪಾಲಿವಸ್ತç, ಖಾದಿ ಶರ್ಟುಗಳು, ಜಾಕೆಟು ಗಳು, ಜಮ್ಖಾನೆ ಬೆಡ್ ಶೀಟ್, ಟವಲುಗಳು ಮತ್ತು ಜೀನ್ಸ್ ಬಟ್ಟೆಗಳು, ಇಳಕಲ್, ಸೀರೆಗಳು ಜೂಟ್ ಮತ್ತು ಇತರೆ ಬ್ಯಾಗಗಳು, ಪಾದರಕ್ಷಗಳು ಆಯುರ್ವೇದಿಕ, ಔಷಧಿಗಳು, ಆಕರ್ಷಕ ಬಣ್ಣಗಳ ಹಾಗೂ ವಿನ್ಯಾಸಗಳಿಂದ ತಯಾರಿಸಿದ ಸಿದ್ದ ಉಡುಪುಗಳು.

ಗೃಹಪಯೋಗಿ ಸಾಮಗ್ರಿಗಳು, ಶುದ್ಧ ಜೇನುತುಪ್ಪ, ಅಲಂಕಾರಿಕ ಕರಕುಶಲ ವಸ್ತುಗಳು ಕಾಡಿಮೆಂಟ್ಸ್ ಅಗರಬತ್ತಿ ಪೂಜಾ ವಸ್ತುಗಳು ಹಾಗೂ ಅನೇಕ ಬಗೆಯ ಇತರ ವಸ್ತುಗಳು ಪ್ರದರ್ಶನದಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ. ಈ ಅವಕಾಶವನ್ನು ಯಾದಗಿರಿ ಜಿಲ್ಲೆಯ ನಾಗರಿಕರು ಸದುಪಯೋಗ ಪಡೆದುಕೊಳ್ಳಲು ವಿನಂತಿಸಲಾಗಿದೆ.

Spread the love

Leave a Reply

Your email address will not be published. Required fields are marked *

error: Content is protected !!