ಫೆ.15 ರಂದು ಜಿಲ್ಲಾ ಕಿರಣಾ ಮತ್ತು ಜನರಲ್ ಸ್ಟೋರ್ ವ್ಯಾಪಾರಿಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಯಾದಗಿರಿ; ಯಾದಗಿರಿ ಜಿಲ್ಲಾ ಕಿರಾಣಾ ಮತ್ತು ಜನರಲ್ ಸ್ಟೋರ್ ವ್ಯಾಪಾರಿಗಳ ಕ್ಷೇಮಾಭೀವೃದ್ಧಿ ಸಂಘದ 2025-26 ನೇ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಸಮಾರಂಭವನ್ನು ನಗರದ ಎಸ್ ಡಿಎನ್ ಹೋಟಲ್ ಸಭಾಂಗಣದಲ್ಲಿ ಫೆ. 15 ರಂದು ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಜಿಲ್ಲಾ ಕಿರಣಾ ಮತ್ತು ಜನರಲ್ ಸ್ಟೋರ್ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘ ಸಂಸ್ಥಾಪಕರಾದ ಮಲ್ಲಿಕಾರ್ಜುನ ಶಿರಗೋಳ ತಿಳಿಸಿದರು.
ನಗರದ ಪತ್ರಿಕೆ ಭವನದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಡೆಯುವ ಕಾರ್ಯಕ್ರಮದಲ್ಲಿ ಯಾದಗಿರಿ ಶಾಸಕರಾದ ಚನ್ನಾರೆಡ್ಡಿ ಪಾಟೀಲ್ ತುನ್ನೂರ್, ಗುರುಮಠಕಲ್ ಶಾಸಕರಾದ ಶರಣ ಗೌಡ ಕಂದಕೂರ್, ಬಿಜೆಪಿ ಮುಖಂಡರಾದ ರಾಚನಗೌಡ ಮುದ್ನಾಳ, ಮಹೇಶರೆಡ್ಡಿ ಮುದ್ನಾಳ, ವೈ ಸಿಸಿ ಅಧ್ಯಕ್ಷ ದಿನೇಶ ಕುಮಾರ ದೋಖಾ, ನಗರಸಭೆ ಅಧ್ಯಕ್ಷರಾದ ಕು.ಲಲಿತಾ ಅನಪೂರ್, ಚಂದ್ರಶೇಖರ ವಿ, ಖಾಜಾ ಖಲಿಲುಲ್ಲಾ, ಡಾ.ರತ್ನಾಕರ್ ತೋರಣ, ಆಂಜನಯ್ಯ ಬೈಕಾರ್, ಹರಿ ದೇಶಪಾಂಡೆ, ಸಾಹೇರಾ ಬೇಗಂ, ರಫೀಕಸಾಬ್ ಲಾಡ್ಜಿ, ಅಶ್ಚತಕುಮಾರ ಪತ್ತಾರ್, ಬಿ.ಕೆ ಉಮೇಶ ಆಗಮಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸಿದ್ದಣ್ಣ ಗೌಡ ಹಿರೇಗೌಡ ವಹಿಸಲಿದ್ದಾರೆ. ಸಂಘದ ಎಲ್ಲಾ ಪದಾಧಿಕಾರಿ ಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೊಷ್ಠಿಯಲ್ಲಿ ಪ್ರದಾನ ಕಾರ್ಯದರ್ಶಿ, ಯಶವಂತ ಕುಮಾರ ಜಾದವ್ ಇದ್ದರು
