ವಸತಿ ಶಾಲೆ ವಾರ್ಡನ್ ನಿರ್ಲಕ್ಷ್ಯ | ಶುಚಿಗೊಳಿಸಿದೇ ಗಿರಣಿಗೆ ಕಳಿಸಿದ ಗೋದಿಯಲ್ಲಿ ಹುಳು | ಸಾರ್ವಜನಿಕರ ಆಕ್ರೋಶ | ಕ್ರಮಕ್ಕೆ ಆಂಜನೇಯ ಕಟ್ಟಿಮನಿ ಆಗ್ರಹ
ಯಾದಗಿರಿ: ಸರ್ಕಾರ ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಸಾಕಷ್ಟು ಖರ್ಚು ಮಾಡುತ್ತಿದೆ. ಶಾಲೆಗಳಲ್ಲಿ ಮೊಟ್ಟೆ, ಬಾಳೆ ಹಣ್ಣು ನೀಡಿ ಮಕ್ಕಳು ಸಧೃಡವಾಗಿ ಬೆಳೆದು ಆರೋಗ್ಯವಂತರಾಗಲು ಒಂದೆಡೆ ಕಾರ್ಯಕ್ರಮ ನಡೆಯುತ್ತಿದ್ದರೆ ಇತ್ತ ವಸತಿ ಶಾಲೆಗಳ ಪರಿಸ್ಥಿತಿ ದೇವರೇ ಬಲ್ಲ ಎನ್ನುವಂತಾಗಿದೆ.
ಯಾದಗಿರಿ ತಾಲ್ಲೂಕಿನ ಸೈದಾಪುರ ಸಮೀಪದ ರಾಚನಳ್ಳಿ ಗ್ರಾಮದಲ್ಲಿರುವ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಗೆ ಸಂಬಂಧಿಸಿದ ಗೋದಿಯನ್ನು ಗ್ರಾಮದ ಗಿರಣಿಗೆ ಬೀಸಲು ಕಳಿಸಿದ್ದರು ಎನ್ನಲಾದ ಗೋದಿಯಲ್ಲಿ ಸಣ್ಣ ಸಣ್ಣ ಹುಳುಗಳು ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ವಸತಿ ಶಾಲೆ ಎಂದರೆ ಪ್ರತಿಭಾವಂತ ವಿದ್ಯಾರ್ಥಿಗಳ ನ್ನು ಉತ್ತಮ ಶಿಕ್ಷಣದ ಜೊತೆಗೆ ವಸತಿಯೂ ಸಿಗುತ್ತದೆ ಎಂದು ಪಾಲಕರು ನಿಶ್ಚಿಂತೆಯಿಂದ ಇರುತ್ತಾರೆ. ಆದರೇ ವಸತಿ ಶಾಲೆಯಲ್ಲಿ ಮಕ್ಕಳಿಗೆ ಯಾವ ಮಟ್ಟದ ಆಹಾರ ನೀಡಲಾಗು ತ್ತಿದೆ? ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಹೊಣೆ ಎನ್ನುವ ಪ್ರಶ್ನೆ ಮೂಡಿದೆ.
ಗೋದಿಯನ್ನು ಶುಚಿಗೊಳಿಸಿ ಬೀಸಲು ಕಳಿಸಿಲ್ಲವೋ, ಅಥವಾ ಹುಳು ಇರುವ ಗೋದಿಯಿಂದಲೇ ಮಕ್ಕಳಿಗೆ ಆಹಾರ ಸಿದ್ಧಪಡಿಸಲಾಗುತ್ತಿದೆಯೇ ಎನ್ನುವ ಕುರಿತು ತನಿಖೆಯಾಗಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಮಕ್ಕಳ ಆರೋಗ್ಯ ದೃಷ್ಟಿಯಿಂದ ಸಂಪೂರ್ಣ ತನಿಖೆ ನಡೆಸಿ ನಿರ್ಲಕ್ಷ್ಯವಸಿದವರ ಮೇಲೆ ಕ್ರಮಕ್ಕೆ ಮುಂದಾಗಬೇಕಿದೆ.
ಶಾಲೆಯ ಅಧಿಕಾರಿಗಳು ಹಿಟ್ಟಿನ ಗಿರಿಣಿಗೆ ಬೀಸಲುತಂದಾಗ ಆಹಾರದಲ್ಲಿ ಹುಳುಗಳಿದ್ದದನ್ನು ನೋಡಿದ ಅಲ್ಲಿನ ಸ್ಥಳೀಯರು ನೋಡಿ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಆಗ ಈ ಗೋದಿ ರಾಚನಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆದ್ದು ಎಂದು ತಿಳಿದು ಬಂದಿದೆ. ಶಾಲೆಯ ಆಡಳಿತ ಮಂಡಳಿ ಇದನ್ನು ನೋಡಿದರು ನೋಡದೆ ಇರುವ ಅಧಿಕಾರಿಗಳು ಶಾಲಾ ಮಕ್ಕಳ ಆರೋಗ್ಯಕ್ಕೆ ಗಮನ ಕೊಡದೆ ನಿರ್ಲಕ್ಷ ವಹಿಸುತ್ತಿರುವುದು ಕಾಣುತ್ತದೆ. ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು – ಅಂಜನೇಯ ಕಟ್ಟಿಮನಿ ರಾಂಪೂರ ಕೆ. ಸೈದಾಪುರ ಬ್ಲಾಕ್ ಕಾಂಗ್ರೆಸ್ ಸೇವಾದಳ ಅಧ್ಯಕ್ಷ.