ಸರಳವಾಗಿ ಆಚರಿಸಿದ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿ | ಭಾರತ – ಪಾಕ್ ಯುದ್ಧದ ಹಿನ್ನಲೆಯಲ್ಲಿ ಅದ್ದೂರಿ ಕಾರ್ಯಕ್ರಮ ರದ್ದು

ಯಾದಗಿರಿ: ಸ್ತ್ರೀ ಕುಲದ ಆದರ್ಶ, ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಅವರ ಜಯಂತಿ ಕಾರ್ಯಕ್ರಮ ಶನಿವಾರ ಇಲ್ಲಿನ‌ ಜಿಲ್ಲಾ ಭವನದ ಜಿಪಂ ಸಭಾಂಗಣದಲ್ಲಿ ಅತ್ಯಂತ ಸರಳವಾಗಿ ಹಾಗೂ ಭಕ್ತಿ ಪೂರ್ವಕವಾಗಿ ಜರುಗಿತು.

ಭಾರತ – ಪಾಕ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಅತಿ ಅದ್ದೂರಿಯಾಗಿ ಮತ್ತು ಸಂಭ್ರಮದಿಂದ ಆಚರಣೆಗೆ ಜಿಲ್ಲಾ ರಡ್ಡಿ ಸಮಾಜ ಸಿದ್ದತೆ ಮಾಡಿಕೊಂಡಿದ್ದನ್ನು ಕೊನೆಗಳಿಗೆಯಲ್ಲಿ ರದ್ದು ಪಡಿಸಿ, ಸರಳವಾಗಿ ಜಿಲ್ಲಾಡಳಿತದೊಂದಿಗೆ ಆಚರಿಸಿತು.

ಜಿಪಂ ಸಭಾಂಗಣದಲ್ಲಿ ಹೇಮರಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು, ಜಿಲ್ಲಾಧಿಕಾರಿ ಡಾ.ಸುಶೀಲಾ ಅವರು ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ ಗೌರವ ಅರ್ಪಿಸಿದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಚನ್ನಾರೆಡ್ಡಿ ಪಾಟೀಲ್, ಪ್ರತಿವರ್ಷಕ್ಕಿಂತ ಈ ವರ್ಷ ಅತಿ ಅದ್ದೂರಿಯಾಗಿ ಜಯಂತಿ ಆಚರಿಸಲು ಜಿಲ್ಲಾ ರಡ್ಡಿ ಸಮಾಜವು ಕಳೆದ ಒಂದು ತಿಂಗಳ ಹಿಂದೆಯೇ ತಿರ್ಮಾನಿಸಿ, ಸಕಲ ಸಿದ್ದತೆಗಳನ್ನು ಮಾಡಿಕೊಂಡಿತ್ತು. ಆದರೇ ಈಗ ಭಾರತ ಮತ್ತು ಪಾಕ್ ನಡುವೆ ನಡೆದಿರುವ ಯುದ್ಧದ ವೇಳೆ ಅದ್ದೂರಿ ಅಚರಣೆ ಬೇಡ ಎಂಬ ವಿಚಾರ ಸಮಾಜದ ಅನೇಕರು ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ರದ್ದು ಪಡಿಸಿ, ಸರಳವಾಗಿ ಆಚರಿಸಲಾಗಿದೆ ಎಂದರು.

ದೇಶದ ಸೈನಿಕರು, ರಕ್ಷಣಾ ವ್ಯವಸ್ಥೆ ಅಲ್ಲಿ ಯುದ್ಧದಲ್ಲಿ ನಿರತರಾಗಿ ದೇಶದ ರಕ್ಷಣೆಗೆ ಮುಂದಾಗಿರುವಾಗ ಇಲ್ಲಿ ಜಯಂತಿ ಅದ್ದೂರಿಯಾಗಿ ಆಚರಿಸುವುದು ಸಮಂಜಸವಲ್ಲ ಹಾಗೂ ದೇಶಕ್ಕಿಂತ ದೊಡ್ಡದು ಯಾವುದು ಇಲ್ಲ ಎಂಬ ವಿಚಾರದಿಂದ ಸರಳವಾಗಿ ಆಚರಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ‌ ಹೆಚ್ಚುವರಿ ಡಿಸಿ ಶರಣಬಸಪ್ಪ ಕೊಟೆಪ್ಪಗೋಳ್, ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ ಹಾಗೂ

ರೆಡ್ಡಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ರಾಮರೆಡ್ಡಿಗೌಡ ತಂಗಡಗಿ, ಸಮಾಜದ ರಾಜ್ಯ ಸಮಿತಿ ಕಾರ್ಯದರ್ಶಿ ರಾಚನಗೌಡ ಮುದ್ನಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಸಿದ್ಧರಾಜರೆಡ್ಡಿ, ಕೋಶಾಧ್ಯಕ್ಷ ಮಲ್ಲಣ್ಣಗೌಡ ಹಳಿಮನಿ ಕೌಳೂರ, ಡಾ.ಜಿ.ಡಿ.ಹುನಕುಂಟಿ,ಬಸನಗೌಡ ಪಾಟೀಲ ಚಾಮನಹಳ್ಳಿ, ಬಾಬುಗೌಡ ಸೌರಾಷ್ಟ್ರಹಳ್ಳಿ,ಸಿದ್ಧಣ್ಣಗೌಡ ಕೊಂಕಲ್, ವೀರೇಂದ್ರ ಪಾಟೀಲ ಮೋಸಂಬಿ, ಬಸವಂತರೆಡ್ಡಿ ಮಲ್ಹಾರ, ಡಾ.ರಾಯನಗೌಡ ಬಬಲಾದ, ಅಂಬರೀಶ್ ಪಾಟೀಲ ಬಂದಳ್ಳಿ, ಆರ್.ವಿಶ್ವನಾಥರೆಡ್ಡಿ ಅಬ್ಬೆತುಮಕೂರ, ಸಾಹೇಬರೆಡ್ಡಿ ದೇಶಪಾಂಡೆ, ಸಿದ್ದು ಕಾಮರೆಡ್ಡಿ ಪ್ರದೀಪ ಮಾಲೀಪಾಟೀಲ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!