ಗುಂಜನೂರ -ಧರ್ಮಪುರ ಮಧ್ಯೆ ಅರಣ್ಯ ಬೆಟ್ಟದಲ್ಲಿ ಬೆಂಕಿ | ಅಧಿಕಾರಿಗೆ ಮಾಹಿತಿ ನೀಡಿದರೂ ಡೋಂಟ್ ಕೇರ್ | ಕ್ರಮಕ್ಕೆ ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ರಾಜ್ಯ ಉಪಾಧ್ಯಕ್ಷ ಕೆ.ಬಿ.ವಾಸು ಆಗ್ರಹ

ಯಾದಗಿರಿ: ಗುರುಮಠಕಲ್ ಮಾರ್ಗದ ಮಧ್ಯದಲ್ಲಿ ಅರಣ್ಯ ಬೆಟ್ಟದಲ್ಲಿ ಹತ್ತಿರುವ ಬೆಂಕಿಯನ್ನು ನಂದಿಸುವ ಬಗ್ಗೆ ತ್ವರಿತ ಕ್ರಮ ಕೈಗೊಳ್ಳುಲು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಉಪಾಧ್ಯಕ್ಷ ಕೆ.ಬಿ. ವಾಸು ಆಗ್ರಹಿಸಿದ್ದಾರೆ.

ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ಹೇಳಿದ ಅವರು, 21-02-2025 ರಂದು ಸಂಜೆ ಬೆಂಗಳೂರಿಗೆ ತೆರಳುವ ಸಂದರ್ಭದಲ್ಲಿ ಯಾದಗಿರಿ – ಗುರುಮಠಕಲ್ ಮಾರ್ಗದ ಗುಂಜನೂರು ಮತ್ತು ಧರಂಪುರ್ ಮಧ್ಯದಲ್ಲಿ, ಅರಣ್ಯ ಪ್ರದೇಶದಲ್ಲಿ ಬೆಂಕಿ ಹತ್ತಿರುವುದನ್ನು ಗಮನಿಸಿ, ಈ ಬಗ್ಗೆ ತಕ್ಷಣವೇ ಯಾದಗಿರಿ ಜಿಲ್ಲೆ ಅರಣ್ಯಾಧಿಕಾರಿಗೆ ( ಡಿಎಫ್ಓ) ಅವರಿಗೆ ಫೋನ್ ಮತ್ತು ಮೆಸೇಜ್ ಮೂಲಕ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಆದರೆ, ವಿಪರ್ದಿಯಾಸ ಎಂದರೆ, ಮರಳಿ 23-02-2025 ಬೆಳಗ್ಗೆ 5:00 ಗಂಟೆಗೆ ಪುನಃ ಯಾದಗಿರಿ – ಗುರುಮಠಕಲ್ ಮಾರ್ಗದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ, ಬೆಟ್ಟದಲ್ಲಿ ಬೆಂಕಿ ಇನ್ನೂ ಹತ್ತಿರವಾಗಿರುವುದು ಕಂಡುಬಂದಿದೆ. ಈ ಪ್ರಕರಣದಲ್ಲಿ ಜಿಲ್ಲಾ ಅರಣ್ಯಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವುದು ಸ್ಪಷ್ಟವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಅರಣ್ಯಾಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು, ಅಗ್ನಿಶಾಮಕ ದಳಕ್ಕೆ ಆದೇಶ ನೀಡಿ, ಬೆಟ್ಟದಲ್ಲಿ ಹತ್ತಿರುವ ಬೆಂಕಿಯನ್ನು ತಕ್ಷಣ ಆರಿಸಬೇಕು ಹಾಗೂ ಪರಿಸರ ಮತ್ತು ವನ್ಯಜೀವಿ ರಕ್ಷಣೆಗೆ ಸಂಬಂಧಿಸಿದ ತುರ್ತು ಕಾರ್ಯಚರಣೆಗಳ ನ್ನು ಕೈಗೊಳ್ಳಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ನಾವು ಸಾರ್ವಜನಿ ಕರೊಂದಿಗೆ ಬೆಟ್ಟದ ಹತ್ತಿರ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಲಿದ್ದೇವೆ. ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!