ಯಾದಗಿರಿ ಜಿಲ್ಲೆಯ ಮೈಲಾಪುರ | ಶ್ರೀ ಮೈಲಾರಲಿಂಗೇಶ್ವರ ಜಾತ್ರೆ | ಕುರಿಗಳನ್ನು ಹಾರಿಸುವುದಕ್ಕೆ ನಿಷೇಧಾಜ್ಞೆ ಜಾರಿ

ಯಾದಗಿರಿ :  ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಕುರಿಗಳನ್ನು ಹಾರಿಸುವುದನ್ನು ನಿಷೇಧಾಜ್ಞೆ ಜಾರಿಗೊಳಿಸಿ ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ಆದೇಶ ಹೊರಡಿಸಿದ್ದಾರೆ.

ಕಲ್ಯಾಣ ಕರ್ನಾಟಕ ದ ಆರಾಧ್ಯದೈವ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಯ 2025ರ ಜನವರಿ 12 ರಿಂದ 18 ರ ವರೆಗೆ ನಡೆಯುವುದರಿಂದ ಜಾತ್ರೆಯ ಹಿನ್ನೆಲೆ 2025ರ ಜನವರಿ 14ರ ಮಂಗಳವಾರ ರಂದು ಜಾತ್ರೆಯಲ್ಲಿ ದೇವರ ಪಲಕ್ಕಿಗಾಗಿ ಭಕ್ತರು ಕುರಿಗಳನ್ನು ಹಾರಿಸುವ ವಾಡಿಕೆ. ಪ್ರಾಣಿ ಹಕ್ಕು ಕಾಯ್ದೆ 1960ನ್ನು ಉಲ್ಲಂಘನೆಯಾಗದಂತೆ ಅವಶ್ಯಕ ಕ್ರಮ ವಹಿಸಬೇಕು ಆದೇಶಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನ ಮೈಲಾಪೂರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ದೇವರ ಪಲ್ಲಕ್ಕಿಗೆ ಕುರಿ ಹಾಗೂ ಪ್ರಾಣಿಗಳನ್ನು ಹಾರಿಸುವುದು ಮತ್ತು ಜಾತ್ರೆಯಲ್ಲಿ ಕುರಿ ಮಾರಾಟ, ಖರೀದಿ ಹರಾಜು ಮಾಡುವುದನ್ನು ನಡೆಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವದು ಸೂಕ್ತವೆಂದು ಕಂಡು ಬಂದಿರುವ ಹಿನ್ನೆಲೆ ಯಾದಗಿರಿ ತಾಲೂಕಿನ ಮೈಲಾಪೂರ ಗ್ರಾಮದಲ್ಲಿ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಯು 2025ರ ಜನವರಿ 12 ರಿಂದ 18ರ ವರೆಗೆ ಜರುಗಲಿರುವ ಜಾತ್ರೆಯಲ್ಲಿ ಈ ದಿನಗಳಂದು ದೇವರ ಪಲ್ಲಕ್ಕಿಗೆ ಕುರಿಗಳನ್ನು ಹಾರಿಸುವದನ್ನು ಕಟ್ಟುನಿಟ್ಟಾಗಿ ನಿಷೇಧಿಸಿ ಆದೇಶಿಸಲಾಗಿದೆ.

ಜಾತ್ರೆಯಲ್ಲಿ ಯಾವುದೇ ಕಾರಣಕ್ಕೂ ಪ್ರಾಣಿ ಹಕ್ಕು ಕಾಯ್ದೆ 1960ನ್ನು ಉಲ್ಲಂಘನೆಯಾಗದಂತೆ ನೋಡಿಕೊಳ್ಳುವದು. ಜಾತ್ರೆಯಲ್ಲಿ ಯಾವುದೇ ಕಾರಣಕ್ಕೂ ಪ್ರಾಣಿ ಹಿಂಸೆ ಪ್ರತಿಭಂದಕ ಕಾಯ್ದೆ 1960ನ್ನು ಉಲ್ಲಂಘನೆಯಾಗದಂತೆ ನೋಡಿಕೊಳ್ಳು ವುದು.

ಜಾತ್ರೆಯಲ್ಲಿ ಯಾವುದೇ ಕಾರಣಕ್ಕೂ 2025ರ ಜನವರಿ 12ರ ಮಧ್ಯರಾತ್ರಿಯಿಂದ ಜನವರಿ 18ರ ಮಧ್ಯರಾತ್ರಿಯ ವರೆಗೆ ಗ್ರಾಮಕ್ಕೆ ಹೊಂದಿಕೊಂಡಿರುವ ಹತ್ತಿರ ರಸ್ತೆಗಳಲ್ಲಿ ಚೆಕ್ ಪೋಸ್ಟ್ಗ ಳನ್ನು ನಿರ್ಮಿಸಿ ಕುರಿಗಳು ಜಾತ್ರೆಯಲ್ಲಿ ಪ್ರವೇಶ ವಾಗದಂತೆ ತಡೆಗಟ್ಟುವದು.

ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ದೇವರ ಪಲ್ಲಕ್ಕಿಗೆ ಕುರಿ ಹಾಗೂ ಪ್ರಾಣಿಗಳನ್ನು ಹಾರಿಸುವುದು ಅಥವಾ ಕುರಿಗಳನ್ನು ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹ ಸ್ಥಳದ ಜಮೀನನ್ನು, ನಿವೇಶನವನ್ನು ಸರಕಾರದ ವಶಕ್ಕೆ ಪಡೆಯಲಾಗುವುದು. ಕುರಿ ಗಳನ್ನು ವಾಹನದಲ್ಲಿಯೇ ಮಾರಾಟ ಮಾಡುವುದು ತಿಳಿದು ಬಂದರೆ, ಆ ವಾಹನವನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾ ಗುವುದು ಎಂದು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!