ಜ.20 ರಂದು ನಗರಸಭೆ ಕಟ್ಟಡ ಉದ್ಘಾಟನೆ |ನಗರಸಭೆ ಅಧ್ಯಕ್ಷೆ ಅನಪುರ ಮಾಹಿತಿ
ಯಾದಗಿರಿ : ಕೊನೆಗೂ ನೂತನ ನಗರಸಭೆ ಕಟ್ಟಡದ ಉದ್ಘಾಟನೆಗೆ ಮೂರ್ಹತ ನಿಗದಿಯಾಗಿದೆ. ಸುಸಜ್ಜಿತ ಮತ್ತು ಲಿಫ್ಟ್ ಸೌಲಭ್ಯ ಹೊಂದಿರುವ ಭವ್ಯ ಕಟ್ಟಡದ ಉದ್ಘಾಟನೆಗೆ ಜ. 20 ರಂದು ದಿನಾಂಕ ನಿಗದಿಗೊಳಿಸಲಾಗಿದೆ ಎಂಬ ಮಾಹಿತಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ತಿಳಿಸಿದ್ದಾರೆ.
ಇದರ ನಗರಸಭೆ ಸರ್ವ ಸದಸ್ಯರ ಸಭೆ ಹಾಗೂ ಅಧಿಕಾರಿಗಳ ಪೂರ್ವಭಾವಿಯಾಗಿ ಗುರುವಾರ ಸಂಜೆ ನೂತನ ಕಟ್ಟಡದ ವಿಕ್ಷಣೆ ಮಾಡಿರುವ ಅಧ್ಯಕ್ಷರು ಅಲ್ಲಿನ ಮುಗಿದಿರುವ ಮತ್ತು ಉಳಿದ ಕಾಮಗಾರಿ ಮುಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪೌರಾಡಳಿತ ಸಚಿವ ರಹಿಂಖಾನ್ ಕಟ್ಟಡ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಸೇರಿದಂತೆಯೇ ಜಿಲ್ಲೆಯ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾ ರೆಂದು ಅನಪುರ ತಿಳಿದ್ದಾರೆ.
ಕಾರ್ಯಕ್ರಮ ಅಚ್ಚುಕಟ್ಟಾಗಿ ಆಗಲು ನಗರಸಭೆ ಅಧಿಕಾರಿಗಳ ಸಭೆ ನಡೆಸಿರುವ ಅವರು, ಜಿಲ್ಲೆಯಲ್ಲಿ ಮಾದರಿ ಕಟ್ಟಡ ಇದಾಗಿದ್ದು, ಯಾವುದೇ ಲೋಪ ಆಗದಂತೆಯೆ ಯಶಸ್ಸಿಗೊಳಿಸ ಬೇಕೆಂದು ಅವರು ಸಂಬಂಧಪಟ್ಟವರಿಗೆ ಸೂಚಿಸಿದ್ದಾರೆ. ನಗರಸಭೆ ಉಪಾಧ್ಯಕ್ಷೆ ರೂಕಿಯಾ ಬೇಗಂ, ಪೌರಾಯುಕ್ತ ಉಮೇಶ ಚವ್ಹಾಣ, ಉಪಾದಕ್ಷರಾದ ರುಕಿಯಾ ಬೇಗಂ ಮತ್ತು ನಗರಸಭೆ ಸದಸ್ಯರು ಇದ್ದರು.