ಯಾದಗಿರಿ : ಮಕ್ಕಳಲ್ಲಿ ಬುನಾದಿ ಸಾಮರ್ಥ್ಯ ವೃದ್ಧಿಗೆ ಸರಕಾರ ಪ್ರಸಕ್ತ ವರ್ಷ FLN ಎನ್ನುವ ಕಾರ್ಯಕ್ರಮ ಜಾರಿಗೆ ತಂದಿದ್ದು, ಭಾಷೆ ಹಾಗೂ ಗಣಿತ ವಿಷಯದ ಕಲಿಕೆಯಲ್ಲಿ ತೊಂದರೆ ಅನುಭವಿಸುತ್ತಿರುವ ಮಕ್ಕಳನ್ನು ಗುರುತಿಸಿ ಅವರಿಗೆ ವಿಶೇಷ ಗಮನ ಹರಿಸಿ ಪ್ರಸ್ತುತ ವರ್ಗದ ಸಾಮರ್ಥ್ಯ ಸಾಧಿಸುವಂತೆ ಮಾಡುವುದು, ಆ ಮಕ್ಕಳ ಸಾಧನ ಹಬ್ಬವೇ ಈ ಕಲಿಕಾ ಹಬ್ಬವಾಗಿದೆ ಎಂದು ಸಿಆರ್ ಪಿ ಧರ್ಮರಾಜ ಹೇಳಿದರು.
ಶಹಾಪೂರ ತಾಲೂಕಿನ ನಾಗನಟಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಎಫ್ ಎಲ್ ಎನ್ ಕಲಿಕಾ ಮೇಳದಲ್ಲಿ ಭಾಗವಹಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರು ಶ್ರೀಮತಿ ಸೋನಾ ವಹಿಸಿದ್ದರು. ಉದ್ಘಾಟಕರಾಗಿ ಅರವಿಂದ ಚೌದ್ರಿ ಮುಖ್ಯ ಗುರುಗಳು ಸರಕಾರಿ ಪ್ರೌಢಶಾಲೆ ನಾಗನಟಗಿ, ಮುಖ್ಯ ಅತಿಥಿಗಳಾಗಿ ಶಾಂತ ರೆಡ್ಡಿ ತುಂಬಗಿ ಗೌರವ ಉಪಾಧ್ಯಕ್ಷರು ಸರ್ಕಾರಿ ನೌಕರರ ಸಂಘ ಶಹಾಪುರ, ಧರ್ಮರಾಜ CRP ನಾಗನಟಗಿ, ನಾಗಪ್ಪ ಗ್ರಾಮ ಪಂಚಾಯತಿ ಪ್ರತಿನಿಧಿಯಾಗಿ ಭಾಗವಹಿಸಿದ್ದರು.
ವಿವಿಧ ಶಾಲೆಯ ಮುಖ್ಯಗುರುಗಳಾದ ಶಿವಲಿಂಗಪ್ಪ ಗಂಗನಾಳ, ಶರಣಪ್ಪ ಗೌಡ ಕನ್ಯಾ ಗೋಗಿ ಉಪಸ್ಥಿತರಿದ್ದರು. ಏಳು ಚಟುವಟಿಕೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಕವಿತಾ, ಅಂಕಿತಾ ಶಿಕ್ಷಕಿಯರು ನಿರೂಪಿಸಿದರು. ಸುರೇಶ್ ಸ್ವಾಗತಿಸಿದರು, ನೀಲಪ್ಪ ಶಿಕ್ಷಕರು ವಂದಿಸಿದರು. ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿಗಳು ಹಾಗೂ ಊರಿನ ಪ್ರಮುಖರು ಪಾಲ್ಗೊಂಡಿದ್ದರು.
