ಗುಳೆ ಹೋಗದೆ ನಿಮ್ಮೂರಲ್ಲಿ ನರೇಗಾ ಕೆಲಸ ನಿರ್ವಹಿಸಿ…

ಯಾದಗಿರಿ: ನರೇಗಾ ಯೋಜನೆಯಡಿ ಸರಕಾರ ಗ್ರಾಮೀಣ ಭಾಗದ ಪ್ರತಿ ಕುಟುಂಬಕ್ಕೂ ನೂರು ದಿನಗಳ ಅಕುಶಲ ಕೂಲಿ ಕೆಲಸದ ಖಾತ್ರಿ ನೀಡಿದೆ, ಪ್ರತಿ ಕುಟುಂಬ ನೂರು ದಿನ ಕೂಲಿ ಕೆಲಸದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಯೋಜನಾ ನಿರ್ದೇಶಕ ಸಿ.ಬಿ. ದೇವರಮನಿ ಹೇಳಿದರು.

ಜಿಲ್ಲೆಯ ಯಾದಗಿರಿ ತಾಲೂಕಿನ ಅಲ್ಲಿಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಅಶೋಕ್ ನಗರ ಗ್ರಾಮದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಗತಿಯಲ್ಲಿದ್ದ ನಾಲ ಹೂಳೆತ್ತುವ ಕಾಮಗಾರಿ ಸ್ಥಳಕೆ ಭೇಟಿ ನೀಡಿ ಮಾಹಿತಿ ನೀಡಿದರು.

ನರೇಗಾ ಯೋಜನೆಯಡಿ ಪ್ರತಿದಿನಕ್ಕೆ 349 ರೂ.ಗಳು ಗಂಡು ಹೆಣ್ಣಿಗೆ ಸಮಾನ ಕೂಲಿ ನೀಡಲಾಗುತ್ತದೆ. ಕೆಲಸ ಮಾಡಿದ ಕೂಲಿ ಹಣ ನೇರವಾಗಿ ಕೂಲಿಕಾರರ ಬ್ಯಾಂಕ್ ಖಾತೆಗೆ ಜಮೆಯಾಗು ತ್ತದೆ. ಅಲ್ಲದೇ ಕೂಲಿಕಾರರು ಕೆಲಸ ಮಾಡುವ ಜತೆಗೆ ತಮಗೆ ಅಗತ್ಯವಾದ ಕುರಿ, ಕೊಳಿ, ದನ, ಹಂದಿ ಶೆಡ್ ಹಾಗೂ ಕೃಷಿ ಹೊಂಡ, ಕ್ಷೇತ್ರಬದು, ತೋಟಗಾರಿಕೆ ಬೆಳೆಗಳು ಸೇರಿದಂತೆ ಇತರೆ ಕಾಮಗಾರಿಗಳನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.

ನರೇಗಾ ಯೋಜನೆಯ ಸಮುದಾಯ ಕಾಮಗಾರಿಗಳ ಸ್ಥಳಲ್ಲಿ ಕೂಲಿಕಾರ್ಮಿಕರ ಆರೋಗ್ಯ ತಪಾಸಣೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಹಮ್ಮಿಕೊಂಡು. ಬಿಪಿ, ಶುಗರ್, ಟಿಬಿ, ಮಾನಸಿಕ ಕಾಯಿಲೆ ಸೇರಿದಂತೆ ಇನ್ನಿತರ ಕಾಯಿಲೆ ಕುರಿತು ತಪಾಸಣೆ ಮಾಡಲಾಗುವುದು. ಅಲ್ಲದೆ, ಕಾಮಗಾರಿಗಳ ಸ್ಥಳದಲ್ಲಿ ಕುಡಿಯುವ ನೀರು, ನೆರಳು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಸೇರಿ ಇತರೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ತಿಳಿಸಿದರು.

50 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲರಿಗೆ ಕೆಲಸದ ಪ್ರಮಾಣದಲ್ಲಿ 50% ಮಾಡಿದರು 349 ರೂಪಾಯಿಗಳು ಕೊಡಲಾಗುವುದು. ತಮಗೆ ನಿಗದಿಪಡಿಸಿದ ಕೆಲಸವನ್ನು ಸರಿಯಾದ ಪ್ರಮಾಣದಲ್ಲಿ ಮಾಡಲು ತಿಳಿಸಿದರು.

ಈ ವೇಳೆ ಸಹಾಯಕ ನಿರ್ದೆಶಕರು (ಗ್ರಾ.ಉ) ಮಲ್ಲಣ್ಣ ಸಂಕನೂರ್, ADPC  ಬನಪ್ಪ , DIEC  ಪರಶುರಾಮ್, ಪಂಚಾಯತ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮಿ , ತಾಂತ್ರಿಕ ಸಂಯೋಜಕ ಉಮೇಶ್, ಐಇಸಿ ಸಂಯೋಜಕ ಭೀಮರೆಡ್ಡಿ ವಡಿಗೇರಿ, ತಾಂತ್ರಿಕ ಸಹಾಯಕ ಶ್ರೀ ಶಶಿಕಾಂತ್ , ಬಿಎಫ್‌ಟಿ ಚಂದ್ರಶೇಖರ್, ಗ್ರಾಮ ಪಂಚಾಯತಿ ಸಿಬ್ಬಂದಿ, ಕಾಯಕ ಬಂದುಗಳು, ನರೇಗಾ ಕೂಲಿ ಕಾರ್ಮಿಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!