ನೇತಾಜಿ ಜಯಂತಿ | ಪುತ್ಥಳಿಗೆ ಮಾಲಾರ್ಪಣೆ
ಯಾದಗಿರಿ: ನೇತಾಜಿ ಸುಭಾಷಚಂದ್ರ ಬೋಸ್ ಅವರ ಕ್ರಾಂತಿಕಾರಿ ಬದುಕು ಎಲ್ಲರಿಗೂ ಮಾದರಿ ಎಂದು ಬಿಜೆಪಿ ಯುವ ನಾಯಕ ಮಹೇಶ ರಡ್ಡಿ ಮುದ್ನಾಳ್ ಹೇಳಿದರು.
ನಗರದ ಸುಭಾಷ ಸರ್ಕಲ್ ನಲ್ಲಿ ನೇತಾಜಿ ಜಯಂತಿ ನಿಮಿತ್ಯ ಗುರುವಾರ ಬೆಳಗ್ಗೆ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯೋತ್ಸದಲ್ಲಿ ನೇತಾಜಿ ಯವರ ಕೊಡುಗೆ ಅಪಾರವಾಗಿದೆ. ಗಾಂಧಿಜೀಯವರು ಅಹಿಂಸೆ ಮೂಲಕ ಹೋರಾಟ ಮಾಡಿದರೇ ಇವರು ಕ್ರಾಂತಿ ಮೂಲಕ ಸೆಣಸಾಡಿದ ವೀರಪುತ್ರರಾಗಿದ್ದಾರೆಂದರು.
ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೆನೆ ಎಂಬ ಮಾತು ಆಗ ದೇಶದ ಲಕ್ಷಾಂತರ ಯುವಕರನ್ನು ಬಡಿದೆಬ್ಬಿ ಸಿತ್ತು. ಬ್ರಿಟಿಷರಿಗೆ ಇವರು ಸಿಂಹಸ್ವಪ್ನವಾಗಿದ್ದರು. ಇವರ ಹೆಸರು ಕೇಳಿದರೇ ಅವರು ನಡುಗಿ ಹೋಗುತ್ತಿದ್ದರು, ಅವರ ಹುಟ್ಟು ಅಡಗಿಸಿದ ಪರಾಕ್ರಮಿಯಾಗಿದ್ದರೆಂದು ಬಣ್ಣಿಸಿದರು.
ನಮ್ಮ ತಾತ ಲಿಂ. ವಿಶ್ವನಾಥ ರಡ್ಡಿ ಮುದ್ನಾಳ್ ಅವರು ನೇತಾಜಿ ಯವರ ಬಹುದೊಡ್ಡ ಅನುಯಾಯಿಯಾಗಿದ್ದರು. ಅಂತೆಯೇ ನಗರದಲ್ಲಿ ಅವರ ಹೆಸರು ಅಮರವಾಗಿಡಲು ಮೂರ್ತಿ ಸ್ಥಾಪನೆ ಮಾಡಿದ್ದಾರೆಂದು ಹೇಳಿದರು. ಇಂದಿನ ಯುವಕರು ಇವರ ಆರ್ದಶಗಳನ್ನು ಪಾಲಿಸಬೇಕೆಂದು ನುಡಿದರು.
ಈ ವೇಳೆ ಖಂಡಪ್ಪ ದಾಸನ, ಮುಡ ಮಾಜಿ ಅಧ್ಯಕ್ಷ ರುದ್ರಗೌಡ ಪಾಟೀಲ್,ಎಮ್.ಕೆ ಬಿದನೂರು, ಡಾ.ಶರಣುರಡ್ಡಿ ಕೋಡ್ಲಾ, ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ಬಸವರಾಜ ಮೋಟನಳ್ಳಿ, ರಾಮರೆಡ್ಡಿ ಅಣಿಬಿ ಹೆಡಗಿಮದ್ರಾ, ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೆರಿ,ಸೋಮನಾಥ್ ಜೈನ್, ರಮೇಶ ರಾಠೋಡ,ನರೇಂದ್ರ ಗಾಂಧಿ, ನಿಜಾಂ ನಾಗರ, ಫಕ್ರುದ್ದೀನ್, ರವಿ ಬಾಪುರೆ,ರಮೇಶ ದೊಡಮನಿ,ಮಲ್ಲಿಕಾರ್ಜುನ ಕಟ್ಟಿಮನಿ, ಲಕ್ಷ್ಮಿ ಪುತ್ರ ಮಾಲಿಪಾಟೀಲ,ಬಾಪು ಗೌಡ ಮುಷ್ಠುರ,ಶರಣಗೌಡ ಅಲಿಪುರ, ಮಂಜುನಾಥ ಜಡಿ,ಅಜೇಯ ಸಿನ್ನೂರ, ಮಹಾ ದೇವಪ್ಪ ಗಣಪುರ, ಸುರೇಶ್ ರಾಠೋಡ, ಮಲ್ಲು ಸ್ವಾಮಿ ಗುರು ಸುಣಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನಗರದ ರೆಡ್ಡಿ ಸಾಬ್ ಗೋದಾಮ್ ನ ವೀರನಿಕೇತನ ಕಟ್ಟಡದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ನಿಮಿತ್ತ ‘ಪರಾಕ್ರಮ ದಿನ’ ಗುರುವಾರ ಆಚರಿಸಲಾಯಿತು. ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಗೌಡ ಮುದ್ನಾಳ, ನೇತಾಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮುಖಾಂತರ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ಗುಂಡೇರಾವ್, ಅಯ್ಯಣ್ಣ ಹುಂಡೇಕಾರ್, ಸಿದ್ದಣಗೌಡ ವಡಗೇರಾ, ಖಂಡಪ್ಪ ದಾಸನ್ ಸೇರಿದಂತೆ ಎಮ್ ಆರ್ ಎಮ್ ಶಾಲೆಯ ಶಿಕ್ಷಕರು,ಮಕ್ಕಳು ಭಾಗವಹಿಸಿದ್ದರು.