ಹೋರಾಟಕ್ಕೆ ಜಿಲ್ಲಾಡಳಿತ ಸ್ಪಂದನೆ : ಸೇತುವೆ ದುರಸ್ತಿಗೆ ಮುಂದಾದ ಲೋಕೋಪಯೋಗಿ ಇಲಾಖೆ
ಯಾದಗಿರಿ: ಈ ಹಿಂದೆ ಧಾರಾಕಾರ ಸುರಿದ ಮಳೆಗೆ ಕುಸಿದ ಪಗಲಾಪುರ್ ಸೇತುವೆ ಸೇತುವೆಯ ಮೇಲೆ ಜನತೆ ನಿತ್ಯ ಸಂಚಾರ ಮಾಡುತ್ತಿದ್ದಾರೆ. ಈದೀಗ ಮಳೆಗೂ ಸಹ ಸೇತುವೆ ಇನ್ನಷ್ಟು ಕೊಚ್ಚಿಕೊಂಡು ಹೋಗುತ್ತಲೇ ಇದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆಕ್ರೋಶ ವ್ಯಕ್ತಪಡಿಸಿದ ಹಿನ್ನಲ್ಲೆಯಲ್ಲಿ ಸೇತುವೆ ದುಸ್ಥಿಗೆ ಮುಂದಾದ ಜಿಲ್ಲಾಡಳಿತದ ಕ್ರಮಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
ತಾತ್ಕಾಲಿಕ ವಾಗಿ ಮುರಮ್ ನಿಂದ ರಸ್ತೆ ನಿರ್ಮಿಸಲಾಗಿತ್ತು ಇದರಿಂದ ಜನರಿಗೆ ಅನುಕೂಲಕ್ಕಿಂತ ಅನಾನುಕೂಲ ಜಾಸ್ತಿಯಾಗಿತ್ತು. ಆದರೆ ಈ ಬಗ್ಗೆ ಲೋಕಪಯೋಗಿ ಇಲಾಖೆಗೆ ತಿಳಿಸಿದಾಗ ಹಳೆ ಸೇತುವೆ ದುರಸ್ಥಿ ಮಾಡಿ, ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ಅನುಕೂಲ ಮಾಡಿದ್ದು ಒಳ್ಳೆಯ ಬೆಳವಣಿಗೆ ಎಂದು ಹೇಳಿದ್ದಾರೆ.
ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರದ ಯಾದಗಿರಿ- ಸೈದಾಪುರಗೆ ಹೋಗುವ ಮಾರ್ಗದಲ್ಲಿ ಪಗಲಾಪುರ್ ಪ್ರಮುಖ ಗ್ರಾಮೀಣ ರಸ್ತೆಯ ಸ್ಥಳಕ್ಕೆ ಭೇಟಿ ನೀಡಿದ ನಂತರ ಹೇಳಿಕೆ ನೀಡಿರುವ ಅವರು, ಈ ಹಿಂದೆ ಸುರಿದ ಭಾರಿ ಮಳೆಯಿಂದ ಸೇತುವೆ ಮೇಲೆ ನೀರು ಹರಿದು ಸಂಚಾರ ಸ್ಥತಿಗಿತ್ತವಾಗಿತ್ತು. ಈ ಸೇತುವೆ ಈದೀಗ ಹಲವು ವರ್ಷದಿಂದ ಮಳೆಯ ಕಾರಣದಿಂದಲೇ ಮತ್ತಷ್ಟು ಕೊಚ್ಚಿ ಹೋಗುತ್ತಿದೆ. ಈ ಸೇತುವೆಗೆ ರಸ್ತೆ ನಿರ್ಮಿಸಿ ತಕ್ಷಣ ಹೊಸ ಸೇತುವೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇದರಿಂದ ಈ ಭಾಗದ ರೈತರು ಕೃಷಿ ಚಟುವಟಿಕೆ, ಶಾಲಾ ಕಾಲೇಜ್ ಮಕ್ಕಳಿಗೆ ಗ್ರಾಮಸ್ಥರಿಗೆ ಅನುಕೂಲಕ್ಕಾಗಿ ಶೀಘ್ರದಲ್ಲೇ ಕಾಮಗಾರಿಯನ್ನು ಮುಗಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಹೇಳಿದ್ದಾರೆ.
ತುರ್ತಾಗಿ ಈ ಸೇತುವೆಯನ್ನು ಮೇಲದರ್ಜೆಗೆ ಏರಿಸಿ ಹೊಸ ಸೇತುವೆಯನ್ನು ಅಚ್ಚು ಕಟ್ಟಾಗಿ ನಿರ್ಮಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಅಂದಾಗ ಮಾತ್ರ ಈ ಭಾಗದ ಸಾರ್ವಜನಿಕರಿಗೆ ಸಂಚಾರಕ್ಕೆ ಅನುವುಮಾಡಿ ಕೊಟ್ಟಂತೆ ಆಗುತ್ತದ್ದೆ ಇಲ್ಲದಿದ್ದರೆ ಒಂದಲ್ಲಾ ಒಂದು ದಿನ ಸೇತುವೆ ಸಮಸ್ಯೆ ಉಂಟಾಗುತ್ತಲೇ ಇರುತ್ತದೇ ಅದ ಕಾರಣ ಜಿಲ್ಲಾಡಳಿತ ಹೊಸ ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು. – ಉಮೇಶ್ ಕೆ ಮುದ್ನಾಳ್ ಸಾಮಾಜಿಕ ಹೋರಾಟಗಾರ.