ಯಾದಗಿರಿಯಲ್ಲಿ ಬಿಜೆಪಿ ಪ್ರತಿಭಟನೆ | ರಾಜ್ಯ ಸರ್ಕಾರ ಕೇಂದ್ರದ ಆದೇಶವನ್ನು ಪಾಲಿಸಲಿ

ಯಾದಗಿರಿ: ಪೆಹಲ್ಗಾಮ್‌ ನ ಉಗ್ರರ ದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಭಾರತದಲ್ಲಿರುವ ಪ್ರಜೆಗಳು ಕೂಡಲೇ ದೇಶ ಬಿಟ್ಟು ಪಾಕಿಸ್ತಾನಕ್ಕೆ ತೆರಳಬೇಕು ಎಂಬ ಆದೇಶ ಹೊರಡಿಸಿದ್ದು ಆ ಆದೆಶೇವನ್ನು ಕೂಡಲೇ ರಾಜ್ಯ ಸರಕಾರ ಪಾಲಿಸಿ ಇಲ್ಲಿರುವ ಪಾಕ ಪ್ರಜೆಗಳನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದು ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಒತ್ತಾಯಿಸಿದರು.

ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು  ಬಿಜೆಪಿ ವತಿಯಿಂದ ಅಕ್ರಮವಾಗಿ ನೆಲೆಸಿರುವ ಪಾಕ್‌ ಪ್ರಜೆಗಳನ್ನು ಕೂಡಲೇ ಪಾಕಿಸ್ತಾನಕ್ಕೆ ಕಳಿಸಿ  ಕೊಡಬೇಕೆಂದು ಆಗ್ರಹಿಸಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

ಕಳೆದ ಏ.22ರಂದು ಅಮಾಯಕ ಭಾರತೀಯರನ್ನು ಉಗ್ರರು ಗುಂಡಿಟ್ಟು ಕೊಂದಿದ್ದು ಇಂತಹ ಪೈಶಾಚಿಕ ಕೃತ್ಯಕ್ಕೆ ಕೈಜೋಡಿಸುವ ಪಾಕಿಸ್ತಾನಕ್ಕೆ ತಕ್ಕ, ಪಾಠ ಕಲಿಸಬೇಕಾದರೆ ಕೂಡಲೇ ದೇಶ ಹಾಗೂ ರಾಜ್ಯದಲ್ಲಿರುವ ಪಾಕ ಪ್ರಜೆಗಳನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.

ಅಲೆಮಾರಿ ಅರೆ ಅಲೆಮಾರಿ ನಿಗಮ ಮಾಜಿ ಅಧ್ಯಕ್ಷ ದೆವೀಂದ್ರನಾಥ ನಾದ ಮಾತನಾಡಿ, ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ನಿರಂತರವಾಗಿ ನಡೆಯುತ್ತಲೇ ಇವೆ. ಮಂಗಳೂರಿನ ಸುಹಾಸ್‌ ಶೆಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ ಇದನ್ನೆಲ್ಲಾ ಗಮನಿಸಿದರೆ ನಾವು ಎಲ್ಲಿದ್ದೇವೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮ ಮಾತನಾಡಿ, ದೇಶದಲ್ಲಿ ಕಾನೂನು ಬಾಹಿರವಾಗಿ ವಾಸ ಮಾಡುವರನ್ನು ಕೂಡಲೇ ತೊರೆಯುವಂತೆ ರಾಜ್ಯ ಸರಕಾರ ಕ್ರಮ ಕ್ಕೆಗೊಳ್ಳಬೇಕು ಪಾಕ ಪರವಾಗಿ ಮಾತನಾಡುವ ಹಾಗೂ ಘೋಷಣೆ ಕೂಗುವ ದ್ಯಕಿ ಯಾರೇ ಆಗಿರಲಿ ಅವರ ವಿರುದ್ಧ ರುದ್ಧ‌ದೇಶದ್ರೋಹದ ದೂರು ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾಜಿ ಪ್ರಧಾನ ಕಾರ್ಯದರ್ಶಿ ವೆಂಕಟರೆಡ್ಡಿ ಅಬ್ಬೆತುಮಕೂರು, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಸೋನ್ನದ, ಜಿಲ್ಲಾ ವಕ್ತಾರ ಹಣಮಂತ ಇಟಗಿ, ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಹೊನಿಗೇರಿ, ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೆರಿ, ಪ್ರಭಾವತಿ ಕಲಾಲ್,ಎಮ್.ಕೆ ಬಿರುನೂರ, ಯಾದಗಿರಿ ಗ್ರಾಮೀಣ ಮಂಡಲ ಅಧ್ಯಕ್ಷರ ರಾಜಶೇಖರ ಕಾಡಂನೊರ, ನಗರ ಮಂಡಲ ಅಧ್ಯಕ್ಷರ ಲಿಂಗಪ್ಪ ಹತ್ತಿಮನಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷರ ಶ್ರೀಧರ ಆರ್ ಸಾಹುಕಾರ , ಮಹಿಳಾ‌‌ ಮೋರ್ಚಾ ಜಿಲ್ಲಾಧ್ಯಕ್ಷ ಸುನಿತಾ ಚವ್ಹಾಣ,ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ಚಂದಪ್ಪ ರಾಮಸಮುದ್ರ,ಮೋನೇಶ ಬೆಳಿಗೇರಿ,ಬಸವರಾಜಗೌಡ ಬಿಳಾರ, ಬಸಣಗೌಡ ಕನ್ಯಕೋಳುರ, ರಾಜೇಶ್ ಜೈನ, ಮಲ್ಲಿಕಾರ್ಜುನ ಕಟ್ಟಿಮನಿ, ಗೋಪಾಲ ದಾಸನಕೆರಿ, ಶಕುಂತಲಾ ಜಿ, ಭೀಮಬಾಯಿ ಶೆಂಡಿಗಿ, ಚನ್ನವೀರಯ್ಯ ಸ್ವಾಮಿ,ಮಂಜುನಾಥ ಗುತ್ತಿಗೆದಾರ, ಮಲ್ಲು ಕೊಲಿವಾಡ, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಚಂದ್ರಶೇಖರ ಕಡೆಸೂರ,ನಾಗರಡ್ಡಿ ಇಬ್ರಾಹಿಂಪುರ, ಶ್ರೀಕಾಂತ್ ಸುಂಗಲಕರ್,ಸಲ್ಮಾ ಯಡ್ಡಳ್ಳಿ, ಶರಣ್ಣಪ್ಪ ಟೊಕಾಪುರು, ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು, ಮಂಡಲ ಪದಾಧಿಕಾರಿಗಳು, ವಿವಿಧ ಮೋರ್ಚಾ, ಪ್ರಕೋಷ್ಠದ ಪದಾಧಿಕಾರಿಗಳು, ಮಹಿಳಾ ಘಟಕದ ಪದಾಧಿಕಾರಿಗಳು, ಹಾಗೂ ಪ್ರಮುಖರು,‌ ಕಾರ್ಯಕರ್ತರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!