ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ |  ಮನೆಯಂಗಳದಲ್ಲಿ ಮನದುಂಬಿ ನಮನ ಕಾರ್ಯಕ್ರಮ

ಯಾದಗಿರಿ: ಪತ್ರಕರ್ತರು ವೃತ್ತಿಯಲ್ಲಿ ನೈತಿಕತೆ ಮೈಗೂಡಿಸಿ ಕೊಂಡು ಸಮಾಜದಲ್ಲಿ ಬೆಳಕು ಚೆಲ್ಲುವ ಕೆಲಸ ಪ್ರಾಮಾಣಿಕವಾಗಿ ಮಾಡಬೇಕು ಎಂದು ಹಿರಿಯ ಪತ್ರಕರ್ತ ಸಿ.ಎಂ. ಪಟ್ಟೇದಾರ ಅಭಿಪ್ರಾಯಪಟ್ಟರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸೋಮವಾರ ನಡೆದ ಮನೆಯಂಗಳದಲ್ಲಿ ಮನದುಂಬಿ ನಮನ ಸಮಾರಂಭದಲ್ಲಿ ಸಂಘದಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಜನರು ಮಾಧ್ಯಮದ ಮೇಲೆ ನಿರೀಕ್ಷೆಗೂ ಮೀರಿ ಅಪಾರವಾದ ವಿಶ್ವಾಸ ಇಟ್ಟುಕೊಂಡಿದ್ದಾರೆ. ಹೀಗಾಗಿ ಪತ್ರಕರ್ತರು ಅಳಕಿಲ್ಲದೇ ವರದಿಗಾರಿಕೆ ಮಾಡುವ ಮೂಲಕ ಸಮಾಜವನ್ನು ಎಚ್ಚರಿಸುವಂ ತಹ ಕೆಲಸ ಮಾಡಬೇಕು ಎಂದರು.

ವೃತ್ತಿ ಬದ್ಧತೆಯಿಂದ ಕೆಲಸ ಮಾಡಿದರೆ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಮಾಡಬಹುದು. ಆದರೆ ಪತ್ರಕರ್ತರು ರಾಜಿಯಾಗಿ ಕೆಲಸ ಮಾಡಿದರೆ ಅದು ಪತ್ರಿಕೋದ್ಯಮ ಮತ್ತು ಸಮಾಜಕ್ಕೆ ಮೋಸ ಮಾಡಿದಂತಾಗುತ್ತದೆ ಎಂದು ಹೇಳಿದರು.

ಹಲವು ಸಮಸ್ಯೆಗಳು ನಾಡಿನಲ್ಲಿ ಕಾಡುತ್ತಿವೆ. ಆಡಳಿತ ವ್ಯವಸ್ಥೆ ಗೆ ಜಡತ್ವ ಹಿಡಿದಿದೆ. ಇದನ್ನು ಬಿಡಿಸುವಂತಹ ಕೆಲಸ ಪತ್ರಕರ್ತರು ಪರಿಣಾಮಕಾರಿಯಾಗಿ ಮಾಡಬೇಕು ಎಂದರು.

ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಮಾತನಾಡಿ, ನಾಡಿನ ಪತ್ರಿಕೋದ್ಯಮ ಕ್ಷೇತ್ರಕ್ಕೆ ಹಿರಿಯ ಪತ್ರಕರ್ತರು ಅಮೋಘವಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಕೊಡುಗೆ ಮರೆಯುವಂತಿಲ್ಲ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ್ ಕಲಾಲ್, ಉಪಾಧ್ಯಕ್ಷ ರಾಜು ನಲ್ಲಿಕರ್, ಕಾರ್ಯದರ್ಶಿ ಸಿದ್ದಪ್ಪ ಲಿಂಗೇರಿ, ನಾಗರಾಜ ಕೋಟೆ, ಮಂಜು ಸಗರ್, ಅರುಣ್ ಮಾಸನ್ ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!