ಡಿಸೆಂಬರ್ 31ರ ವರೆಗೆ ಪೆಂಟಾವಲೆಂಟ್ ಲಸಿಕಾ ಅಭಿಯಾನ
ಯಾದಗಿರಿ : ಸಾರ್ವತ್ರಿಕಾ ಲಸಿಕಾ ಕಾರ್ಯಕ್ರಮದಡಿ ಯಾದಗಿರಿ ಜಿಲ್ಲೆಯಾದ್ಯಂತ ಇದೇ ಡಿಸೆಂಬರ್ 31ರ ವರೆಗೆ ಪೆಂಟಾವ ಲೆಂಟ್ ಲಸಿಕಾ ಅಭಿಯಾನ ಚಾಲ್ತಿಯಲ್ಲಿದ್ದು, ಮಗುವಿನ ಆರೋ ಗ್ಯಕರ ಮತ್ತು ಸಮಗ್ರ ಬೆಳವಣಿಗೆಗೆ ಈ ರೋಗ ನಿರೋಧಕ ಲಸಿಕೆ ಹಾಕಿಸುವುದು ಅತ್ಯವಶ್ಯಕವಾಗಿದ್ದು. ಲಸಿಕೆ ವಂಚಿಕ ಮಕ್ಕಳಿಗೆ ಲಸಿಕೆ ಹಾಕಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಶ ಬಿರಾದಾರ ಮನವಿ ಮಾಡಿದ್ದಾರೆ.
ವಿಶೇಷ ಲಸಿಕಾ ಅಭಿಯಾನದಡಿಯಲ್ಲಿ ಪೆಂಟಾ-1 ಲಸಿಕೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ನೀಡಲಾಗುತ್ತಿದೆ. ಕಾರಣ ಪಾಲಕ ಪೋಷಕರು ತಮ್ಮ ಮಕ್ಕಳಿಗೆ ತಪ್ಪದೆ ಪೆಂಟಾ-1 ಲಸಿಕೆ ಹಾಕಿಸಿಕೊಳ್ಳಬೇಕು.
ಪೆಂಟಾವಲೆಂಟ್ ಲಸಿಕೆಯು ಐದು ಮಾರಣಾಂತಿಕ ಖಾಯಿಲೆ ಗಳಾದ ಡಿಫ್ತಿರಿಯಾ, ಪೆರ್ಟುಸಿಸ್, ಟೆಟನಸ್, ಹೆಪಟೈಟಿಸ್ ಬಿ., ಹಿಬ್ (ಹಿಮೋಫಿಲಸ್ ಇನ್ಫ್ಲ್ಯೂಯೆಂಜಾ ಟೈಪ್ ಬಿ) ಯಿಂದ ಮಗುವಿಗೆ ರಕ್ಷಿಸುತ್ತದೆ. ಮಗುವಿಗೆ ಪೆಂಟಾವಲೆಂಟ್ ಲಸಿಕೆ ಯನ್ನು ಸಮಯಕ್ಕೆ ಸರಿಯಾಗಿ ಹಾಕಿಸಬೇಕು. ಬಿಟ್ಟುಹೋದ / ಬಾಕಿ ಉಳಿದ ಲಸಿಕಾ ಡೋಸ್‌ಗಳಿಗೆ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬೇಕೆಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಪ್ರದೇಶದ ಆಶಾ ಹಾಗೂ ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.
ಶಹಾಪುರ ತಾಲೂಕಿನಲ್ಲಿ ಲಸಿಕೆ: ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ತಾಲೂಕಿನಾದ್ಯಂತ ದಿನಾಂಕ 23-12-2024 ರಿಂದ ಲಸಿಕಾ ಅಭಿಯಾನ ಆರಂಭಗೊಂಡಿದ್ದು, ಇದು ಡಿಸೆಂಬರ್ 31 ರವರೆಗೆ ಚಾಲ್ತಿಯಲ್ಲಿರುತ್ತದೆ.
ಮಗುವಿನ ಸಮಗ್ರ ಆರೋಗ್ಯಕರ ಬೆಳವಣಿಗೆಗೆ ರೋಗ ನಿರೋಧಕ ಲಸಿಕೆಗಳು ಬಹಳ ಅತ್ಯವಶ್ಯಕವಿದ್ದು, ಲಸಿಕೆಯಿಂದ ತಪ್ಪಿಹೋದ ಮತ್ತು ಬಿಟ್ಟುಹೋದ ವಂಚಿತ ಮಕ್ಕಳಿಗೆ ಲಸಿಕೆ ಹಾಕಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಮಾನ್ಯ ತಾಲೂಕ ಆರೋಗ್ಯ ಅಧಿಕಾರಿಗಳು ಡಾ.ರಮೇಶ ಗುತ್ತೇದಾರ ತಿಳಿಸಿದರು.
ವಿಶೇಷ ಲಸಿಕಾ ಅಭಿಯಾನದಡಿಯಲ್ಲಿ ಪೆಂಟಾ-1 ಲಸಿಕೆಯನ್ನು ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಉಪಕೇಂದ್ರಗಳ ಎಲ್ಲಾ ಗ್ರಾಮಗಳಲ್ಲಿ ಹಮ್ಮಿಕೊಂಡು ಲಸಿಕೆ ನೀಡಲಾಗುತ್ತಿದ್ದು, ಮಕ್ಕಳ ಪೋಷಕರುಗಳು ತಪ್ಪದೇ ತಮ್ಮ ಮಕ್ಕಳಿಗೆ ಹಾಕಿಸಬೇಕು.
ಪೆಂಟಾವಲೆಂಟ್ ಲಸಿಕೆಯಿಂದ ಗಂಟಲುಮಾರಿ, ನಾಯಿಕೆಮ್ಮು, ಧನುರ್ವಾಯು, ಹೆಪಟೈಟಿಸ್ ಬಿ ಮತ್ತು ಹಿಬ್(ಹಿಮೋಫಿಲಿಸ್ ಇನ್ಫ್ಲೂಯೆಂಜಾ ಟೈಪ್ ಬಿ) ರೋಗಗಳಿಂದ ಮಗುವಿಗೆ ರಕ್ಷಿಸುತ್ತದೆ. ಸಮಯಕ್ಕೆ ಸರಿಯಾಗಿ ಲಸಿಕೆ ಹಾಕಿಸುವುದರ ಮೂಲಕ ಮೇಲಿನ ರೋಗಗಳನ್ನು ತಡೆಗಟ್ಟಬಹುದು.