ಗಮನ ಸೆಳೆಯುತ್ತಿರುವ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ |ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ರಿಂದ ಉದ್ಘಾಟನೆ

ಯಾದಗಿರಿ : ಜಿಲ್ಲಾ ತೋಟಗಾರಿಕೆ ಇಲಾಖೆ ವತಿಯಿಂದ ಗಣರಾಜ್ಯೋತ್ಸವ ಅಂಗವಾಗಿ ಜನವರಿ 26 ರಿಂದ 28ರ ವರೆಗೆ ಲುಂಬಿನ ಉದ್ಯಾನವನದಲ್ಲಿ ಏರ್ಪಡಿಸಲಾದ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನವನ್ನು ನಗರ ಶಾಸಕ ಶ್ರೀ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅವರು  ಉದ್ಘಾಟಿಸಿದರು.

ಫಲಪುಷ್ಪ ಪ್ರದರ್ಶನ ಕಾರ್ಯಕ್ರಮದಡಿ ವಿವಿಧ ಇಲಾಖೆಗಳ ನೆರವಿನಿಂದ ರೈತರು ಬೆಳೆದಿರುವ ವಿವಿಧ ನಮೂನೆಯ ಹೂವು, ಹಣ್ಣು ಮತ್ತು ತರಕಾರಿಯಿಂದ ತಯಾರಿಸಿದ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತಿದೆ. ವಿವಿಧ ನಮೂನೆಯ ಹೂವು, ಹಣ್ಣು ಮತ್ತು ತರಕಾರಿಗಳಿಂದ ವಿವಿಧ ರಾಷ್ಟ್ರೀಯ ನಾಯಕರ ಕಲಾಚಿತ್ರ ಹಾಗೂ ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಯಲ್ಲಿ ಬೆಳೆದಿರುವ ವಿವಿಧ ಜಾತಿಯ ಹಣ್ಣಿನ ಮತ್ತು ಅಲಂಕಾರಿಕ ಸಸ್ಯಗಳ ಪ್ರದರ್ಶನ ಇಲ್ಲಿ ಏರ್ಪಡಿಸಲಾಗಿದೆ.

ಸುಂದರವಾದ ಹೂವುಗಳಿಂದ ತಯಾರಿಸಿದ ನಂದಿ, ಕೆಂಪು ಮೆಣಸಿನಕಾಯಿಯಿಂದ ತಯಾರಿಸಿದ ಪಕ್ಷಿ, ಶ್ರೀ ಬಸವೇಶ್ವರ ಅವರ ಪ್ರತಿಮೆ ಕಲಾಕೃತಿ, ಅಂಬಾರಿ ಹೊತ್ತ ಗಜ, ಹೂಗಳಲ್ಲಿ ಅರಳಿದ ಕನ್ನಡ ನಾಡು, ತೋಟಗಾರಿಕೆ ಹಣ್ಣು,ತರಕಾರಿ ಗಳಿಂದ ತಯಾರಿಸಿದ ವಿವಿಧ ಆಕರ್ಷಕ ಕಲಾಕೃತಿಗಳು ಪ್ರಮುಖ ಆಕರ್ಷಣೆಗಳಾಗಿವೆ.

ಕುಟುಂಬ ಸಮೇತ ನೋಡುವಂತಹ ಆಕರ್ಷಕ ಕಲಾಕೃತಿಗಳು ಗಮನ ಸೆಳೆಯುತ್ತಿವೆ. ವಿವಿಧ ಮಳಿಗೆಗಳನ್ನು ಸ್ಥಾಪಿಸಿದ್ದು, ವೀಕ್ಷಿಸುವಂತೆ ನಗರ ಶಾಸಕರಾದ ಚನ್ನಾರಡ್ಡಿ ಪಾಟೀಲ್ ತುನ್ನೂರ್ ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನಾಯ ಕ ಮಾಲಿಪಾಟೀಲ್, ನಗರಸಭೆ ಅಧ್ಯಕ್ಷ ಲಲಿತಾ ಅನಪುರ, ಜಿಲ್ಲಾಧಿಕಾರಿ ಲವೀಶ್ ಒರಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಪೃಥ್ವಿಕ್ ಶಂಕರ್, ಪ್ರವಾಸೋದ್ಯಮ ಇಲಾಖೆ ಅಧಿಕಾರಿ ರಾಮಚಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!