ಯಾದಗಿರಿ : ಯಾದಗಿರಿ ವಿಭಾಗ ಮಟ್ಟದ ಪಿಂಚಣಿ ಅದಾಲತ್ 2024ರ ಡಿಸೆಂಬರ್ 13 ರಂದು ಬೆಳಿಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ ಎಂದು ಯಾದಗಿರಿ ವಿಭಾಗ ಅಂಚೆ ಅಧೀಕ್ಷಕ ಕೃಷ್ಣ ಮೋಹಿತೆ ಅವರು ತಿಳಿಸಿದ್ದಾರೆ.
ಅದಾಲತ್‌ನ ಕುಂದುಕೊರತೆಗಳನ್ನು ಸಾಮಾನ್ಯ ಅಂಚೆ, ನೋಂದಾಯಿತ ಪೋಸ್ಟ್, ಸ್ಪೀಡ್ ಪೋಸ್ಟ್ ಮೂಲಕ ಕಳಿಸಬಹುದು. ಅಂಚೆ ಲಕೋಟೆ ಮೇಲೆ ಪಿಂಚಣಿ ಅದಾಲತ್ 2024 ಎಂದು ಬರೆದು 2024ರ ಡಿಸೆಂಬರ್ 10ರ ಒಳಗೆ ಸಲ್ಲಿಸಬೇಕು.
ಅಂಚೆ ಸೇವೆಯಿಂದ ನಿವೃತ್ತರಾದ ನೌಕರರ ಪಿಂಚಣಿ ಸೌಲಭ್ಯಗಳ ಹಾಗೂ ಕುಟುಂಬ ಪಿಂಚಣಿ ಸೌಲಭ್ಯಗಳ ವಿಳಂಬ, ಇತ್ಯರ್ಥಕ್ಕೆ ಸಂಬಂಧಿಸಿದ ಕುಂದು ಕೊರತೆಗಳು, ಗ್ರಾಮೀಣ ಅಂಚೆ ಸೇವಕರನ್ನು ಹೊರತು ಪಡಿಸಿ, ಅಂಚೆ ಇಲಾಖೆಯ ನಿವೃತ್ತ ನೌಕರರ ಪಿಂಚಣಿ ಸ್ವೀಕರಿಸುವಲ್ಲಿನ ಅಹವಾಲುಗಳನ್ನು ಇಲಾಖೆ ಆಲಿಸಲಾಗುವುದು.
ಈಗಾಗಲೇ ವಿಭಾಗಗಳು ಕೈಗೆತ್ತಿಕೊಂಡಿರುವ ಪ್ರಕರಣಗಳು ಮತ್ತು ಪಿಂಚಣಿದಾರರು ವಿಭಾಗೀಯ ಮಟ್ಟದಿಂದ ಬಂದ ಪ್ರತಿಕ್ರಿಯೆಯಿಂದ ತೃಪ್ತರಾಗದ ಪ್ರಕರಣಗಳನ್ನು ಮಾತ್ರ ಪಿಂಚಣಿ ಅದಾಲತ್ಗೆ ತರಬಹುದು. ಪಿಂಚಣಿ ಅದಾಲತ್‌ಗೆ ನೇರವಾಗಿ ಕಳುಹಿಸಲಾದ ಹೊಸ ಪ್ರಕರಣಗಳನ್ನು ಅಹವಾಲಿಸಲು ಅವಕಾಶವಿರುವುದಿಲ್ಲ. ಅಹವಾಲುಗಳು, ಕುಂದುಕೊರತೆಗಳನ್ನು ಅಂಚೆ ಅಧೀಕ್ಷಕರು, ಯಾದಗಿರಿ ವಿಭಾಗ ಯಾದಗಿರಿ 585 201ಗೆ ಇಲ್ಲಿಗೆ ಸಲ್ಲಿಸಬೇಕು.
ಪಿಂಚಣಿದಾರರು ತಮ್ಮ ಸ್ವಂತ ವೆಚ್ಚದೊಂದಿಗೆ ಅಂಬೇಡ್ಕರ್ ವೃತ್ತ ಹತ್ತಿರ, ಬಿ.ಎಸ್.ಎನ್.ಎಲ್ ಕಚೇರಿ ಹಿಂದುಗಡೆ, ಅಂಚೆ ಅಧೀಕ್ಷಕರ ಕಛೇರಿ ಯಾದಗಿರಿ ವಿಭಾಗದಲ್ಲಿ ಪಿಂಚಣಿ ಅದಾಲತ್‌ಗೆ ಹಾಜರಾಗಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.