ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಿ – ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ

ಯಾದಗಿರಿ‌ : ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಅವರ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಹಿಂದುಳಿದ ಜಿಲ್ಲೆಯವರು ಎಂಬುವ ವಿದ್ಯಾರ್ಥಿಗಳಲ್ಲಿನ ಮನಸ್ಥಿಯನ್ನು ಬದಲಾಯಿಸಲು ಪ್ರಯತ್ನಿಸುವಂತೆ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಅವರು ಶಿಕ್ಷಕರಿಗೆ ಕರೆ ನೀಡಿದರು.

ನಗರದ ತಿಮ್ಮಣ್ಣ ಹೆಡಗಿಮದ್ರಿ ಇಂಟರ್‌ನ್ಯಾಷನಲ್ ಸ್ಕೂಲ್, ಜಿಲ್ಲಾ ಪಂಚಾಯತ, ಉಪ ನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ಯಾದಗಿರಿ, ಇವರ ಸಂಯುಕ್ತ ಆಶ್ರಯದಲ್ಲಿ 2024-25 ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ಭಾಗದ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿ ಕೆಗಳಲ್ಲಿಯೂ ಮುಂದೆ ಬರಬೇಕು. ಪರೀಕ್ಷೆಗಳಲ್ಲಿ ಫಲಿತಾಂಶ ಹೆಚ್ಚಳಕ್ಕೆ ವಿಶೇಷ ತರಬೇತಿ ನೀಡಿ ಮುಂದೆ ಬರುವಂತೆ ನೋಡಿ ಕೊಳ್ಳಲು ಶಿಕ್ಷಕರು ಹಾಗೂ ಪಾಲಕರಿಗೆ ಕರೆ ನೀಡಿದ ಅವರು ವಿದ್ಯಾರ್ಥಿಗಳೂ ಸಹ ಅಧ್ಯಯನದಲ್ಲಿ ವಿಶೇಷ ಗಮನ ನೀಡಲು ಸಲಹೆ ನೀಡಿದರು.

ಶಿಕ್ಷಕರು ವಿದ್ಯಾರ್ಥಿಗಳಿಗೆ ದೀಪದ ಕರ್ಪುರದಂತೆ ನೆರವಾಗ ಬೇಕು.ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಶೇ.90 ರಷ್ಟು ಅಂಕ ಪಡೆಯುವ ದಿಸೆಯಲ್ಲಿ ಸನ್ನದ್ಧಗೊಳಿಸಿ ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಪ್ರೋತ್ಸಾಹಿಸಲು ಸರ್ಕಾರ ಸದಾ ನೆರವಾಗಿ ನಿಂತಿದ್ದು, ಅಕ್ಷರಜ್ಞಾನ ಹೆಚ್ಚಿಸಲು ಮತ್ತು ಪ್ರೋತ್ಸಾಹಿಸಲು ಈ ಭಾಗದ ಎಲ್ಲ ಜನಪ್ರತಿನಿಧಿಗಳು ಸಹ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ ಒರಡಿಯಾ ಮಾತನಾಡಿ, ಈ ಭಾಗದ ವಿದ್ಯಾರ್ಥಿಗಳಲ್ಲಿನ ಹಿಂದುಳಿದ ಭಾಗದವರು ಎಂಬ ಮನಸ್ಥಿತಿ ಹೋಗಬೇಕು. ಇಲ್ಲಿ ನಡೆಯುತ್ತಿರುವ ಇಂತಹ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿ ಗಳ ಪ್ರತಿಭೆ ಗುರುತಿಸಬೇಕು.ವಿದ್ಯಾರ್ಥಿಗಳೂ ಸಹ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಜಿಲ್ಲೆಯ ಕೀರ್ತಿ ಹೆಚ್ಚಿಸಿ, ಸಾಧನೆ ತೋರುವಂತೆ ಕರೆ ನೀಡಿದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ. ಸಿ.ಎಸ್.ಮುದೋಳ್ ಮಾತನಾಡಿ. ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಇನ್ನೂ ಕೇವಲ 74 ದಿನಗಳು ಉಳಿದಿವೆ. ಕಾರಣ ಹೈಸ್ಕೂಲ್ ಶಿಕ್ಷಕರಿಗೆ ಬೇರೆ ಯಾವ ಕೆಲಸಗಳನ್ನು ಹಚ್ಚುವುದು ಬೇಡ ಎಂದು ಹೇಳಿ, ದಿನನಿತ್ಯ ವಿದ್ಯಾರ್ಥಿಗಳ ಪ್ರತಿಭೆ, ಫಲಿತಾಂಶ ಸುಧಾರಣೆಗೆ ಗಮನ ನೀಡಲು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಡಯಟ್ ಪ್ರಾಂಶುಪಾಲರು ಹಾಗೂ ಉಪನಿರ್ದೇಶಕರಾದ ಜಿ.ಎಂ.ವ್ರೃಷಬೆಂದ್ರಯ್ಯ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿನಾಯಕ ಮಾಲಿ ಪಾಟೀಲ್, ಕರ್ನಾಟಕ ರಾಜ್ಯ ಪ್ರೌಡ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ ಕುಮಾರ ಕೆಂಭಾವಿ, ತಾಲೂಕು ಅಧ್ಯಕ್ಷ ಶರಣಗೌಡ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಹಣಮಂತ ಹೊಸಮನಿ, ಲಿಪಿಕ ನೌಕರರ ಸಂಘದ ಅಧ್ಯಕ್ಷ ಆದೆಪ್ಪ ಬಾಗ್ಲಿ, ತಿಮ್ಮಣ್ಣ ಹೆಡಗಿಮದ್ರಿ ಇಂಟರ್ ನ್ಯಾಷನಲ್ ಸ್ಕೂಲ್ ಅಧ್ಯಕ್ಷ ಅನೀಲ ಕುಮಾರ ಹೆಡಗಿಮದ್ರಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಬಿ ಪಾಟೀಲ್, ಶಿಕ್ಷಣ ಸಂಯೋಜಕ ಕಿಶನ್ ಪವಾರ್, ವಿಷಯ ಪರಿವಿಕ್ಷಕ ಬಸನಗೌಡ, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಚಿತ್ರಶೇಖರ , ಸ್ಥಳೀಯ ಸಿಆರ್ ಪಿ ರವಿಚಂದ್ರ ನಾಯ್ಕಲ್, ಮುಖ್ಯಗುರುಗಳಾದ ಪುಷ್ಪಾಂಜಲಿ ಮಹಾಬಳೆಶ್ವರ, ಸಾನೀಯಾ ಸೈಯದ್ ಸೇರಿದಂತೆ ವಿವಿಧ ಶಾಲೆಯ ಮಕ್ಕಳು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!