ಸಚಿವರಿಂದ ಜಿಲ್ಲೆಯ ಐವರು ರೈತರಿಗೆ ನೂತನ ಪಹಣಿ ವಿತರಣೆ

ಯಾದಗಿರಿ : ಯಾದಗಿರಿ ತಾಲೂಕಿನ 5 ಜನ ರೈತರಿಗೆ ಸೋಮವಾರ ಹೊಸ ಹಿಸ್ಸಾ ಸರ್ವೆ ನಂಬರ್ ನ ಪಹಣಿಯನ್ನು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪುರ ಅವರು ವಿತರಿಸಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹೊಸ ಪಹಣಿ ವಿತರಣೆ ಕುರಿತು ಸಭೆ ನಡೆಸಿ ,ಯಾದಗಿರಿ ತಾಲೂಕಿನ ಕಿಲ್ಲನ್ ಕೇರಾ,ಗೌಡಗೇರಾ,ಬೊಮ್ಮರಾಲ್ ದೊಡ್ಡಿ, ಬಾಲಚೇಢ ರೈತರಿಗೆ ಜಮೀನಿನ ಪ್ರತ್ಯೇಕ ಪಹಣಿ ಪತ್ರಿಕೆ, ಫಾರ್ಮ್-10, ಆಕಾರ್ ಬಂದ್, ಸ್ಕೆಚ್ ನಕಾಶೆ ವಿತರಣೆ ಮಾಡಿದರು.

ಯಾದಗಿರಿ ತಾಲೂಕಿನ ಕಿಲ್ಲನಕೇರಾ ಗ್ರಾಮದ ಸ.ನಂ22*/* ಒಟ್ಟು ಕ್ಷೇತ್ರ 4ಎಕರೆ,/33 ಗುಂಟೆ ಇದ್ದು- ಸದರಿ ಜಮೀನು ಮಲ್ಲಪ್ಪ ತಂದೆ ತಿಮ್ಮಪ್ಪ ಹೆಸರಿನಲ್ಲಿ 2003ನೇ ಸಾಲಿನಲ್ಲಿ 3 ಎಕರೆ ಜಮೀನು ಮಂಜೂರಾತಿಯಾಗಿದೆ. ಈ ಜಮೀನು ಸದರಿಯವರ ಹೆಸರಿನಲ್ಲಿಯೇ ಪಟ್ಟಾ ಇರುತ್ತದೆ. ಈ ಜಮೀನಿಗೆ ಫಾರಂ.ನಂ10 ಮಾಡಿ ಸ.ನಂ.22*/*2ಎಂದು ಹೊಸ ಹಿಸ್ಸಾ ಸರ್ವೆ ನಂ. ಮಾಡಿದ್ದು, ಬಾಕಿ ಉಳಿದ 1-33ಎಕರೆ/ ಗುಂಟೆ ಜಮೀನು. 22/ */1 ಸಾರ್ವಜನಿಕ ರುದ್ರಭೂಮಿಗಾಗಿ ಭೂ ಮಂಜೂರಾತಿಯಾಗಿದೆ.

ಗೌಡಗೇರಾ ಗ್ರಾಮದ ಸ.ನಂ171/* /* ರ ಒಟ್ಟು ಕ್ಷೇತ್ರ 11-05 ಎಕರೆ . ಗುಂ ಇದ್ದು ಇದರಲ್ಲಿ 4–37ಎಕರೆ, ಗುಂ ಜಮೀನು ಮಲ್ಲಪ್ಪ ತಂದೆ ಬುಗಪ್ಪ ರವರ ಹೆಸರಿನಲ್ಲಿ 1977-78ನೇ ಸಾಲಿನಲ್ಲಿ ಭೂ ಮಂಜೂರಾತಿಯಾಗಿರುತ್ತದೆ. ಸದರಿ ಜಮೀನು ನಾರಾಯಣ ತಂದೆ ಬೀರಪ್ಪ ಹಾಗೂ ಮಲ್ಲಯ್ಯ ರವರ ಜಂಟಿ ಪಟ್ಟಾ ಇದ್ದು, ಸದರಿಯವರ ಜಮೀನಿಗೆ ಫಾರಂ 10 ಮಾಡಿ ಸಿ.ನಂ 171/*/ *2ಎಂದು ಹೊಸ ಹಿಸ್ಸಾ ಸರ್ವೆ ನಂ ನೀಡಲಾಗಿದೆ.

ಗೌಡಗೇರಾ ಗ್ರಾಮದ ಸ.ನಂ 297/* /* ರ ಒಟ್ಟು ಕ್ಷೇತ್ರ 3-10 ಎಂ.ಗುಂ ಇದ್ದು, ಇದರಲ್ಲಿ 2-13ಎ.ಗುಂ ಜಮೀನು ಶರಣಮ್ಮ ಗಂಡ ಭದ್ರಪ್ಪ ಭೋಳಿ ಅವರು ಹೆಸರಿನಲ್ಲಿ 2003-04ರಲ್ಲಿ ಮಂಜೂರಾತಿಯಾಗಿದೆ. ಈ ಜಮೀನು ಸದರಿಯರ ಹೆಸರಿನಲ್ಲಿ ಪಟ್ಟಾ ಇದ್ದು,ಈ ಜಮೀನಿಗೆ ಫಾರಂ.ನಂ10ಮಾಡಿ ಸಿ.ನಂ297/* /* 2 ಎಂದು ಹೊಸ ಹಿಸ್ಸಾ ಸ.ನಂ ನೀಡಲಾಯಿತು.

ಬೊಮ್ಮರಾಲ್ ದೊಡ್ಡಿ ಗ್ರಾಮದ ಸ.ನಂ21/* /* ಒಟ್ಟು ಕ್ಷೇತ್ರ 1-07 ಎಂ/ ಗುಂಟೆ ಇದ್ದು,0-27 ಎಂ.ಗುಂ ಜಮೀನು ಮಗದುಂ ಅಲಿ ತಂದೆ ಖತಲಸಾಬ ರವರ ಹೆಸರಿನಲ್ಲಿ 1991-92ನೇ ಸಾಲಿನಲ್ಲಿ ಭೂ ಮಂಜೂರಾತಿಯಾಗಿದೆ. ಪ್ರಸ್ತುತ ಈ ಜಮೀನು ಸದರಿಯರ ಹೆಸರಿನಲ್ಲಿ ಪಟ್ಟಾ ಇದ್ದು,ಇವರಿಗೆ ಫಾರಂ 10ಮಾಡಿ ಸಿ.ನಂ.21/*/2ಎಂದು ಹೊಸ ಹಿಸ್ಸಾ ಸರ್ವೆ ನಂ ನೀಡಲಾಗಿದೆ.

ಬಾಲಚೇಢ ಗ್ರಾಮದ ಸ.ನಂ.41ರ ಒಟ್ಟು ಕ್ಷೇತ್ರ 1-18ಎ/ ಗುಂಟೆ ಇದ್ದು,ಈ ಜಮೀನು ಮಲ್ಲಪ್ಪ ತಂದೆ ಹನುಮಂತ ರವರ ಹೆಸರಿನಲ್ಲಿ 1977ನೇ ಸಾಲಿನಲ್ಲಿ ಭೂ ಮಂಜೂರಾತಿಯಾಗಿದೆ. ಸದರಿಯವರ ಹೆಸರಿನಲ್ಲಿ ಪಟ್ಟಾ ಇದ್ದು, ಫಾರಂ 10ಮಾಡಿ ಸಿ.ನಂ41/*/ 2ಎಂದು ಹೊಸ ಹಿಸ್ಸಾ ಸ.ನಂ ನ ಪಹಣಿಯನ್ನು ಇಂದು ಸಚಿವರು ವಿತರಿಸಿದರು.

ಇತ್ತೀಚೆಗೆ ರಾಜ್ಯ ಸರ್ಕಾರ ತನ್ನ ಆಯವ್ಯಯದಲ್ಲಿ ಘೋಷಿಸಿದಂತೆ ಕಳೆದ ನವೆಂಬರ್ 25 ರಂದು ದರಖಾಸ್ತು ಪೋಡಿ ದುರಸ್ತಿಯ ಕಾರ್ಯವಿಧಾನಗಳಲ್ಲಿ ಸರಳೀಕರಣಗೊಳಿಸಿದ ಪರಿಣಾಮ ಇಂದಿಲ್ಲಿ ರೈತರು ತಮ್ಮ ಹೆಸರಿಗೆ ಪ್ರತ್ಯೇಕ ಪಹಣಿ ಪತ್ರಿಕೆ, ಫಾರ್ಮ್-10, ಆಕಾರ್ ಬಂದ್, ಸ್ಕೆಚ್ ನಕಾಶೆ ಪಡೆಯುವ ಭಾಗ್ಯ ದೊರೆಯಿತು.

ರೈತರಿಗೆ ತಮ್ಮ ಜಮೀನಿನ ಹಕ್ಕಿನ ದಾಖಲೆಗಳು ಸಿಕ್ಕಂತಾಗಿದೆ. ಇದರಿಂದ ಮೂರು ದಶಕದ ಸಮಸ್ಯೆ ನಿವಾರಣೆಯಾಗಿ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಡಿ.ಸಿ. ಡಾ.ಸುಶೀಲ.ಬಿ ಮಾತನಾಡಿ, ರಾಜ್ಯ ಸರ್ಕಾರವು ದರಖಾಸ್ತು ಪೋಡಿ ವಿತರಣೆಗೆ ಸರಳೀಕರಣಗೊಳಿಸಿದ್ದರಿಂದ ಇಂದು ಈ ರೈತರಿಗೆ ಹೊಸ ಪಹಣಿ ದೊರೆಯುತ್ತಿದೆ ಎಂದು ಹೇಳಿದರು.

ಸರ್ಕಾರಿ ಸೌಲಭ್ಯ ಪಡೆಯಲು ಸಹಕಾರಿಯಾಗಲಿದೆ: ಹಲವು ವರ್ಷದ ಸಮಸ್ಯೆಗೆ ಈಗಿನ ಸರ್ಕಾರ ಪರಿಹಾರ ನೀಡಿದೆ. ಇದರಿಂದ ಸಾಲ-ಸೌಲಭ್ಯ ಪಡೆಯಲು ಸಹಾಯವಾಗಲಿದೆ. ಎಲ್ಲದಕ್ಕೂ ಮಿಗಿಲಾಗಿ ನಮ್ಮ ಹೆಸರಿಗೆ ಪ್ರತ್ಯೇಕ ಪಹಣಿ, ಹಿಸ್ಸಾ ದಾಖಲೆಗಳು ಬಂದಿದು ತುಂಬಾ ಸಂತೋಷವಾಗಿದೆ ಎಂದು ರೈತರು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಚನ್ನಾರೆಡ್ಡಿ ಪಾಟೀಲ್ ತುನ್ನೂರ್, ಶರಣಗೌಡ ಕಂದಕೂರ, ಜಿ.ಪಂ. ಸಿಇಓ ಲವೀಶ ಒರಡಿಯಾ, ತಹಸೀಲದಾರ್ ಸುರೇಶ್ ಅಂಕಲಗಿ, ಎಡಿಎಲ್ಆರ್ ವೆಂಕಟೇಶ ಸೇರಿದಂತೆ ಕಂದಾಯ, ಭೂಮಾಪನಾ ಇಲಾಖೆಯ ಸಿಬ್ಬಂದಿಗಳು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!