ರೈತರ ಸಮಸ್ಯೆ ಪರಿಹಾರಕ್ಕೆ ಶಾಸಕರಿಗೆ ಜಯಕರ್ನಾಟಕ ಮನವಿ: ತಕ್ಷಣ ಕ್ರಮಕ್ಕೆ ಅಧಿಕಾರಿಗಳಿಗೆ ಶಾಸಕರ ಸೂಚನೆ

ಯಾದಗಿರಿ: ಪಟ್ಟಣದ ಧೋಭಿ ಘಾಟ ವಲಯದಲ್ಲಿ ರೈತರ ಬೋರ್ ವೆಲ್‌ಗಳಿಗೆ ಅಳವಡಿಸಿರುವ (ಟಿ.ಸಿ) ಓವರಲೋಡ್ ಆಗಿದ್ದು ರೈತರಿಗೆ ನೀರಿನ ಸಮಸ್ಯೆಯಾಗಿದು ಹೊಸದಾಗಿ ನೂತನ (ಟಿ.ಸಿ) ಅಳವಡಿಸಿಕೊಡುವಂತೆ ಜಯ ಕರ್ನಾಟಕ ಸಂಘಟನೆ ಮನವಿ ಮಾಡಿದೆ.

ಈ ಕುರಿತು ರೈತರೊಂದಿಗೆ ಶಾಸಕ ಶರಣಗೌಡ ಕಂದಕೂರು ಅವರನ್ನು ಭೇಟಿ ಮಾಡಿದ ಸಂಘಟನೆ ತಾಲ್ಲೂಕು ಅದ್ಯಕ್ಷ ನಾಗೇಶ ಗದ್ದಿಗಿ ಸಮಸ್ಯೆ ವಿವರಿಸಿದರು.

ಗುರುಮಠಕಲ್ ಪಟ್ಟಣದ ಧೋಭಿ ಘಾಟ ವಲಯದಲ್ಲಿ ರೈತರ ಐಪಿ ಸೆಟ್ ನಿಮಿತ್ಯ ಅಳವಡಿಸಿರುವ (ಟಿ.ಸಿ)ಗೆ ಸುಮಾರು 30-35 ಬೋರ್ ವೆಲ್ ಗಳಿಗೆ ಸಂಪರ್ಕ ಪಡಿದುಕೊಂಡಿರುವು ದರಿಂದ (ಟಿ ಸಿ) ಗೆ ಓವರಲೋಡ್ ಆಗಿರುವುದರಿಂದ ಪದೇ ಪದೇ ವಿದ್ಯುತ್ ಪರಿವರ್ತಕ ಕೆಟ್ಟು ಹೋಗುತ್ತಿದೆ.

ಇದರಿಂದ ಸಾಲ ಸೋಲ ಮಾಡಿ ಬೆಳೆ ಬೆಳೆಯುತ್ತಿರುವ ರೈತರ ಬೆಳೆಗಳು ಸಂಪೂರ್ಣ ಒಣಗಿ ಹೋಗುತ್ತಿವೆ, ರೈತರಿಗೆ ದಿಢೀರನೆ ಸಂಕಷ್ಟ ಎದುರಾಗಿ ಕಷ್ಟ ನಷ್ಟ ಆಗುತ್ತಿದೆ ಎಂದು ಮನವರಿಕೆ ಮಾಡಿದರು.

ಈ ಸಮಸ್ಯೆ ರೈತರು ಅಧಿಕಾರಿಗಳ ಗಮನಕ್ಕು ತಂದರು ಸಹ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಆದ ಕಾರಣ ಅನ್ನದಾತ ರೈತರ ಬೆಳೆಗಳು ಬಾಡದಂತೆ ಈ ಕೂಡಲೇ ನೀರಿನ ಸಮಸ್ಯೆ ಯಾಗದಂತೆ ಹೊಸದಾಗಿ ಇನ್ನೊಂದು ನೂತನ 63 ಕೆ.ವಿ (ಟಿ.ಸಿ) ಅಳವಡಿಸಿ ಕೊಡಬೇಕೆಂದು ಮನವಿ ಮಾಡಿದರು.

ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಶಾಸಕರು ಸಂಬಂಧಪಟ್ಟ ಅಧಿಕರಿಗಳಿಗೆ ದೂರವಾಣಿ ಕರೆ ಮಾಡಿ ತಕ್ಷಣವೇ ರೈತರ ಸಮಸ್ಯೆ ಇತ್ಯರ್ಥಪಡಿಸಬೇಕೆಂದು ಸೂಚಿಸಿದರು.

ಈ ಸಂದರ್ಭದಲ್ಲಿ ರೈತ ವಿಭಾಗದ ಅಧ್ಯಕ್ಷ ರಾಮುಲು ಕೊಡಗಂಟಿ, ಗೌರವಾಧ್ಯಕ್ಷ ಮಲ್ಲಿಕಾರ್ಜುನ ಕಾಕಲವಾರ, ಉಪಾಧ್ಯಕ್ಷ ಕಾಶಪ್ಪ ದೊರೆ, ಪ್ರ. ಕಾರ್ಯದರ್ಶಿ ನರಸಿಂಹಲು, ರೈತರಾದ ಮಹಿಪಾಲರಡ್ಡಿ, ಕಾಶಪ್ಪ, ಹಣಮಂತು, ನಾರಾಯಣ, ಅಂಜಪ್ಪ, ಶರಣಪ್ಪ, ವೆಂಕಟಪ್ಪ ಮಡೆಪಲ್ಲಿ, ಬುಗ್ಗಪ್ಪ ಅಳೆಗಾರ, ವೆಂಕಟಪ್ಪ ಅವಂಗಪುರ, ಲಕ್ಷö್ಮಪ್ಪ, ಪುರುಷೋತ್ತಮ, ರಾಮು ಪ್ಯಾಟ್ಲಾ ಸೇರಿ ಹಲವಾರು ರೈತರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!