ರಾಜಧಾನಿ ಎಕ್ಸ್ ಪ್ರೆಸ್ ನಿಲುಗಡೆಗೆ ರೈಲ್ವೆ ರಾಜ್ಯ ಸಚಿವರ ಹಸಿರು ನಿಶಾನೆ | ಜನರ ಬಹುದಿನಗಳ ಬೇಡಿಕೆ ಈಡೇರಿಕೆ
ಯಾದಗಿರಿ: ರೈಲು ಸಂಖ್ಯೆ 22692 ಹಜರತ್ ನಿಜಾಮುದ್ದೀನ್ – KSR ಬೆಂಗಳೂರು ರಾಜಧಾನಿ ಎಕ್ಸ್ಪ್ರೆಸ್ ಯಾದಗಿರಿ ನಿಲ್ದಾಣ ದಲ್ಲಿ ನಿಲುಗಡೆಗೆ ರೈಲ್ವೆ, ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ರಿಮೋಟ್ ವೀಡಿಯೋ ಮೂಲಕ ಹಸಿರು ನಿಶಾನೆ ತೋರಿಸಿದರು.
ಬಳಿಕ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯವು ಎಲ್ಲಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಅಭಿವೃದ್ಧಿಯನ್ನು ಸಾಧಿಸುತ್ತಿದೆ.
2024-25ರಲ್ಲಿ ಕರ್ನಾಟಕ ರಾಜ್ಯಕ್ಕೆ ರೈಲ್ವೆ ಬಜೆಟ್ ಅನುದಾನ 7560 ಕೋಟಿ ರೂ.ಗಳಲ್ಲಿ ರೈಲ್ವೆ ಜಾಲವು ಹೊಸ ಮಾರ್ಗಗಳು, ವಿದ್ಯುದ್ದೀಕರಣ, ಸಾಮರ್ಥ್ಯ ವರ್ಧನೆ ಇತ್ಯಾದಿಗಳ ವಿಷಯದಲ್ಲಿ ಭಾರಿ ಅಭಿವೃದ್ಧಿ ಕಂಡಿದೆ ಎಂದು ಹೇಳಿದರು.
ಯಾದಗಿರಿ ನಿಲ್ದಾಣದಲ್ಲಿ ರಾಜಧಾನಿ ಎಕ್ಸ್ಪ್ರೆಸ್ ನಿಲುಗಡೆ ಯಿಂದ ಜನರ ಬಹುದಿನಗಳ ಆಕಾಂಕ್ಷೆ ಈಡೇರಿದೆ ಎಂದು ಹೇಳಿದರು. ಯಾದಗಿರಿಯ ಸುತ್ತಮುತ್ತಲಿನ ಜನರು ಮುಖ್ಯ ವಾಗಿ ದೇಶದ ವಿವಿಧ ಸ್ಥಳಗಳಿಗೆ ಪ್ರಯಾಣಿಸಲು ರೈಲು ಮಾರ್ಗ ಅವಲಂಬಿಸಿದ್ದಾರೆ.
ಹೆಚ್ಚಿನ ಜನರು ವಿವಿಧ ಉದ್ದೇಶಗಳಿಗಾಗಿ ಬೆಂಗಳೂರಿಗೆ ಪ್ರಯಾ ಣಿಸುತ್ತಾರೆ. ರಾಜಧಾನಿ ಎಕ್ಸ್ಪ್ರೆಸ್ ರೈಲು ಈ ಪ್ರದೇಶದ ಜನರಿಗೆ ದೆಹಲಿ ಮತ್ತು ಬೆಂಗಳೂರಿಗೆ ಪ್ರಯಾಣಿಸಲು ಅನುಕೂಲವಾಗ ಲಿದೆ ಎಂದರು.
ಇದಲ್ಲದೆ, ಪ್ರಧಾನ ಮಂತ್ರಿಗಳು ಮತ್ತು ರೈಲ್ವೆ ಸಚಿವರ ಮಾರ್ಗದ ರ್ಶನದಲ್ಲಿ ಕಲ್ಯಾಣ ಕರ್ನಾಟಕದ ಮೂರು ಪ್ರಮುಖ ರೈಲು ನಿಲ್ದಾಣಗಳಾದ ಯಾದಗಿರಿ, ರಾಯಚೂರು ಮತ್ತು ಬೀದರ್ ನಿಲ್ದಾಣಗಳನ್ನು ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಮರು ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.
ಪ್ರಯಾಣಿಕರಿಗೆ ಅನುಕೂಲವಾಗುವಂತೆ ಎಸ್ಕಲೇಟರ್ಗಳು, ಲಿಫ್ಟ್ಗಳು, ಪಾರ್ಕಿಂಗ್, ಶೌಚಾಲಯಗಳು, ಕಾಯುವ ಕೊಠಡಿ ಗಳು, ಫುಟ್ ಓವರ್ ಬ್ರಿಡ್ಜ್ಗಳಂತಹ ಎಲ್ಲಾ ಸೌಲಭ್ಯಗಳು ಮತ್ತು ಸೌಕರ್ಯಗಳನ್ನು ನಿಲ್ದಾಣದಲ್ಲಿ ಒದಗಿಸಲಾಗಿದೆ ಎಂದು ಹೇಳಿದರು.
ಇದಲ್ಲದೆ, ಕಲಬುರಗಿ ಎಸ್ಎಂವಿಟಿ ಬೆಂಗಳೂರು ನಡುವೆ ಚಲಿಸುವ ಸ್ವದೇಶಿ ವಿನ್ಯಾಸದ ಅತ್ಯಾಧುನಿಕ ವಂದೇ ಭಾರತ್ ರೈಲಿಗೆ ಯಾದಗಿರಿ ನಿಲ್ದಾಣದಲ್ಲಿ ನಿಲುಗಡೆ ಒದಗಿಸಲಾಗಿದೆ ಎಂದು ಹೇಳಿದರು. ಯಾದಗಿರಿ – ರಾಯಚೂರು ಸಂಸದ ಜಿ.ಕುಮಾರ ನಾಯಕ್ ವಿಡಿಯೋ ಲಿಂಕ್ ಮೂಲಕ ಕಾರ್ಯ ಕ್ರಮದಲ್ಲಿ ಭಾಗಿಯಾದರು.
ಈ ವೇಳೆ ಯಾದಗಿರಿ ರೈಲು ನಿಲ್ದಾಣದಲ್ಲಿ ನಡೆದ ಸಮಾರಂಭ ದಲ್ಲಿ ಶಾಸಕರಾದ ಶರಣಗೌಡ ಕಂದಕೂರ, ಚನ್ನಾರೆಡ್ಡಿ ಪಾಟೀ ಲ್ ತುನ್ನೂರ, ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಹಾಗೂ ಇತರ ಗಣ್ಯರು ಸೇರಿದಂತೆ ಗುಂತಕಲ್ ಪ್ರಭಾರಿ ಡಿಆರ್ ಎಂ ರಾಮಕೃಷ್ಣ ಮತ್ತು ಇತರ ರೈಲ್ವೆ ಅಧಿಕಾರಿಗಳು ಇದ್ದರು.