ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿದ | ಗಿರಿ ಜಿಲ್ಲೆ ಪ್ರತಿಭೆ ಸ್ಮಿತಿಕಾ ವಿ. ಹಿರೆನೂರ್

ಯಾದಗಿರಿ: ನಗರದ ದೋಖಾ ಜೈನ್ ಶಾಲೆಯ 5 ನೇ ತರಗತಿ ಯ ವಿದ್ಯಾರ್ಥಿ ಸ್ಮಿತಿಕಾ ವಿ. ಹಿರೆನೂರ್ ಕಳೆದ ಜ. 3 ರಿಂದ 5 ವರೆಗೆ ಇಂದೋರನಲ್ಲಿ ಆಯೋಜಿಸಿದ್ದ ಜೆಎಮ್ ಐನ ಭಾರತೀಯ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ಕರ್ನಾಟಕದ ಸಂಸ್ಕ್ರತಿ ಪ್ರತಿಬಿಂಬಿಸುವ ಶಿಲಾ ಬಾಲಿಕೆ ವೇಷದಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.

ಈ‌ ವಿದ್ಯಾರ್ಥಿನಿ ಭರತ ನಾಟ್ಯ, ಶಾಸ್ರೀಯ ನೇತ್ಯ ಹಾಗೂ ಪಾಶ್ಚಾತ್ಯ ನೃತ್ಯ, ಕಲಾವಿದೆ ಯಾಗಿದ್ದು, ಇವರ ಕಲೆಗೆ ವಿವಿಧ ಪ್ರಶಸ್ತಿಗಳು ಲಭಿಸಿವೆ.

ಹಲವು ಪ್ರಶಸ್ತಿ ಗರಿ: 2023ರಲ್ಲಿ ಬೆಂಗಳೂರಿನಲ್ಲಿ ಭಾರತ ಬೂಕ್ ಆಫ್ ರೆಕಾರ್ಡ್, 2024 ರಲ್ಲಿ ಗೋವಾ ಅಂತರಾಷ್ಟ್ರಿಯ ನೃತ್ಯ ಸ್ಪರ್ಧೆಯಲ್ಲಿ ಪ್ರೆಸಿಡೆಂಟ್ ಆವಾರ್ಡ, ಜಿಲ್ಲಾ ಮಟ್ಟದ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ, 2024ರಲ್ಲಿ ಪ್ರೈಡ್ ಆಫ್ ಕರ್ನಾಟಕ ಅವಾರ್ಡ್, ಕರ್ಣಾಟಕ ರಕ್ಷಣಾ ವೇದಿಕೆ ವತಿಯಿಂದ ಕರ್ನಾಟಕ ರತ್ನ ಆವಾರ್ಡಾ ಪ್ರಶಸ್ತಿ, ದಿಲದಾರ್ ಸ್ಟಾರ್ಟ್ ಮೂವಿಯಲ್ಲಿ ಬಾಲ‌ನಟಿಯಾಗಿ ಸ್ಪರ್ಧೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.

ಈಕೆಯ ಸಾಧನೆಗೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಸಂಸತ ವ್ಯಕ್ತಪಡಿಸಿದೆ.

Spread the love

Leave a Reply

Your email address will not be published. Required fields are marked *

error: Content is protected !!