ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ
ಯಾದಗಿರಿ: ಪ್ರಜಾಸತ್ತಾತ್ಮಕ ತಳಹದಿಯಲ್ಲಿ ಎಲ್ಲರನ್ನೊಳಗೊಂಡು ಎಲ್ಲರ ವಿಕಾಸಕ್ಕಾಗಿ ಶ್ರಮಿಸುತ್ತಿರುವ ಸಹಕಾರ ಸಂಸ್ಥೆಗಳು ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಸ್ಪರ್ಧಾತ್ಮಕವಾಗಿಯೂ ಕಾರ್ಯನಿರ್ವಹಿಸುತ್ತಿವೆ ಎಂದು ಕಲ್ಪನಾ ಕೊಂಬಿನ್ ವಿಶೇಷ ಉಪನ್ಯಾಸ ನೀಡಿದ್ದರು.
ನಗರದ ಶನಿವಾರದಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ 71 ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಉದ್ಯಮಶೀಲತೆ ಉದ್ಯೋಗ ಮತ್ತು ಕೌಶ್ಯಲ್ಯಾಭಿವೃದ್ದಿಯ ಉತ್ತೇಜಿಸುವಲ್ಲಿ ಸಹಕಾರ ಪಾತ್ರದ ಬಗ್ಗೆ ಮಾತನಾಡಿದರು.
ಸುಸ್ಥಿರ ಉದ್ಯೋಗ ಸೃಷ್ಟಿಯಲ್ಲಿ ಖಾಸಗಿ ಹಾಗೂ ಸಾರ್ವಜನಿಕ ವ್ಯವಸ್ಥೆಯು ನಿರ್ವಹಿಸುತ್ತಿರುವ ಜವಾಬ್ದಾರಿಯಲ್ಲಿ ಸಹಕಾರಿ ವ್ಯವಸ್ಥೆಯ ಕೈಜೋಡಣೆ ದೇಶದಲ್ಲಿ ಉದ್ಯೋಗ ಸೃಷ್ಟಿ, ಉದ್ಯಮಶೀಲತೆ ಹಾಗೂ ಕೌಶಲ್ಯಾಭಿವೃದ್ಧಿಗೆ ಬಹುಮುಖ ಕೊಡುಗೆ ನೀಡಿ ಸಹಕಾರಿಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು. ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟ ನಿ. ಸಹಕಾರ ಇಲಾಖೆ. ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಟ ಸಹಕಾರ ಸಂಘ ನಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
2021 ರಲ್ಲಿ ಕೇಂದ್ರದಲ್ಲಿ ಸಹಕಾರ ಸಚಿವಾಲಯ ಆರಂಭವಾದ ನಂತರ ಸಹಕಾರ ಕ್ಷೇತ್ರದ ಪರಿಣಾಮಕಾರಿ ಬೆಳವಣಿಗೆಗೆ ಭದ್ರ ಬುನಾದಿ ಹಾಕಿಕೊಟ್ಟಿದೆ ಎಂದು ಹೇಳಿದರು.
ಭಾರತದ ಸಹಕಾರ ಚಳವಳಿಗೆ ಒಂದು ಐತಿಹಾಸಿಕ ಹಿನ್ನೆಲೆ ಇದೆ. ಕೃಷಿಕರ ಬಲವರ್ಧನೆಗೆ ದೇಶದಲ್ಲಿ ಆರಂಭವಾದ ಸಹಕಾರ ವ್ಯವಸ್ಥೆ ಇಂದು ಜನಜೀವನದ ಪ್ರತಿಯೊಂದು ಆಯಾಮವನ್ನು ಆವರಿಸುವ ಮೂಲಕ ಪ್ರಮುಖ ರಂಗವಾಗಿ ಹೊರಹೊಮ್ಮಿದೆ.
ಸಮುದಾಯ ಹಾಗೂ ಅಬಲ ವರ್ಗದವರ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗಾಗಿ ಪ್ರಜಾಸತ್ತಾತ್ಮಕವಾಗಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಗಳು ಇಂದು ಉದ್ಯೋಗ ಸೃಷ್ಟಿಯ ಬಹುಮುಖ ವಲಯವಾಗಿ ಹೊರಹೊಮ್ಮಿವೆ. ಹಾಗೆಯೇ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವಲ್ಲಿಯೂ ಯಶಸ್ವಿಯಾಗಿವೆ ಎಂದು ಮಾತನಾಡಿದರು.
ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟ ನಿರ್ದೇಶಕರಾದ ಸಿದ್ದಪ್ಪ ಎಸ್ ಹೊಟ್ಟಿ ಮಾತನಾಡಿದ ಅವರು ದೇಶದ ಎಲ್ಲೆಡೆ ಹಬ್ಬಿರುವ ಸಹಕಾರಿ ಕ್ಷೇತ್ರದ ವೃಕ್ಷಕ್ಕೆ ಈಗ 120 ವರ್ಷಗಳು ಗತಿಸಿದ್ದು ವೃಕ್ಷದ ಹಲವಾರು ಟೊಂಗೆಗಳು ದೊಡ್ಡ ದೊಡ್ಡ ಮರದಂತೆ ಬೆಳೆದು ನಿಂತಿದೆ ಎಂದು ವಿವರಿಸಿದರು.
ನಾವು ಬ್ರಿಟಿಷರ ವಶದಲ್ಲಿದ್ದು ಅವರ ಆಳ್ವಿಕೆಯಂತೆ ನಡೆದುಕೊಳ್ಳುತ್ತಿದ್ದ ದಾಸ್ಯತನದ ಕಾಲದಲ್ಲಿ ಅದೇ ಬ್ರಿಟಿಷ್ ಅಧಿಕಾರಿಗಳಿಗೆ ಷರತ್ತು ಹಾಕಿ ಅವರಿಂದ ತಮ್ಮ ಕಣಗಿನಾಳ ಗ್ರಾಮಕ್ಕೆ ಕುಡಿಯುವ ನೀರು ಹಾಗೂ ರೈಲ್ವೆ ಸ್ಟೇಷನ್ ಮಾಡಿ ಕೊಡುವ ಭರವಸೆ ಸಿಕ್ಕ ಮೇಲೆ ತಮ್ಮ ಊರಿನಲ್ಲಿ ಸಹಕಾರ ಸಂಘ ೧೯೦೫ ಮೇ ೦೮ ರಂದು ಗದಗಿನ ಕಣಗಿನಾಳ ಗ್ರಾಮದಲ್ಲಿ ಸ್ಥಾಪಿಸಿದ ಸಂಘವೇ ಇಂದು ದೇಶದ ಸಹಕಾರ ಉತ್ತನಕ್ಕೆ ನಾಂದಿಯಾದ ಸಂಘವಿದ್ದು ಅಷ್ಟೇ ಅಲ್ಲ ಇದು ಏಷ್ಯಾ ಖಂಡದ ಮೋದಲು ಸಹಕಾರ ಸಂಘ ಎಂಬ ಹೆಗ್ಗಳಿಕೆಯನ್ನು ತಂದು ಕೊಟ್ಟಿದೆ ಎಂಬುದು ಈಗ ಇತಿಹಾಸವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ವಿಶ್ವನಾಥರೆಡ್ಡಿ ದರ್ಶನಪೂರ. ಜಿ ತಮ್ಮಣ್ಣ. ಎಮ್ ನಾರಯಣ. ಸಿದ್ರಾಮರೆಡ್ಡಿ ಮಾಲಿ ಪಾಟೀಲ ಕೌಳೂರು. ನಾಜೀಮ್ ಅಹ್ಮದ್ ಸ್ವಾಮಿದೇವ ದಾಸನಕೇರಿ. ವಿಶ್ವನಾಥ ಅಲ್ಲೂರು. ಸಹಕಾರ ಇಲಾಖೆ ಸಿಬ್ಬಂದಿ ರವಿ ಕುಮಾರ. ವಿಜಯ ಬಾಸ್ಕರ್ ಶಿವರಾಜ ಬಿಳ್ಹಾರ. ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟದ ಸಿಬ್ಬಂದಿಯಾದ ಶ್ರೀಮತಿ ಸುಜಾತ ಮಠ. ಮಲ್ಲಿಕಾರ್ಜುನ ಸ್ವಾಮಿ. ಪ್ರಶಾಂತ ಹಂಚಾಟೆ. ದೊಡ್ಡಯ್ಯ ಸ್ವಾಮಿ. ಲಂಕೇಶ್ ದೇವರಗೋನಾಲ ಇದ್ದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನಿವೃತ್ತ ಅಧಿಕಾರಿಗಳಾದ ಬಸವಂತ್ರಾಯಗೌಡ ಮಾಲಿ ಪಾಟೀಲ. ರಾಜಶೇಖರ ಪಾಟೀಲ ಕಿಲ್ಲಣಕೇರಾ. ಭೀಮಯ್ಯ ಹಳಿಗೇರ. ಮೈನೊದಿನ್ ದುಪ್ಪಲಿ. ಅನಂಥ ತೀರ್ಥ. ಹಾಗೂ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾದ ಕೆಂಚಪ್ಪ ನಗನೂರ ಅವರಿಗೆ ಸನ್ಮಾನಿಸಲಾಯಿತು.