ಯಾದಗಿರಿ : ಯಾದಗಿರಿ ಜಿಲ್ಲೆಯ ಸೈದಾಪೂರ ಪೊಲೀಸ್ ಠಾಣೆ ವ್ಯಾಪ್ತಿಯ ಕಿಲ್ಲನಕೇರಾ ಗ್ರಾಮದ ಸಾಬರೆಡ್ಡಿ ನಾಗಪ್ಪ ಹೊನ್ನಪ್ಪನೋರ್ (45)ಎಂಬುವವರು ಅ.17ರಂದು ಕಾಣೆಯಾಗಿದ್ದು, ಸೈದಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂದು ಬೆಳಿಗ್ಗೆ 8.30 ಗಂಟೆಗೆ ಮನೆಯಿಂದ ಹೊರಗಡೆ ಹೋದವನು ಮರಳಿ ಮನೆಗೆ ಬಂದಿರುವುದಿಲ್ಲ ಎಂದು ತಿಳಿದು ಬಂದಿದೆ. ಈ ಕುರಿತು ಸೈದಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ ಎಂದು ಸೈದಾಪೂರ ಪೊಲೀಸ್ ಠಾಣೆ ಗುಂಡಪ್ಪ ಹೆಚ್.ಸಿ ತಿಳಿಸಿದ್ದಾರೆ.
ವ್ಯಕ್ತಿಯು ಅಂದಾಜು 5 ಫೀಟ್ 8 ಇಂಚು ಎತ್ತರ ಇದ್ದು, ಬಣ್ಣ ಸದೃಢ ಮೈಕಟ್ಟು ಸಾಧಾರಣ ಕಪ್ಪು ಮೈಬಣ್ಣ, ಬಟ್ಟೆಗಳು ಬಾಕ್ಲೇಟ್ ಬಣ್ಣದ ಚುಕ್ಕೆಗಳುಳ್ಳ ಅರ್ಧ ತೋಳಿ ಶರ್ಟ್ ಮತ್ತು ಬಿಳಿಯ ಬಣ್ಣದ ಲುಂಗಿ ಧರಿಸಿರುತ್ತಾನೆ.
ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆ. ಪುರಷುನ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಸೈದಾಪೂರ ಪೊಲೀಸ್ ಠಾಣೆ ಅಥವಾ ಕಂಟ್ರೋಲ್ ರೂಮ್ ನಂ.98480803600, ಸೈದಾಪೂರ ಠಾಣೆ ಪಿ.ಐ ದೂ.ಸಂ.9480803582, ಯಾದಗಿರಿ ದೂ.ಸಂ.08473 253738ಗೆ ಕರೆ ಮಾಡಲು ತಿಳಿಸಿದ್ದಾರೆ.