ಜ. 21ರಂದು ನಿಜಶರಣ ಅಂಬಿಗರ ಚೌಡಯ್ಯ ಜಯಂತಿ | ನೀಲಹಳ್ಳಿಯಲ್ಲಿ ಚಾಲನೆ

ಯಾದಗಿರಿ: ಜ.04 ರಿಂದ ಜನವರಿ 19 ರವರೆಗೆ ನಡೆಯಲಿರುವ ಜನಜಾಗೃತಿ ಕರ‍್ಯಕ್ರಮಕ್ಕೆ ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನ ಕರ‍್ಯರ‍್ಶಿ ಉಮೇಶ ಕೆ. ಮುದ್ನಾಳ ಅವರು ಚೌಡಯ್ಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅದ್ಧೂರಿ ಚಾಲನೆ ನೀಡಿದರು.

ಸೈದಾಪೂರ ಹೋಬಳಿ ನೀಲಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ವನ್ನು ಜನವರಿ 21ರಂದು ರಾಜ್ಯ ಸರ್ಕಾರದಿಂದ ಆಚರಿಸಲಾಗು ತ್ತಿದ್ದು, ಜನವರಿ 14 ಮತ್ತು 15 ರಂದು ಹಾವೇರಿ ಜಿಲ್ಲೆಯ ಟಿ. ನರಸಿಪುರದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ  ವಚನ ಗ್ರಂಥ ಮಹಾ ರಥೋತ್ಸವ ಜರುಗಲಿದೆ. ಜನಜಾಗೃತಿ ಕಾರ್ಯಕ್ರಮಕ್ಕೆ ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನ ಕಾರ್ಯದರ್ಶಿ ಉಮೇಶ ಕೆ ಮುದ್ನಾಳ ಅವರು ಚೌಡಯ್ಯನ ಮರ‍್ತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಇದಕ್ಕು ಮುಂಚೆ ಗ್ರಾಮದಲ್ಲಿ ಪ್ರಮುಖ ಬೀದಿಗಳಲ್ಲಿ ಬಾಜ ಭಜಂತ್ರಿಗಳ ಮೂಲಕ ಮಹಿಳೆಯರು ಯುವಕರು ಕೋಲಿ ಸಮಾಜದ ಮುಖಂಡರು ಸೇರಿದಂತೆ ಅನೇಕರು ಸೇರಿ ಶ್ರೀ ನಿಜಶರಣ ಅಂಬಿಗೇರ ಚೌಡಯ್ಯನವರ ಭವ್ಯ ಮೆರವಣಿಗೆ ಸ್ವಾಗತಿಸಿದರು

ಕೋಲಿ ಸಮಾಜದ ಜನಜಾಗೃತಿ ಜಾಥಾವು ಜನವರಿ 19 ರವರೆಗೆ ಹೋಬಳಿಗಳಲ್ಲಿ ತೆರಳಲಿದೆ ಎಂದರು. ಪ್ರತಿ ಹೋಬಳಿ ಮಟ್ಟದಲ್ಲಿ ಹಂತ ಹಂತವಾಗಿ ಜಾಗೃತಿ ಅಭಿಯಾನ ತೆರಳಲಿದೆ. ಅಂಬಿಗರ ಚೌಡಯ್ಯನವರ ವಚನಗಳು ಮತ್ತು ತತ್ವಾರ‍್ಶಗಳು ಪ್ರತಿಯೊಬ್ಬರು ಪಾಲಿಸಬೇಕು ಮತ್ತು ವಿಠಲ ಹೇರೂರು ಅವರ ಮಾರ್ಗದರ್ಶನ ಸಾಗಬೇಕೆಂದು ತಿಳಿಸಿದರು.

ಇಂದ್ರಮ್ಮ ,ಲಕ್ಷ್ಮಿ, ಯಂಕಮ್ಮ ,ಸುಶೀಲಮ್ಮ, ಮಹಾದೇವಮ್ಮ, ಪವನ, ಮಲ್ಲೇಶಿ, ರಾಜಪ್ಪ ,ನರ‍್ಮಲಮ್ಮ, ಸಾಯಮ್ಮ ,ಸಿದ್ರಾಮ, ಹಣಮಂತ, ಶೇಕಪ್ಪ, ಬಾಲಪ್ಪ ,ನರಸಪ್ಪ, ಬನ್ನಪ್ಪಾ ,ಹುಸೇನಪ್ಪ, ಶಂಕರ್, ಚಂದ್ರು, ಸಾಬಪ್ಪಾ, ಯಂಕಪ್ಪ ,ಬಸಲಿಂಗಪ್ಪ ,ಸೈದಪ್ಪ ಸೇರಿದಂತೆ ಅನೇಕ ಯುವಕರು ಕೋಲಿ ಸಮಾಜದ ಮುಖಂಡರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!