ಯಾದಗಿರಿ : ಕೇಂದ್ರ ಬಿಜೆಪಿ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ ಪಡಿಸಿಕೊಂಡು ಕರ್ನಾಟಕದ ಸುಸ್ಥಿರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ದುರ್ಬಲಗೊ ಳಿಸಲು ಮೂಡಾ ಪ್ರಕರಣದಲ್ಲಿ ಚುನಾಯಿತ ಸರಕಾರ ಪತನಗೊಳಿಸಲು ಬಿಜೆಪಿ – ಜೆಡಿಎಸ್ ನೆಡೆಸಿರುವ ಷಡ್ಯಂತ್ರ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಅರೆಬೆತ್ತಲೆ ಪ್ರತಿಭಟನೆ ನಡೆಸಲಾಯಿತು.
ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದ್ದು, ಯಾದಗಿರಿ ಜಿಲ್ಲಾ ಕ್ರೀಡಾಂಗಣದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಸಂಘಟನೆ ಕಾರ್ಯಕರ್ತರು ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ನೇತೃತ್ವದಲ್ಲಿ ಅರೆಬೆತ್ತಲೆ ಮೆರವಣಿಗೆ ಹಮ್ಮಿಕೊಂಡಿದ್ದರು.
ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಜವಳಿ, ಕೇಂದ್ರ ಬಿಜೆಪಿ ಸರ್ಕಾರವು ಇಡಿ, ಐಟಿ, ಸಿಬಿಐ ಮತ್ತು ರಾಜಭವನವನ್ನು ರಾಜಕೀಯ ಉದ್ದೇಶಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ.
ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರ ಜನಪ್ರಿಯತೆಯನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು.
ಈ ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಚಂದಪ್ಪ ಮುನಿಯಪ್ಪನೋರ್, ಶಿವಲಿಂಗ ಹಾಸನಪೂರ್, ಭಿಮಣ್ಣ ಹುಣಸಗಿ, ತಾಯಪ್ಪ ಭಂಡಾರಿ, ಮರಿಯಪ್ಪ ಕ್ರಾಂತಿ , ತಿಪ್ಪಣ್ಣ ಶೆಳ್ಳಿಗಿ ,ರಂಗಸ್ವಾಮಿ ಕೊಂಕಲ್ , ಬಾಲರಾಜ್ ಖಾನಾಪುರ , ಚಂದ್ರು ಬಲಷೇಟ್ಟಿಹಾಳ್, ಮಲ್ಲಿಕಾರ್ಜುನ್ ಹೊಸಮನಿ ,ವಾಸು ಕೋಗಿಲ್ಕರ್, ಸಂತೋಷ್ ಗುಂಡಳ್ಳಿ, ಶರಬಣ್ಣ ದೊರನಹಳ್ಳಿ, ಬಲಭೀಮ್ ಬೇವಿನಹಳ್ಳಿ ,ಶೇಖರ್ ಮಂಗಳೂರು, ನಾಗರಾಜ ಕೊಡಮನಹಳ್ಳಿ,ರಾಜು ಬಡಿಗೇರ, ಸಿದ್ದಪ್ಪ ಕೊಡಮನಹಳ್ಳಿ, ಶುಭಾಷ್ ಹುರಸಗುಂಡಗಿ, ದೊಡ್ಡಪ್ಪ ಕಾಡಮ್ ಗೇರ , ಶ್ರೀಮಂತ ಸಿಂಗನಹಳ್ಳಿ ,ಚೆನ್ನಬಸವ ಗುರುಸುನಗಿ , ಹಣಮಂತ ಗುರುಸಣಿಗಿ, ಎಂ ಪಟೇಲ, ಖಾಜಾ ಅಜ್ಮೀರ್, ಪುರುಷೋತ್ತಮ್ ಬಬಲಾದ ,ನಾಗಪ್ಪ ಹಳಿಸಗರ, ಜೈ ಭೀಮ್ ಸಿಂಗನಹಳ್ಳಿ ಉಪಸ್ಥಿತರಿದ್ದರು.