ಯಾದಗಿರಿಯ ಎರಡನೇ ಜಾಂಬೋರೇಟ್ | ಜನೆವರಿ 17 ರಿಂದ 21 ರ ವರೆಗೆ ನಡೆಯಲಿದ್ದು ಸುಮಾರು 3500 ಮಕ್ಕಳು ಭಾಗವಹಿಸುವ ನಿರೀಕ್ಷೆ
ಯಾದಗಿರಿ: ವಿಶ್ವದ ಹಲವಾರು ದೇಶಗಳಲ್ಲಿ ಮಕ್ಕಳ ಅಭ್ಯುದಯ ಕ್ಕಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಹಲವಾರು ರೀತಿಯಲ್ಲಿ ಕೆಲಸ ಮಾಡುತ್ತಿದ್ದು ಮಕ್ಕಳಲ್ಲಿ ಶಿಸ್ತು, ಸಂಯಮ ಹಾಗೂ ದೇಶಭಕ್ತಿ ಯನ್ನು ಉದ್ವಿಪನೆಗೊಳಿಸತ್ತಿದೆ ಎಂದು ಭಾರತ ಸ್ಕೌಟ್ಸ್ ಗೇಟ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ಪ್ರಧಾನ ಆಯುಕ್ತ ಮಾಜಿ ಸಚಿವ ಪಿ.ಜಿ ಆರ್ ಸಿಂಧ್ಯ ಹೇಳಿದರು.
ಯಾದಗಿರಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂ ಡಿದ್ದ ದ್ವಿತೀಯ ಜಾಂಬೋರೇಟ್ ಪೂರ್ವಭಾವಿ ಸಭೆಯಲ್ಲಿ ಲಾಂಛನ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಅಂತರಾಷ್ಟ್ರೀಯ ಜಾಂಬೋರೇಟ್ ಬೀದರ್ ದಲ್ಲಿ ಕಲ್ಯಾಣ ಕರ್ನಾಟಕ ಮೊದಲ ಜಾಂಬೋರೇಟ್ ನಡೆದಿದ್ದು ಯಾದಗಿರಿಯ ಎರಡನೇ ಜಾಂಬೋರೇಟ್ ಈ ತಿಂಗಳ 17 ರಿಂದ 21 ರ ವರೆಗೆ ನಡೆಯಲಿದ್ದು ಸುಮಾರು 3500 ಮಕ್ಕಳು ಭಾಗವಹಿಸುತ್ತಿದ್ದು ಯಾದಗಿರಿ ಜಿಲ್ಲೆಯ ಜನ ಈ ಜಾಂಬೋರೇಟ್ ಅನ್ನು ಯಶಸ್ವಿ ಗೊಳಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಂಸ್ಥೆಯ ಅಧ್ಯಕ್ಷ ಸುರೇಶ ಸಜ್ಜನ್ ಜಾಂಬೋರೇಟ್ ಯಶಸ್ವಿಯಾಗಿ ಎಲ್ಲಾ ಸಿದ್ದತೆಗಳು ನಡೆಯುತ್ತಿದ್ದು ದಾನಿಗಳು ಸಹಕರಿಸುತ್ತಿದ್ದಾರೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ ಅವರು ಮಾತನಾಡಿ ಯಾದಗಿರಿಯಲ್ಲಿ ನಡೆಯುತ್ತಿರುವ ಜಾಂಬೋ ರೇಟ್ ಅಪರೂಪದ ಕಾಣಿಕೆಯಾಗಿ ನಮಗೆ ಲಭಿಸಿದೆ. ಐತಿಹಾಸಿಕವಾದ ಈ ಜಾತ್ರೆಗೆ ಎಲ್ಲರೂ ಕೈಜೋಡಿಸು ತ್ತಿದ್ದಾರೆ. ಜಿಲ್ಲಾಡಳಿತದೊಂದಿಗೆ ನಗರದ ವಿವಿಧ ಸಂಘಟನೆಗಳು ಜನಪತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.
ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಚನ್ನಬಸಪ್ಪ ಮುಧೋಳ್ ಜಾಂಬೋರೇಟ್ ಯಶಸ್ವಿಯಾಗಾಗಿ ಇಲಾಖೆ ಈಗಾಗಲೇ ಕಾರ್ಯಪ್ರವೃತ್ತವಾಗಿದೆ ಎಂದು ವಿವರ ನೀಡಿದರು.
ಸ್ಕೌಟ್ಸ್ ಗೇಟ್ಸ್ ಜಿಲ್ಲಾ ಸಂಸ್ಥೆ ಕಾರ್ಯದರ್ಶಿ ರಾಘವೇಂದ್ರ ಅಳ್ಳಳ್ಳಿ, ಸ್ಕೌಟ್ಸ್ ಆಯುಕ್ತ ಪ್ರೋ.ಸಿ.ಎಂ ಪಟ್ಟೇದಾರ ಉಪಸ್ಥಿತರಿದ್ದರು. ಶಹಪುರ ಸಂಘಟನೆಯ ಕಾರ್ಯದರ್ಶಿ ಬಸವರಾಜ್ ಗೋಗಿ ಸ್ವಾಗತಿಸಿದರು. ಕಲ್ಯಾಣಿ ಕರ್ನಾಟಕ ಸ್ಕೌಟ್ಸ್ ಗೇಟ್ಸ್ ಪ್ರಭಾರಿ ಶ್ರೀಮತಿ ಮಲ್ಲೇಶ್ವರಿ ಜುಜೇರಿ ಕಾರ್ಯಕ್ರಮ ನಿರೂಪಿಸಿ ವಂದಿಸಿ ದರು. ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಹೆಚ್ಚುವರಿ ಎಸ್.ಪಿ ಧರಣೇಶ ಎಸ್.ಪಿ ಉಪಸ್ಥಿತರಿದ್ದರು.