ಶಹಾಪುರ (ಗೋಗಿ) : ಜೀವ ಅತ್ಯಮೂಲ್ಯ ನಿಮ್ಮನ್ನು ನಂಬಿಕೊಂಡು ಕುಟುಂಬಗಳು ಬದುಕುತ್ತಿದ್ದು ದ್ವಿಚಕ್ರ ವಾಹನ ಸವಾರರು ತಮ್ಮ ಜೀವ ರಕ್ಷಣೆಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಎಂದು ಗೋಗಿಯ ಪಿಎಸ್ಐ ದೇವೇಂದ್ರರೆಡ್ಡಿ ಉಪ್ಪಳ ಹೇಳಿದರು.
ಗ್ರಾಮದ ಹೊರವಲಯದಲ್ಲಿ ಗೋಗಿ ಪೋಲಿಸ್ ಠಾಣೆ ವತಿಯಿಂದ ಮಂಗಳವಾರ ರಂದು ಹಮ್ಮಿಕೊಂಡ ಹೆಲ್ಮೆಟ್ ಧರಿಸಿ ಜೀವ ಉಳಿಸಿ ಎಂಬ ಹೆಲ್ಮೆಟ್ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜನರು ಕಾನೂನು ಪಾಲನೆ ಮಾಡಬೇಕು ಜನರಲ್ಲಿ ಹೆಲ್ಮೆಟ್ ಕುರಿತು ಅಸಡ್ಡೆ ಭಾವನೆ ಇರಬಾರದು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಮಹತ್ವ ತಿಳಿಯದೆ ನಿರ್ಲಕ್ಷ್ಯ ಮೂಲಕ ಎಷ್ಟು ಜನರು ಜೀವವನ್ನು ಕಳೆದುಕೊಂಡಿದ್ದಾರೆ ಪ್ರತಿಯೊಬ್ಬರು ಹೆಲ್ಮೆಟ್ ಧರಿಸಬೇಕು.
ಲಕ್ಷ ಲಕ್ಷ ಕೊಟ್ಟು ಬೈಕ್ ಖರೀದಿಸುತ್ತಾರೆ ಆದರೆ ಒಂದು ಸಾವಿರ ರೂಪಾಯಿ ಹೆಲ್ಮೆಟ್ ಖರೀದಿಸಲು ಹಿಂದೇಟು ಹಾಕುತ್ತಾರೆ ಈ ಭಾವನೆಯಿಂದ ಹೊರ ಬರುವ ಮೂಲಕ ದ್ವಿಚಕ್ರ ವಾಹನ ಮನೆಯಿಂದ ಹೊರ ತೆಗೆದಾಗ ತಲೆಯ ಮೇಲೆ ಹೆಲ್ಮೆಟ್ ಧರಿಸಿಕೊಂಡು ಬರಬೇಕು ಎಂದು ಜನರಲ್ಲಿ ಮನವಿ ಮಾಡಿದರು.
ಎಲ್ಲಾ ವಾಹನ ಸವಾರರು ಆಫ್ ಹೆಲ್ಮೆಟ್ ಹಾಕದೆ ಪೂರ್ಣವಾದ ಹೆಲ್ಮೆಟ್ ಧರಿಸಬೇಕು ನಿಮ್ಮ ಜೀವನದಲ್ಲಿ ಕುಟುಂಬದ ಭವಿಷ್ಯ ಅಡಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಠಾಣೆಯ ವಸಂತ, ರಾಮಣ್ಣ, ಪ್ರದೀಪರೆಡ್ಡಿ, ಕಾಳಿಂಗರಾಯ, ನಾಗಪ್ಪ ಹಾಗೂ ವಾಹನ ಸವಾರರಾದ ಸುಮನ ರಾಠೋಡ, ಸಿದ್ದಣ್ಣ ಯಾದಗಿರಿ ಹಾಗೂ ಇತರರಿದ್ದರು.