ಯಾದಗಿರಿ: ಪ್ರಚಲಿತ ದಿನಮಾನಗಳಲ್ಲಿ ಡಿಜಿಟಲ್ ಸಾಕ್ಷರತೆ ಅರಿವು ಬಹಳ ಪ್ರಮುಖವಾಗಿದೆ ಹಾಗೂ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಡಿಜಿಟಲ್ ನಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುತ್ತಿದ್ದಾರೆ ಎಂದು ಶಹಾಪೂರ ತಾಲೂಕಿನ ರಾಜೀವ್ ಗಾಂಧಿ ಪಂಚಾಯತ್ ರಾಜ್ ಪೇಲೋ ಅಧಿಕಾರಿ ಮಂಜುನಾಥ ಜಕ್ಕಮ್ಮನವರ್ ಹೇಳಿದರು.
ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿಪೇಠ ಗ್ರಾಮದ ಗ್ರಂಥಾಲಯ ಸಭಾಂಗಣದಲ್ಲಿ ಶನಿವಾರ ರಂದು ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಹಾಗೂ ಶಿಕ್ಷಣ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ ಡಿಜಿಟಲ್ ಸಾಕ್ಷರತೆ ತರಬೇತಿ ಹಾಗೂ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮ ಪಂಚಾಯತಿ ಸಾರ್ವಜನಿಕರಿಗೋಸ್ಕರ ಇರುವ ಪೋರ್ಟಲ್ ಪಂಚತಂತ್ರ 2.0 ಇನ್ನಿತರ ಡಿಜಿಟಲ್ ಆ್ಯಪ್ ಬಗ್ಗೆ ಮಾಹಿತಿ ಪಡೆದುಕೊಳ್ಳಲು ತಾವೆಲ್ಲರು ಈ ತರಬೇತಿಯನ್ನು ಪಡೆದುಕೊಂಡು ಡಿಜಿಟಲ್ ಸಾಕ್ಷರರಾಗಿ ಎಂದರು.
ತದನಂತರ ಯಾದಗಿರಿ ಜಿಲ್ಲಾ ಶಿಕ್ಷಣ ಫೌಂಡೇಶನ್‌ನ ಸಂಯೋಜಕರಾದ ಶಿವು.ಭಿ. ಹಾದಿಮನಿ ರವರು ಮಾತನಾಡಿ, ಪಂಚಾಯತ್ ರಾಜ್ ಇಲಾಖೆ ಜೊತೆಯಲ್ಲಿ ಶಿಕ್ಷಣ ಫೌಂಡೇಶನ್ ಹಾಗೂ ಡೆಲ್ ಟೆಕ್ನಾಲಜಿ ಸಂಸ್ಥೆ ಸಹಯೋಗ ದೊಂದಿಗೆ ಕರ್ನಾಟಕ ರಾಜ್ಯದಾದ್ಯಂತ 5000 ಅರಿವು ಕೇಂದ್ರಗಳ ಮೇಲ್ವಿಚಾರಕರ ಮೂಲಕ 8 ಲಕ್ಷ ಮಹಿಳೆಯರಿಗೆ ಡಿಜಿಟಲ್ ಸಾಕ್ಷರತೆ ತರಬೇತಿಯನ್ನು ಒದಗಿಸುತ್ತಿದೆ.
ಈ ಮಾಹಿತಿಯು ಸಮುದಾಯ ಮತ್ತು ಸ್ವಸಹಾಯ ಸಂಘದ ಮಹಿಳೆಯರು ಸಂವಹನ ಮಾಡಲು ಮಾಹಿತಿ ಯನ್ನು ತಿಳಿದುಕೊಳ್ಳಲು ಹಾಗೂ ವ್ಯವಹಾರ ನಡೆಸಲು ಮತ್ತು ಸರಳ ಡಿಜಿಟಲ್ ವೈವಾಟುಗಳಿಗಾಗಿ ಸ್ಮಾರ್ಟ್ ಫೋನ್ ಗಳಂತಹ ಸಾಧನಗಳನ್ನು ಆತ್ಮವಿಶ್ವಾಸದಿಂದ ಬಳಸಲು ಅಗತ್ಯವಿರುವ ಕೌಶಲ್ಯವನ್ನು ವೃದ್ಧಿಸುವುದಾ ಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯರಾದ ಬಂದೇನ ವಾಜ ಸೌದಾಗರ್, ಶಿವಕುಮಾರ ಪರ್ತಾಬಾದ, ರಾಜಶೇ ಖರ ಸಗರ, ಮಹಮ್ಮದ ಹುಸೇನ್, ಗ್ರಂಥಪಾಲಕ ಮಂಜುನಾಥ ಟೊಣಪೆ ಹಾಗೂ ಅಂಗನ ವಾಡಿಯ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು ಹಾಗೂ ಎಂ,ಬಿ,ಕೆ. ಮತ್ತು ಎಲ್,ಸಿ,ಆರ್,ಪಿ.ಹಾಗೂ ಪಶುಸಖಿ, ಕೃಷಿಸಖಿ, ಬಿ.ಸಿ.ಸಖಿ ಮತ್ತು ಸ್ವ ಸಹಾಯ ಸಂಘದ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.