ಗೋಗಿಪೇಠದಲ್ಲಿ ಕಾರ್ತೀಕ ದೀಪೋತ್ಸವ | ಪ್ರವಚನ ಸಂಪನ್ನ

ಶಹಾಪುರ (ಗೋಗಿಪೇಠ): ಕಾರ್ತಿಕ ಮಾಸದಲ್ಲಿ ಪುರಾಣ ಮತ್ತು ಪ್ರವಚನ ಆಲಿಸುವ ಮೂಲಕ ನಮ್ಮ ಆತ್ಮ, ಅಂತರಂಗ ಶುದ್ಧಿ ಸಾಧ್ಯವೆಂದು ಸಿಂಗನಹಳ್ಳಿಯ ಸದ್ಗುರು ಶ್ರೀ ಪ್ರಣವಲಿಂಗ ಸ್ವಾಮಿಗಳು ಹೇಳಿದರು.

ಇಲ್ಲಿನ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಹಮ್ಮಿಕೊಂಡ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಹಾಗೂ ಶ್ರೀ ವೀರಭದ್ರೇಶ್ವರ ಪುರಾಣ ಪ್ರವಚನ ಮಂಗಲ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ವೀರಭದ್ರನು ತನ್ನ ಸೃಷ್ಟಿಯೊಂದಿಗೆ ನಾಲ್ಕು ವಿಧ ವಿಧವಾದ ಅಸ್ತ್ರಗಳನ್ನು ಎಂಟು ಕೈಗಳಲ್ಲಿ ಹಿಡಿದುಕೊಂಡು ಅವತರಿಸಿದ್ದಾನೆ. ಬಾಣ, ಖಡ್ಗ, ಧನಸ್ಸು, ಕೇತಕ ಮತ್ತು ಅಸ್ಥಿ ಪಂಜರಗಳು ಇವನ ಆಯುಧಗಳು. ಘಟನೆಯೊಂದರಲ್ಲಿ ಭಗವಾನ್ ವಿಷ್ಣು, ವೀರಭದ್ರನನ್ನು ಸಂಹರಿಸಲು ಸುದರ್ಶನ ಚಕ್ರವನ್ನು ಪ್ರಯೋಗಿಸಿದಾಗ ಅದನ್ನೇ ನುಂಗಿದವರು ಅಂಥಹ ಶಕ್ತಿವಂತರು ವೀರಭದ್ರೇಶ್ವರ ದೇವರು ಎಂದು ತಿಳಿಸಿದರು.

ತಪೋರತ್ನ ಶ್ರೀ ಜಯಗುರುದೇವ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಅನ್ನ, ನೀರು, ಆಶ್ರಯ, ಬಟ್ಟೆ, ಮೊದಲಾದವುಗಳು ಬಹಿರಂಗದ ಸಂಪತ್ತು ಅವುಗಳನ್ನು ಯಾರು ಬೇಕಾದರೂ ಗಳಿಸಬಹುದು. ಆದರೆ ಅಂತರಂಗ ಶುದ್ದಗೊಳಿಸುವ ಧಾನ್ಯ, ದಾನ, ಪ್ರಾರ್ಥನೆ, ಮೌನ ಮೊದಲಾದವು ಎಲ್ಲಾ ಗಳಿಸಲಾಗುವುದಿಲ್ಲ ಆದ್ದರಿಂದ ಭಕ್ತರು ದೇವಾಲಯಗಳಲ್ಲಿ ಜರಗುವ ಪುರಾಣ ಪುಣ್ಯಕಥೆಗಳನ್ನು ಆಲಿಸಿ ಅಂತರಂಗ ಶುದ್ದಿ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಧಾನ ಅರ್ಚಕ ಗುರುಮೂರ್ತಿ ಗಣಚಾರಿ,ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣಪ್ಪ ಗಿಂಡಿ, ಪುರಾಣಿಕ ಸೂರ್ಯಕಾಂತ ಶಾಸ್ತ್ರೀ, ಸಂಗೀತ ಕಲಾವಿದ ಕಲ್ಲಯ್ಯಸ್ವಾಮಿ ಪಡದಳ್ಳಿ, ಪ್ರಾಣೇಶ ಶಹಾಪೂರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಊರಿನ ಪ್ರಮುಖರಾದ ಬಸವರಾಜ ಸಗರ, ತಿಪ್ಪಣ್ಣ ಭಾವಿ,ಚಂದ್ರಶೇಖರ ಬೇವಿನಾಳ,ಚಂದ್ರಯ್ಯಸ್ವಾಮಿ ರುಮಾಲ, ಚಂದ್ರಶೇಖರ ಪಾಟೀಲ್, ಬಸವರಾಜ ಕನ್ನಳ್ಳಿ,ಚನ್ನಪ್ಪ ಕಾಯಿ, ಸಿದ್ರಾಮಪ್ಪ ಕಾಯಿ,ರಮೇಶ್ ಕೊಡೆಕಲ್, ನೂರಂದಯ್ಯ ಸ್ವಾಮಿ ಕೋರಿಮಠ, ನಾಗಯ್ಯಸ್ವಾಮಿ ಗಣಚಾರಿ, ಸಿದ್ದು ಯಾದಗಿರಿ, ಮಧುಕರ ಭಾಸುತ್ಕರ ಹಾಗೂ ಊರಿನ ಗಣ್ಯರು, ಯುವ ಸಮೂಹ ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.

ಕಾರ್ಯಕ್ರಮ ನಿರೂಪಣೆ ಅಮರೇಶ ಪೂಜಾರಿ,ಸ್ವಾಗತ ಗುರುರಾಜ ದೇವಾಪುರ, ವಂದನಾರ್ಪಣೆ ರಾಘವೇಂದ್ರ ಸುಗಂಧಿ ನೆರವೇರಿಸಿದರು. ಪ್ರವಚನ ಮುಗಿದ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು.

Spread the love

Leave a Reply

Your email address will not be published. Required fields are marked *

error: Content is protected !!