ಶಹಾಪೂರ  ತಾಲೂಕಿನ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷರಾದ ಬಾಪುಗೌಡ ಪಾಟೀಲ್ ನೇತೃತ್ವದಲ್ಲಿ ಮನವಿ

ಶಹಾಪೂರ : ತಾಲೂಕಿನ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷರಾದ ಬಾಪುಗೌಡ ಪಾಟೀಲ್ ನೇತೃತ್ವದಲ್ಲಿ ಶನಿವಾರದಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವರಾಜ ಶರಬಯ್ಯ ರವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

2025-26 ನೇ ಸಾಲಿನ ನರೇಗಾ ಕ್ರೀಯಾ ಯೋಜನೆ ತಯಾರಿಸಲು ಸಮಯಾವಕಾಶ ನೀಡಬೇಕು, ಕೆಲವೊಂದು ಗ್ರಾಮ ಪಂಚಾಯತಿಯಲ್ಲಿ ಕಾರಣಾಂತರಗಳಿಂದ ಗ್ರಾಮಸಭೆ ನಡೆದಿರುವುದಿಲ್ಲ ಮತ್ತು ಕೆಲವೊಂದು ಗ್ರಾಮ ಪಂಚಾಯತಿ ಗಳಲ್ಲಿ ಅಭಿವೃದ್ಧಿ ಅಧಿಕಾರಿಗಳು ಇರುವುದಿಲ್ಲ.

ಕೆಲವು ಕಡೆ ಪ್ರಭಾರಿ ಇದ್ದು, ಹಾಗಾಗಿ ನರೇಗಾ ಯೋಜನೆಯ ಕಾಮಗಾರಿಗಳ ಮಾಹಿತಿ ಇರುವುದಿಲ್ಲ. ಆದ್ದರಿಂದ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದು ಕೊನೆಯ ದಿನಾಂಕ 30/11/2024 ಎಂದು ಹೇಳುತ್ತಿದ್ದಾರೆ ಆದರೆ ನರೇಗಾ ಯೋಜನೆಯವು ಒಂದು ಗ್ರಾಮ ಪಂಚಾಯತಿ ಸಂಜೀವಿಯಂತ್ತಿದ್ದು ಇದು ಪೂರ್ಣ ಪ್ರಮಾಣದದಲ್ಲಿ ಸರಿಯಾಗಿ ಆಗುತ್ತಿಲ್ಲ ಎಂದಿದ್ದಾರೆ.

ಆದ್ದರಿಂದ ಸಮಯದ ಅಭಾವದಿಂದ ಕ್ರೀಯಾ ಯೋಜನೆಯನ್ನು ತಯಾರಿಸುವುದು ಇದು ಸುಲಭವಿಲ್ಲಾ ಈದರೊಳಗೆ ಹದಿನೈದನೇ ಹಣಕಾಸಿನ ಗೈಡಲೈನ್ ತಯಾರಿಸುವ ವಿಧಾನವನ್ನು ತಿಳಿಯಲು ಪರದಾಡುತ್ತಿದ್ದಾರೆ.

ಅಧಿಕಾರಿಗಳು ಮೊದಲಿನ ಹಾಗೆ ನೋಡಿದರೆ ಅತಿ ಹೆಚ್ಚು ವ್ಯತ್ಯಾಸಗಳು ಕಂಡುಬರುತ್ತದೆ ಆದಕಾರಣ ಸಂಬಂಧಪಟ್ಟ ಅಧಿಕಾರಿಗಳು ಕಾಲಾವಕಾಶ ಕೊಡಬೇಕೆಂದು ಒಕ್ಕೂಟದ ಪರವಾಗಿ ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಪ್ರಲ್ಹಾದರಾವ್ ಕುಲಕರ್ಣಿ, ಒಕ್ಕೂಟದ ಸದಸ್ಯರಾದ ಬಾಬು ಸಾದ್ಯಾಪುರ ಮದ್ರಿಕಿ,ಭಾವಸಾಬ್ ಶಿರವಾಳ,ಮಲ್ಲು ಗುಡಿ ಸಗರ,ರವಿ ಮೂಲಿಮನಿ,ವಿಜಯ ಮಲಗೊಂಡ, ಗುರು ಖಾನಾಪೂರ, ಶ್ರೀನಿವಾಸ ಗೋಳೆದ, ಶಿವಕುಮಾರ ಪರ್ತಬಾದ,ಹುಚ್ಚಯ ನಾಯಕ ಚಟ್ನಳ್ಳಿ, ತಾಯಮ್ಮ ದೋರನಹಳ್ಳಿ, ಶಕುಂತಲಾ ಶಿರವಾಳ ಇತರರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!