ನೀವು ಶಹಾಪುರ ತಾಲೂಕಿನವರಾ? ಭ್ರಷ್ಟಾಚಾರದ ವಿರುದ್ಧ ದೂರು ಸಲ್ಲಿಸಬೇಕೆ, ನಿಮ್ಮೂರಲ್ಲೇ ಮಧ್ಯಾಹ್ನದವರೆಗೆ ಲೋಕಾಯುಕ್ತರು ಅಹವಾಲು ಸ್ವೀಕರಿಸಲಿದ್ದಾರೆ…
ಯಾದಗಿರಿ : ಜಿಲ್ಲೆಯ ಶಹಾಪೂರ ತಾಲ್ಲೂಕು ಕೇಂದ್ರದಲ್ಲಿ ಸರ್ಕಾರಿ ಕಛೇರಿಗಳಲ್ಲಿನ ಕುಂದುಕೊರತೆ ಮತ್ತು ಭ್ರಷ್ಟಾಚಾರದ ಬಗ್ಗೆ ಅಹವಾಲು ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯಾದಗಿರಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ನಿರೀಕ್ಷಕರು ಸಿದ್ದರಾಯ ಬಳೂರ್ಗಿ ತಿಳಿಸಿದ್ದಾರೆ.
ಯಾರಿಗಾದರೂ ಸರ್ಕಾರಿ ಅಧಿಕಾರಿಗಳಿಂದ ತಮಗೆ ಆಗಬೇಕಾದ ಕೆಲಸಗಳಲ್ಲಿ ವಿಳಂಬವಾಗಿದ್ದರೆ ಅಥವಾ ಅಧಿಕಾರಿಗಳು ನ್ಯಾಯಯುತವಾಗಿ ಮಾಡಿಕೊಡಬೇಕಾದ ಕೆಲಸಗಳಲ್ಲಿ ವೃಥಾ ತೊಂದರೆ ಕೊಡುತ್ತಿದ್ದರೆ ಅಥವಾ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳಿದ್ದಲ್ಲಿ, ಸಭೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಸಭೆಯ ಸದುಪಯೋಗ ಪಡೆದುಕೊಳ್ಳಬೇಕು.
ಶಹಾಪೂರ ತಾಲ್ಲೂಕು 2024ರ ಡಿಸೆಂಬರ್ 5ರ ಗುರುವಾರ ರಂದು ಬೆಳಿಗ್ಗೆ 10.30 ರಿಂದ 1.30 ಗಂಟೆಯ ವರೆಗೆ ಶಹಾಪೂರ ತಾಲ್ಲೂಕು ಪಂಚಾಯತ ಸಭಾಂಗಣದಲ್ಲಿ ಸಭೆ ನಡೆಯಲಿದೆ.
ಎಲ್ಲಾ ಇಲಾಖೆಗಳ ತಾಲ್ಲೂಕ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು, ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ನೇರವಾಗಿ ಬಂದು ಸಲ್ಲಿಸಲು ಹಾಗೂ ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳೊಂದಿಗೆ ಕೆಲಸ ನೆರವೇರಿಸಿಕೊಳ್ಳಲು ಅಥವಾ ಸ್ಥಳದಲ್ಲಿಯೇ ದೂರು ಅರ್ಜಿಯ ಫಾರಂ ನಂ.1,2 ತೆಗೆದುಕೊಂಡು ದೂರು ನೀಡಲು ಅನುಕೂಲ ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಎಸ್‌ಪಿ ಕಛೇರಿ ಸ್ಥಿರ ದೂ.ಸಂ.08473 253802, ಡಿಎಸ್‌ಪಿ ಕಛೇರಿ ದೂ.ಸಂ.08473 250077, ಪಿ.ಐ ಕಛೇರಿ ದೂ.ಸಂ.08473 253355, ಡಿಎಸ್‌ಪಿ ಮೊ.ನಂ.9364062589, ಪಿಐ-1 ಮೊ.ನಂ.9364062714, ಪಿಐ-2 ಮೊ.ನಂ.9364062715ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.