ಶಹಾಪುರದಲ್ಲಿ ಶ್ರಾದ್ಧಾಂಜಲಿ ಸಲ್ಲಿಕೆ | ಮಾಜಿ ಪ್ರಧಾನಿ ಸೇವೆ ಸ್ಮರಣೆ

ಶಹಾಪುರ : ಹಣಕಾಸು ಸಚಿವರಾಗಿ, ರಿಸರ್ವ್ ಬ್ಯಾಂಕ್ ಗೌವರ್ನರ್ ಆಗಿ, ಸತತ 10 ವರ್ಷಗಳ ಕಾಲ ಪ್ರಧಾನ ಮಂತ್ರಿಯಾಗಿ ತಮ್ಮ ಜ್ಞಾನ ಮತ್ತು ಬದ್ಧತೆ ಮೂಲಕ ದೇಶಕ್ಕೆ ಸೇವೆ ಸಲ್ಲಿಸಿದ ವಿಶ್ವ ಕಂಡಂತಹ ಶ್ರೇಷ್ಠ ಆರ್ಥಿಕ ತಜ್ಞರಾದ ಡಾ. ಮನಮೋಹನ್ ಸಿಂಗ್ ಅವರು ಅಗಲಿದ್ದು, ದೇಶಕ್ಕೆ ತುಂಬಲಾ ರದ ನಷ್ಟವೆಂದು ಹಿರಿಯ ಪತ್ರಕರ್ತ ನಾರಾಯಣಚಾರ್ಯ ಸಗರ ಹೇಳಿದರು.

ಸರ್.ಎಂ.ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘದ ವತಿಯಿಂದ ಭಾವಪೂರ್ಣ ಶ್ರಾದ್ದಾಂಜಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜಾರಿಗೆ ತಂದಂತಹ ಉದ್ಯೋಗ ಖಾತ್ರಿ ಮತ್ತು ಆಹಾರ ಭದ್ರತಾ ಕಾಯ್ದೆಯಂತಹ ಯೋಜನೆಗಳು ದೇಶದ ಕೋಟ್ಯಾಂ ತರ ಜನರ ಬಡತನವನ್ನು ನೀಗಿಸಿತು.

ಬಡ ಮಕ್ಕಳಿಗೂ ಪ್ರತಿಷ್ಠಿತ ಶಾಲೆಗಳಲ್ಲಿ ಓದಲು ಅವಕಾಶ ಕಲ್ಪಿಸಿತು.  ಆಡಳಿತದಲ್ಲಿ ಪಾರದರ್ಶಕತೆಯನ್ನು ತಂದಿತು. ದೇಶಕ್ಕೆ ಕೊಡುಗೆಯಾಗಿರುವ ಅವರ ಸಾಧನೆಗಳು ಎಂದಿಗೂ ಅಜರಾಮರ ಎಂದು ಅವರು ನುಡಿದರು.

ದೇಶದ ಆರ್ಥಿಕ ಸ್ಥಿತಿವಾಗಲು ಡಾ.ಸಿಂಗ್ ನೀಡಿದ ಕೊಡುಗೆ ಅವಿಸ್ಮರಣೀಯ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಪ್ರದೀಪ ಅಣಬಿ, ರಾಜಶೇಖರ ಪಾಟೀಲ, ಸುನೀಲ ಅಣಬಿ, ನಿಂಗಪ್ಪ ಖದ್ರಾಪುರ.

ಮಹ್ಮದ ಸುಭಾಷ ಹೋತಪೇಠ, ಅಂಗವಿಕಲ ಸಂಘದ ರಾಜ್ಯಾಧ್ಯಕ್ಷರು, ಮಹ್ಮದ ಇಸ್ಮಾಯಿಲ್ ತಿಮ್ಮಾಪುರ ದಲಿತ & ಮೈನಾರಿಟಿ ಸಂಘದ ಅಧ್ಯಕ್ಷರು, ಭೋಜಪ್ಪ ಮುಂಡಾಸ, ಅಂಬ್ರೇಶ ಶಿರವಾಳ, ಶಿವು ಹಳಿಸಗರ, ರಾಜು ಪಿಲ್ಟರ್ ಬೆಡ್, ಆಂಜನೇಯ ಇಬ್ರಾಹಿಂಪುರ ಇನ್ನಿತರ ಕಾರ್ಯಕರ್ತರು ಹಾಜರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!