ಡಿಸೆಂಬರ್ 14 ರಂದು ಸಮಾರಂಭ ಆಯೋಜನೆ | ಜಿಲ್ಲಾ ಕದಳಿ ಮಹಿಳಾ ವೇದಿಕೆ ಉದ್ಘಾಟನೆ

ಯಾದಗಿರಿ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಪ್ರಕಟಿತ ಎರಡು ಕೃತುಗಳು ಬಿಡುಗಡೆ ಹಾಗೂ ಜಿಲ್ಲಾ ಕದಳಿ ಮಹಿಳಾ ವೇದಿಕೆ ಉದ್ಘಾ ಟನೆ ಮತ್ತು ಯುವ ವೇದಿಕೆ, ಕದಳಿ ವೇದಿಕೆ ತಾಲೂಕಾ ಅಧ್ಯಕ್ಷರ ಸೇವಾ ದೀಕ್ಷೆ ಸಮಾರಂಭ ಡಿ.14 ರಂದು ಬೆಳಿಗ್ಗೆ 11ಕ್ಕೆ ನಗರದ ಹಿಂದಿ ಪ್ರಚಾರ ಸಭಾ ಬ್ಯಾಕ್ ವರ್ಡ್ ಹಾಸ್ಟೇಲ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಹೇಳಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗದಗದ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಶ್ರೀ ಜಗದ್ಗುರು ಡಾ. ತೋಂಟದ ಸಿದ್ದರಾಮ ಸ್ವಾಮೀಜಿಗಳು ಸಮಾರಂಭದ ದಿವ್ಯ ಸಾನಿಧ್ಯ ವಹಿಸುವರು. ಖಾಸಾ ಮಠದ ಶ್ರೀ ಶಾಂತವೀರ ಮುರು ಘರಾಜೇಂದ್ರ ಸ್ವಾಮೀಜಿ ಅವರು ನೇತೃತ್ವ ವಹಿಸುವರು. ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಅವರು ಸಮಾರಂಭ ಉದ್ಘಾಟಿಸುವರು.

ಯಾದಗಿರಿ ಮತಕ್ಷೇತ್ರದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಅವರು ಸಂತನೆಂದರೆ ಯಾರು, ದಿವ್ಯತೆಯ ಅರಿತವನು, ಗುರುಮಠಕಲ್ ಮತಕ್ಷೇತ್ರದ ಶಾಸಕ ಶರಣಗೌಡ ಕಂದಕೂರ ಅವರು ಶರಣ ಶ್ರೇಷ್ಠರು ಭಾಗಿ 2 ಕೃತಿಗಳನ್ನು ಬಿಡುಗಡೆಗೊಳಿಸುವರು.

ರಾಯಚೂರು ಕಸಾಪ ಮಾಜಿ ಅಧ್ಯಕ್ಷ ಮಹಾಂತೇಶ ಮಸ್ಕಿ ಅವರು ಕೃತಿಗಳ ಪರಿಚಯವನ್ನು ಮಾಡಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಗಾಂಜಿ, ಮುಖಂಡರಾದ ಮಹೇಶ ರೆಡ್ಡಿ ಮುದ್ನಾಳ, ಪ್ರಕಾಶ ಎಸ್.ಆಂಗಡಿ ಕನ್ನಳ್ಳಿ, ಡಾ.ಭಾಗ್ಯವತಿ ಕೆಂಭಾವಿ ಆಗಮಿಸಲಿದ್ದಾರೆ.

ಶ್ರೀನಿವಾಸ ಜಾಲವಾದಿ ಮತ್ತು ರಮೇಶ ಕೋಟ್ಯಾಳ್, ಡಾ. ಪ್ರದೀಪ ಹೆಬ್ರಿ, ಗುರಪ್ಪಾಚಾರ್ಯ ವಿಶ್ವಕರ್ಮ ಬಾಡಿಯಾಳ, ಲಿಂಗಣ್ಣ ಪಡಶೆಟ್ಟಿ, ಶಿವಕುಮಾರ ಬಂಡೋಳಿ, ಅಖಂಡೇಶ್ವರ ಹಿರೇಮಠ ಗೌರವ ಉಪಸ್ಥಿತರರಿಲಿದ್ದಾರೆ.

ಅಖಿಲ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲಾ ಕದಳಿ ಮಹಿಳಾ ವೇದಿಕೆ ಉದ್ಘಾಟನೆ, ಯುವ ವೇದಿಕೆ, ಕದಳಿ ವೇದಿಕೆಯ ತಾಲೂಕಾ ಅಧ್ಯಕ್ಷರುಗಳ ಸೇವಾ ದೀಕ್ಷೆ ನಡೆಯಲಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಹಿರಿಯರಾದ ಅಯ್ಯಣ್ಣ ಹುಂಡೇಕಾರ, ಆರ್ ಮಹಾದೇವಪ್ಪ ಗೌಡ ಅಬ್ಬೇತುಮಕೂರ, ಬಸವರಾಜ ಅರಳಿ ಮೋಟ್ನಳ್ಳಿ. ಡಾ. ಭೀಮರಾಯ ಲಿಂಗೇರಿ, ಡಾ.ಎಸ್.ಎಸ್ ನಾಯಕ, ನೂರಂದಪ್ಪ ಲೇವಡಿ ನಾಗೆಂದ್ರ ಜಾಜಿ. ವಿ ಎಸ್ ಜಾಕಮಠ, ನಾಗಪ್ಪ ಸಜ್ಜನ, ಸ್ವಾಮಿದೇವ ದಾಸನಕೇರಿ ಸೇರಿದಂತೆ ಇತರರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!