ಅರಕೇರಾ ಕೆ ಸರ್ಕಾರಿ ಶಾಲೆಯ ಕನ್ನಡ ಭಾಷಾ ಶಿಕ್ಷಕ| ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಷ್ಟ್ರಮಟ್ಟದ ಪ್ರಶಸ್ತಿ

ಯಾದಗಿರಿ: ಸರಕಾರಿ ಪ್ರೌಢಶಾಲೆ ಅರಕೇರಾ (ಕೆ) ಶಾಲೆಯ ಕನ್ನಡ ಭಾಷಾ ಶಿಕ್ಷಕ ಚಾಂದಸಾಬ ಎಂ ಚೌಕಿಯವರಿಗೆ ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನಹಡಗಲಿ ವತಿಯಿಂದ ನೀಡುತ್ತಿರುವ 2025ನೇ ಸಾಲಿನ ರಾಷ್ಟ್ರಮಟ್ಟದ ಶಿಕ್ಷಣ ಸೌರಭ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕನ್ನಡ ಸಾಹಿತ್ಯ ಬೆಳವಣಿಗೆಗೆ ಪೂರಕವಾಗಿ ಸಾಹಿತ್ಯ ಕೃಷಿ ಮಾಡುವ ಪ್ರಯತ್ನ ನಿರಂತರವಾಗಿ ಮಾಡುತ್ತಿರುವುದು ಕವನಗಳು ಹಾಗೂ ಕಥೆಗಳು ಬರವಣಿಗೆ ಮಾಡುವ ಮೂಲಕ ಸಾಹಿತ್ಯ ಕೃಷಿಗೆ ತೊಡಗಿರುವುದು ಹಾಗೂ ಶಾಲಾ ಮಟ್ಟದಲ್ಲಿ ಮಕ್ಕಳ ಶೈಕ್ಷಣಿಕ ಕಲಿಕಾ ಪ್ರಗತಿಗೆ ನಿರಂತರ ಶ್ರಮಿಸುತ್ತಿರುವ ಇವರು ಯಾದಗಿರಿ ಜಿಲ್ಲೆಯ ಶೆಟ್ಟಿಗೇರಾ ಗ್ರಾಮದಲ್ಲಿ ಜನಿಸಿದರು. ಬಡತನದಿಂದ ಬಂದ ಇವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಲಿಂಗೇರಿ ಸ್ಟೇಷನ್ ನಲ್ಲಿ ಪಡೆದು ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ಸರಕಾರಿ ಕಾಲೇಜು ಯಾದಗಿರಿಯಲ್ಲಿ ಪೂರೈಸಿದರು.

ಬಿಇಡ್ ಶಿಕ್ಷಣ ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಕಲ್ಬುರ್ಗಿಯಲ್ಲಿ ಪಡೆದವರು ನಂತರ ಎಂ ಎ. ಸ್ನಾತಕೋತ್ತರ ಪದವಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಪಡೆದು ನೀಟ್ (NET) ಪರೀಕ್ಷೆಯನ್ನು ಪಾಸ್ ಮಾಡಿಕೊಂಡರು.

2011 ರಲ್ಲಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸ ಕರಾಗಿ ಸೇವೆ ಸಲ್ಲಿಸಿದರು. 2012 ರಲ್ಲಿ ಸಿಇಟಿ (CET) ಮೂಲಕ ನೇಮಕಗೊಂಡು ಕಿತ್ತೂರ್ ರಾಣಿ ಚೆನ್ನಮ್ಮ ಮೈಸೂರಿನಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದರು. 2013 ರಲ್ಲಿ ಪುನಃ ಸಿಇಟಿ (CET)ಯ ಮೂಲಕ ನೇಮಕಗೊಂಡು ಶಿಕ್ಷಣ ಇಲಾಖೆಯ ಯಾದಗಿರಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ (ಆರ್ ಎಂ ಎಸ್ ಎ) ಬದೇಪಲ್ಲಿಯಲ್ಲಿ 8 ವರ್ಷ 5 ತಿಂಗಳು ಸೇವೆ ಸಲ್ಲಿಸಿದ್ದಾರೆ. 2021 ರಲ್ಲಿ ವರ್ಗಾವಣೆಯ ಮೂಲಕ ಕಾರಿ ಪ್ರೌಢಶಾಲೆ (ಆರ್ ಎಂ ಎಸ್ ಎ) ಅರಕೇರಾ(ಕೆ) ಶಾಲೆಯಲ್ಲಿ ಈಗ ಸೇವೆ ಸಲ್ಲಿಸುತ್ತಿದ್ದಾರೆ.

ಇಲಾಖೆಯಲ್ಲಿ ನಿರ್ವಹಿಸಿದ ಜವಾಬ್ದಾರಿಗಳು: 2013 ರಿಂದ 7 ವರ್ಷ 6 ತಿಂಗಳ ಕಾಲ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಎಸ್ ಟಿ ಎಫ್ (STF) ಕನ್ನಡ ವಿಷಯದ ನೋಡಲ್ ಅಧಿಕಾರಿ ಯಾಗಿ ಹಾಗೂ ಎಸ್ ಎಸ್ ಎಲ್ ಸಿ ಮತ್ತು ಇತರೆ ಪರೀಕ್ಷೆಗಳ ಮುಖ್ಯ ಅಧೀಕ್ಷಕರಾಗಿ ಕಾರ್ಯನಿರ್ವಹಿಸಿರುವುದು.

ಪ್ರತಿಭಾ ಕಾರಂಜಿ ಹಾಗೂ ಸಹಪಠ್ಯ ಚಟುವಟಿಕೆಗಳ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿರುವುದು. ಶಾಲಾ ಭೌತಿಕ ಸೌಲಭ್ಯಗಳನ್ನು ಉತ್ತಮ ಪಡಿಸಲು ಸಮುದಾಯವನ್ನು ತೊಡಗಿಸಿಕೊಂಡು ಶಾಲೆಗಾಗಿ ಸರಿಸುಮಾರು ಒಂದು ಲಕ್ಷದವರೆಗೆ ದೇಣಿಗೆಯನ್ನು ಸಂಗ್ರಹಿಸಿರುವುದು.

ಶಾಲೆಯಲ್ಲಿ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯನ್ನು ಪ್ರೇರೇಪಿಸಲು ಉಪನ್ಯಾಸ ಕಾರ್ಯಕ್ರಮಗಳನ್ನು ಪ್ರತಿ ಶನಿವಾರ ಶ್ರಮದಾನ ಕಾರ್ಯಕ್ರಮಗಳ ಆಯೋಜನೆಯನ್ನು ಶಾಲಾ ಪರಿಸರ ಬೆಳೆಸಿ ಸಂರಕ್ಷಿಸುವುದು. ಕಾರ್ಯ ಚಟುವಟಿಕೆಗಳ ನಿರಂತರವಾಗಿ ಮಾಡುತ್ತಿರುವುದು.

ಸಂಪನ್ಮೂಲ ವ್ಯಕ್ತಿಯಾಗಿ: ಜಿಲ್ಲಾ ಮತ್ತು ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿರುವುದು. ಜಿಲ್ಲಾ ಮಟ್ಟದ ಸ್ವೀಪ್ (SVEEP) ಸಂಪನ್ಮೂಲ ವ್ಯಕ್ತಿಯಾಗಿ ಡಿಎಲ್ಎಮ್ಟಿ (DLMT) ಕಾರ್ಯನಿರ್ವಹಿಸಿರುವುದು. ಎನ್.ಇ.ಪಿ. -2020 ರಚನಾ ಕೈಪಿಡಿ ಸಂಪನ್ಮೂಲ ವ್ಯಕ್ತಿ. ಸಂವೇದ ಪಾಠಗಳು (ಚಂದನ ವಾಹಿನಿಯಲ್ಲಿ) ಡಿಸರ್ಟ್ (DSERT) ಬೆಂಗಳೂರು. ಮಾಡಿರುವುದು. ಉರ್ದು ಮಾಧ್ಯಮದ ದ್ವಿತೀಯ ಭಾಷೆ ಕನ್ನಡ ಸಂವೇದ ಪಾಠಗಳು ಡಯಟ್ ಯಾದಗಿರಿ ಮಾಡಿರುವುದು.

ಸೇತುಬಂಧ ಸಾಹಿತ್ಯ ರಚನಾ ಸಮಿತಿಯ* 2023 (8ನೆಯ ಕನ್ನಡ ಭಾಷೆ) ಸಂಪನ್ಮೂಲ ವ್ಯಕ್ತಿಯಾಗಿ. ಡಿಸರ್ಟ್ (DSERT) ಯಲ್ಲಿ ಕಲಿಕಾ ಚಟುವಟಿಕೆ ಪುಸ್ತಕ ಹಾಗೂ ಶಿಕ್ಷಕರ ಕೈಪಿಡಿ ರಚನೆಯ ಸಂಪನ್ಮೂಲ ವ್ಯಕ್ತಿಯಾಗಿ. ಡಿಸರ್ಟ್ ( DSERT) ಯಲ್ಲಿ ದ್ವಿಭಾಷಾ ಚಿತ್ರಸಹಿತ ನಿಘಂಟು ರಚನೆಯ ಸಂಪನ್ಮೂಲ ವ್ಯಕ್ತಿಯಾಗಿ. ಟಾಲ್ಸ್ ಇಂಡಕ್ಷನ್ -1 ತರಬೇತಿಯ ಸಂಪನ್ಮೂಲ ವ್ಯಕ್ತಿಯಾಗಿ.

ಚುನಾವಣಾ ಕಾರ್ಯದ ಮಾಸ್ಟರ್ ಟ್ರೈನರ್ ಆಗಿ ಕಾರ್ಯನಿ ರ್ವಣೆ. ಅಪರ ಆಯುಕ್ತರ ಕಾರ್ಯಾಲಯ ಕಲ್ಬುರ್ಗಿ ವತಿಯಿಂದ ವಿಭಾಗ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಣೆ. ಇ -ಕಂಟೆಂಟ್ ರಚನೆಯ ಸಂಪನ್ಮೂಲ ವ್ಯಕ್ತಿಯಾಗಿ, 2024-25ನೇ ಸಾಲಿನ ಕಲಿಕಾಸರೆ ಸಾಹಿತ್ಯದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ.

ಹೀಗೆ ಕನ್ನಡ ಭಾಷೆ ವಿಷಯದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸುತ್ತಾ ಪಿಪಿಟಿಗಳ ಮೂಲಕ ಪಾಠ ಬೋಧನೆ, ಆನೈನ್ ರಸಪ್ರಶ್ನೆ ಕಾರ್ಯಕ್ರಮಗಳು ಐಸಿಟಿ ಮೂಲಕ ಬೋಧನೆ , ಹಾಡುಗಳ ಮೂಲಕ ವ್ಯಾಕರಣ ಅಂಶಗಳ ಬೋಧನೆಯನ್ನು ಮಾಡುವ ಮೂಲಕ ಮಕ್ಕಳಿಗೆ ಕಲಿಕಾ ಹಾಗು ಸುಲಭ ಕಲಿಕೆಗೆ ಹೆಚ್ಚು ಒತ್ತು ನೀಡಿರುವುದು.

ಹವ್ಯಾಸಗಳು: ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಬೋಧನೆಯ ಜೊತೆ ವಿದ್ಯಾರ್ಥಿಗಳ ಕಲಿಕಾ ಮಟ್ಟ ಹೆಚ್ಚಿಸಲು ಶಾಲೆಯಲ್ಲಿ ಸಾಹಿತ್ಯ ಸಂಘ ಮೂಲಕ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊ ಳ್ಳುತ್ತಾ ವಿದ್ಯಾರ್ಥಿಗಳಿಂದ ಲೇಖನಗಳನ್ನು ಹಾಗೂ ಕವನಗಳನ್ನು ಬರೆಯುವ ಹವ್ಯಾಸ ಬೆಳೆಸುತ್ತಿರುವುದು. ಕವನಗಳು ಬರೆಯು ವುದು ಹಾಗೂ ವಾಚಿಸುವುದು. ಲೇಖನಗಳ ಬರವಣಿಗೆ. ಶಾಲೆಯಲ್ಲಿ ಗಿಡ ಮರ ಬೆಳೆಸುವುದು.

ಸಂದ ಪ್ರಶಸ್ತಿಗಳು ಹಾಗೂ ಸನ್ಮಾನಗಳು: ಶಾಲಾ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ. ವಿವೇಕ ಚೇತನ ಚಾರಿಸ್ ಟೇಬಲ್ ಟ್ರಸ್ಟ್ ಬೆಂಗಳೂರು ವತಿಯಿಂದ ಗುರುಶ್ರೀ ಪ್ರಶಸ್ತಿ. ಕಲ್ಯಾಣ ನಾಡು ಸಾಹಿತ್ಯ ಮತ್ತು ಸಂಸ್ಕೃತಿ ನುಡಿ ಶ್ರೀ ಟ್ರಸ್ಟ್ ವತಿಯಿಂದ ಕಲ್ಯಾಣ ನಾಡು ನುಡಿ ಶ್ರೀ ಆದರ್ಶ ಶಿಕ್ಷಕ ಪ್ರಶಸ್ತಿ. ಬೀದರನಲ್ಲಿ ವಿಷಯ ಸಂಪಾದಿಕರಣ ಸಮ್ಮೇಳನ -3 ರಲ್ಲಿ ಸನ್ಮಾನ ಹಾಗೂ ಪುರಸ್ಕಾರ.

ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ವತಿಯಿಂದ 2024ರ ಶಿಕ್ಷಣ ಸೌರಭ ಪ್ರಶಸ್ತಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸನ್ಮಾನ ಹಾಗೂ ಪುರಸ್ಕಾರಗಳು. ಬಂದಿ ರುವ ಇವರಿಗೆ ಮತ್ತೊಂದು ರಾಷ್ಟ್ರಮಟ್ಟದ ಗರಿ ಸಂದಿರುವುದು ಸಂತಸ ತಂದಿದೆ ಎಂದು ಕನ್ನಡ ಭಾಷಾ ಶಿಕ್ಷಕರ ಬಳಗ ಹಾಗೂ ಸ್ನೇಹಿತರ ಬಳಗ ಅಭಿನಂದನೆಗಳು ತಿಳಿಸುವ ಮೂಲಕ ಹರ್ಷ ವ್ಯಕ್ತಪಡಿಸಿದೆ.

Spread the love

Leave a Reply

Your email address will not be published. Required fields are marked *

error: Content is protected !!