ಸುರಪುರ: ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಲು ಜಿಲ್ಲಾಡಳಿತ ಆದೇಶ ಮಾಡಿದ್ದು, ಪ್ರತಿಯೊಬ್ಬರು ಪಾಲಿಸಬೇಕು ಎಂದು ಆರಕ್ಷ ಠಾಣೆಯ ಪೊಲೀಸ್ ನಿರೀಕ್ಷಕ ಆನಂದ್ ವಾಗ್ಮೊಡ್ ಜಾಗೃತಿ ಮೂಡಿಸಿದರು.
ಇಲ್ಲಿನ ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ವೃತ್ತದಲ್ಲಿ ಜಾಗೃತಿ ಮೂಡಿಸಿದ ಅವರು, ಬೈಕ್ ಸವಾರರು ಕಡ್ಡಾಯವಾಗಿ ಹೆಲೈಟ್ ಧರಿಸಿ ಸಂಚರಿಸಬೇಕು. ಸುರಕ್ಷಿತ ಸಂಚಾರಕ್ಕೆ ಮುಂದಾಗಬೇಕು ತಪ್ಪಿದಲ್ಲಿ ದಂಡ ಪಾವತಿಸಬೇಕಾಗುತ್ತದೆ ಎಂದರು.
ದಂಡ ಕಟ್ಟುವ ಬದಲಾಗಿ ಸುರಕ್ಷಿತ ಪ್ರಯಾಣ ನಿಮ್ಮದಾಗಿಸಿಕೊಳ್ಳಿ ಎಂದು ಸಾರ್ವಜನಿಕರಿಗೆ ತಿಳುವಳಿಕೆ ನಗರದಲ್ಲಿ ಅನೇಕ ಕಡೆ ಬೈಕ್ ಸವಾರರಿಗೆ ಹೆಲೈಟ್ ಕಡ್ಡಾಯ ಜಾಗೃತಿ ಮೂಡಿಸುವ ಕೆಲಸ ನಡೆಯಿತು. ಸುರಕ್ಷಿತ ಸಂಚಾರಕ್ಕೆ ಹೆಲೈಟ್ ಧರಿಸಿ ಪ್ರಯಾಣ ಮಾಡಬೇಕು ಎಂದರು. ಈ ವೇಳೆ ಪೊಲೀಸ ಸಿಬ್ಬಂದಿ ಇದ್ದರು.
ಭೀಮರಾಯನ ಗುಡಿ : ಜೀವ ಅಮೂಲ್ಯ, ಹೆಲ್ಮೆಟ್ ಧರಿಸಿ ನಿಮ್ಮ ಪ್ರಾಣವನ್ನು ನೀವೆ ಕಾಪಾಡಿಕೊಳ್ಳಿ, ಬೈಕ್ ಚಲಾಯಿಸುವಾಗ ಹೆಲ್ಮೆಟ್ ಧರಿಸದೆ ನಿಮ್ಮ ಪ್ರಾಣವನ್ನಲ್ಲದೇ ನಿಮ್ಮ ಕುಟುಂಬವನ್ನು ಅಪಾಯಕ್ಕೆ ಒಡ್ಡಬೇಡಿ ಎಂದು ಠಾಣೆಯ ಪಿಎಸ್ಐ ಮಹಾಂತೇಶ್.ಜಿ. ಪಾಟೀಲ್ ಹೇಳಿದರು.
ಭೀ.ಗುಡಿಯ ರಾಜ್ಯ ಹೆದ್ದಾರಿಯಲ್ಲಿ ಪೊಲೀಸ್ ಇಲಾಖೆ ಮತ್ತು ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಮತ್ತು ಸಂಚಾರಿ ನಿಯಮಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಸ್ತೆಯಲ್ಲಿ ದ್ವಿಚಕ್ರ ವಾಹನ ಚಲಿಸುವಾಗ ಹೆಲ್ಮೆಟ್ ಧರಿಸಿದವರಿಗೆ ಗುಲಾಬಿ ಹೂವುಗಳನ್ನು ಕೊಟ್ಟು ಇತರ ಸವಾರರಿಗೆ ಮಾದರಿ ಇವರು ಎಂದು ತಿಳಿಸಿದರು ಹಾಗೂ ಹೆಲ್ಮೆಟ್ ಧರಿಸದೇ ಹೋಗುವವರಿಗೆ ದಂಡಾಸ್ತ್ರವನ್ನು ಪ್ರಯೋಗಿಸಿದರು. ಈ ಸಂದರ್ಭದಲ್ಲಿ ಎಸ್ಐ ಚಂದ್ರಶೇಖರ, ಬಸವರಾಜ, ಪೋಲಿಸ್ ಪೇದೆ ಸುರೇಶ್ ಹಾಗೂ ಇತರರಿದ್ದರು.
ದ್ವಿಚಕ್ರ ವಾಹನ ಸವಾರರಿಗೆ ಹೆಲೈಟ್ ಕಡ್ಡಾಯಗೊ ಳಿಸಿರುವುದು ಸ್ವಾಗತರ್ಹ. ಸುರಕ್ಷಿತ ಪ್ರಯಾಣಕ್ಕೆ ಬಹಳ ಒಳ್ಳೆಯದು. ಸರ್ಕಾರದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದ್ದು ಸಾರ್ವಜನಿಕರ ಕರ್ತವ್ಯ. ಸರ್ಕಾರದ ನಿಯಮವನ್ನು ಪ್ರತಿಯೊಬ್ಬರು ಪಾಲಿಸಬೇಕು. ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಪ್ರತಿಯೊಬ್ಬರು ಸಹಕಾರ ಮಾಡೋಣ – ದೇವೇಂದ್ರಪ್ಪ ಗೌಡ ಪೊ.ಪಾಟೀಲ್ ಮಾಲಗತ್ತಿ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ಉತ್ತರ ಕರ್ನಾಟಕ ಅಧ್ಯಕ್ಷ.