ವಿವಿಧ ಕಾರಣಗಳಿಂದ ತೆರವಾಗಿರುವ ಪಂಚಾಯತಿ ಕ್ಷೇತ್ರಗಳಲ್ಲಿ ಉಪ ಚುನಾವಣೆ ವೇಳಾ ಪಟ್ಟಿ ಪ್ರಕಟ
ಯಾದಗಿರಿ : ರಾಜ್ಯ ಚುನಾವಣಾ ಆಯೋಗವು 2023ರ ಡಿಸೆಂಬರ್ ಮಾಹೆಯಿಂದ 2025ರ ಜನವರಿ ವರೆಗೆ ಅವಧಿ ಮುಕ್ತಾಯವಾಗಲಿರುವ ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ಪಂಚಾಯತಿ ಕ್ಷೇತ್ರಗಳಲ್ಲಿ ಉಪ ಚುನಾವಣೆಯನ್ನು ನಡೆಸಲು ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ ಎಂದು ಜಿಲ್ಲಾ ಚುನಾವಣಾ ಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಶಹಾಪುರ ತಾಲ್ಲೂಕಿನಲ್ಲಿ 11-ಕನ್ಯಾಕೋಳ್ಳೂರು, 19-ಬೀರನೂರು, ಶೋರಾಪುರ ತಾಲ್ಲೂಕಿನಲ್ಲಿ 6-ದೇವಾಪೂರ ಮತ್ತು 3-ಹೆಮನೂರು ಯಾದಗಿರಿ ತಾಲ್ಲೂಕಿನಲ್ಲಿ 9-ಮೂಂಡರಗಿ, 2-ಅರಕೇರಾ (ಬಿ), 11- ಅರಕೇರಾ (ಕೆ), 7-ಬಂದಳ್ಳಿ ಮತ್ತು 13-ಹಳಗೇರಾ, ಗುರುಮಠಕಲ್ ತಾಲ್ಲೂಕಿನಲ್ಲಿ 3-ಮಾದ್ವಾರ, 11-ಕಂದಕೂರ ಮತ್ತು 8-ಯಲಸತ್ತಿ, ಹುಣಸಗಿ ತಾಲ್ಲೂಕಿನ 7-ಮಾರನಾಳ ಮತ್ತು 5-ರಾಜನಕೋಳ್ಳುರ ಕ್ಷೇತ್ರದಲ್ಲ್ಲಿ ತೆರವಾಗಿರುವ ಕ್ಷೇತ್ರಗಳಿಗೆ ಮಾತ್ರ ಚುನಾವಣೆಯನ್ನು ನಡೆಸಲಾಗುವುದು.
ಗ್ರಾಮ ಪಂಚಾಯತಿಗಳಲ್ಲಿಯ ಚುನಾವಣೆ ನಡೆಯುವ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆಯು 2024ರ ನವೆಂಬರ್ 6 ರಿಂದ 2024ರ ನವೆಂಬರ್ 26ರ ರವರೆಗೆ ಜಾರಿಯಲ್ಲಿರುತ್ತದೆ.
ಚುನಾವಣಾ ವೇಳಾಪಟ್ಟಿ : 2024ರ ನವೆಂಬರ್ 6ರ ಬುಧವಾರ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಪ್ರಕಟಿಸಿದೆ. 2024ರ ನವೆಂಬರ್ 12ರ ಮಂಗಳವಾರ ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ನ. 13ರ ಬುಧವಾರ ರಂದು ನಾಮಪತ್ರಗಳನ್ನು ಪರಿಶೀಲನೆ ನಡೆಯಲಿದೆ. 15ರ ಶುಕ್ರವಾರ ರಂದು ಉಮೇದು ವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. 23ರ ಶನಿವಾರ ರಂದು ಮತದಾನದ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಬೆಳಿಗ್ಗೆ 7 ಗಂಟೆಯಿAದ ಸಂಜೆ 5 ಗಂಟೆಯವರೆಗೆ) ನಡೆಯಲಿದೆ.
ನವೆಂಬರ್ 25ರ ಸೋಮವಾರ ರಂದು ಮರು ಮತದಾನದ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ) ನಡೆಯಲಿದೆ. 2024ರ ನವೆಂಬರ್ 26ರ ಮಂಗಳವಾರ ರಂದು ಮತಗಳ ಎಣಿಕೆ ದಿನಾಂಕ ಮತ್ತು ದಿನ (ಬೆಳಿಗ್ಗೆ 8 ರಿಂದ) (ತಾಲ್ಲೂಕು ಕೇಂದ್ರಗಳಲ್ಲಿ) ನಡೆಯಲಿದೆ. 2024ರ ನವೆಂಬರ್ 26ರ ಮಂಗಳವಾರ ರಂದು ಚುನಾವಣೆ ಮುಕ್ತಾಯಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.