ಯಾದಗಿರಿ : ತೊಗರಿ ಬೆಳೆಗೆ 12 ಸಾವಿರ ರೂಪಾಯಿಗಳ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ಮಲ್ಲನಗೌಡ ಹಗರಟಗಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ರೈತರು ಅತಿ ಹೆಚ್ಚು ತೊಗರಿ ಬೇಳೆ ಬೆಳದಿದ್ದು ಅದಕ್ಕೆ ತಕ್ಕ ಬೆಲೆ ಸಿಗದೆ ರೈತರು ತೀವ್ರ ಕಂಗಾಲಾಗಿದ್ದಾರೆ ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ಈಗಾಗಲೆ ತೊಗರಿ ಬೇಳೆಗೆ ನೇಟೆ ರೋಗ ಬಿದ್ದು ಇಳುವರಿ ತುಂಬಾ ಕಡಿಮೆ ಬರುವ ನಿರೀಕ್ಷೆ ಇದೆ ಇನ್ನೂ ಕೆಲವು ತೊಗರಿ ಬೆಳೆಗಳು ಫಲ ಆಗಾದೆ ಒಣಗಿ ನಿಂತಿವೆ.
ರೈತರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ರಾಸಾಯನಿಕ ಗೊಬ್ಬರ ಕ್ರಿಮಿನಾಶಕಗಳ ತೈಲದ ಬೆಲೆ ಕೂಲಿ ಕಾರ್ಮಿಕರ ಕೂಲಿ ದರವು ದಿನೆ ದಿನೆ ಹೆಚ್ಚಾಗುತ್ತಿದ್ದು, ಇದರಿಂದ ರೈತರು ತುಂಬಾ ಸಂಕಷ್ಟ ದಲ್ಲಿದ್ದಾರೆ. ಆದರೆ ರೈತ ಬೆಳೆದ ಬೆಳೆಗೆ ಮಾತ್ರ ಸರಿಯಾದ ಬೆಲೆ ಸಿಗುತ್ತಿಲ್ಲ ಇದರೆ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ರೈತರಿಗೆ ಬೆಂಬಲ ಬೆಲೆಯಡಿ ಪ್ರತಿ ಕ್ವಿಂಟಾಲ್ ಗೆ ಕ ನಿಷ್ಠ 12 ಸಾವಿರ ರೂಪಾಯಿಗಳ ನಿಗದಿ ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಒಂದು ವೇಳೆ ನಿರ್ಲಕ್ಷ ವಹಿಸಿದ್ದಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಉಗ್ರ ಹೋರಾಟ ಮಾಡುವುದಾಗಿ ಸುರಪುರ ತಾಲೂಕ ಅಧ್ಯಕ್ಷ ಮುತ್ತುಗೌಡ, ಯಾದಗಿರಿ ತಾಲೂಕ ಅಧ್ಯಕ್ಷ ಮಹಿಪಾಲ ರೆಡ್ಡಿ ಪಾಟೀಲ್ , ಶಹಾಪುರ ತಾಲೂಕ ಅಧ್ಯಕ್ಷ, ವಡಗೇರಾ ತಾಲೂಕು ಅಧ್ಯಕ್ಷ ವಿದ್ಯಾಧರ್ ಜಾಕ, ದೇವಿಂದ್ರಪ್ಪ ಕೋಲಕರ್ ,ಶಿವಶಂಕರ ರೆಡ್ಡಿ ನಗನೂರ, ಬಂದೇನವಾಜ್ ಯಾಳಗಿ, ಶರಣು ಜಡಿ ಹಾಗೂ ಇನ್ನಿತರರು ಸರಕಾರಕ್ಕೆ ಎಚ್ಚರಿಸಿದ್ದಾರೆ.