ಯಾದಗಿರಿ: ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ವತಿಯಿಂದ ಅ. ೭ ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಮಾಜದ ವತಿಯಿಂದ ನಿರ್ಧಾರ ಮಾಡಿದ್ದೇವೆ ಎಂದು ವಾಲ್ಮೀಕಿ ನಾಯಕ ಸಮಾಜದ ಮುಖಂಡ ಭೀಮರಾಯ ಠಾಣಗುಂದಿ ಹೇಳಿದರು.
ಸೋಮವಾರ ನಗರದ ವಾಲ್ಮೀಕಿ ಭವನದಲ್ಲಿ ಆಯೋಜಿಸಿದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಪೂರ್ವಭಾವಿಯನ್ನು ಉದ್ದೇಶಿಸಿ ಮಾತನಾಡಿದರು.
ವಾಲ್ಮೀಕಿ ನಾಯಕ ಸಮಾಜದ ಜನಸಂಖ್ಯೆ ನಮ್ಮ ಜಿಲ್ಲೆಯಲ್ಲಿ ಅತಿ ಹೆಚ್ಚು ಇದ್ದಾರೆ. ಎಲ್ಲರು ಸೇರಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅರ್ಥಪೂರ್ಣವಾಗಿ ಆಚರಣೆ ಮಾಡೋಣ ಅಂದು ತಮ್ಮ ತಮ್ಮ ಗ್ರಾಮಗಳಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಮಾಡಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ ಜಯಂತಿಯಲ್ಲಿ ವಾಲ್ಮೀಕಿ ಸಮಾಜದ ಮುಖಂಡರು ಮಹಿಳೆಯರು. ಯುವಕರು. ಪಾಲ್ಗೊಗೊಂಡು ಯಶಸ್ವಿಯಾಗಿ ಕಾರ್ಯಕ್ರಮ ಮಾಡೋಣ ಎಂದು ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮಾಜಕ್ಕೆ ಸೇವೆ ಸಲ್ಲಿಸಿ ಶ್ರಮಿಸಿದ ಹಿರಯರನ್ನು ಗೌರವವಿಸುವುದು. ವಿಶೇಷ ಉಪನ್ಯಾಸ ನೀಡುವುದು. ಕಾರ್ಯಕ್ರಮದ ಮುಂಚಿತವಾಗಿ ನಗರದ ತಹಸೀಲ್ದಾರರ ಕಛೇರಿಯಿಂದ ವಾಲ್ಮೀಕಿ ಭವನದವರೆಗೆ ಮೆರವಣಿಗೆ ಇರುತ್ತದೆ ಎಂದು ಮಾಹಿತಿ ನೀಡಿದರು.
ಈ ಸಭೆಯಲ್ಲಿ ವಾಲ್ಮೀಕಿ ನಾಯಕ ಸಮಾಜದ ತಾಲೂಕು ಅಧ್ಯಕ್ಷರಾದ ಸಾಹೇಬಗೌಡ ನಾಯಕ ಗೌಡಗೇರ. ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾ ಮುಖಂಡರಾದ ಸಿದ್ದಲಿಂಗಪ್ಪ ನಾಯಕ. ದೊಡ್ಡಯ್ಯ ನಾಯಕ ಹಳಗೇರಾ. ಶರಣಪ್ಪ ಜಾಕನಳ್ಳಿ. ಅಂಬು ನಾಯಕ. ರವಿ ಕೂಡ್ಲೂರು . ಬಸವರಾಜ ಕಾವಲ್ದಾರ. ರೋಹಿತ್ ಹುಲಿನಾಯಕ . ಮೋನಪ್ಪ . ರಘುಪತಿ ಗೌಡಗೇರಿ . ಬಸವರಾಜ ಬಾಚವಾರ್ . ಸಾಬು ನಾಯಕ ಬಗಲಿ . ಹನುಮಂತ ನಾಯಕ ನಗರಸಭೆ ಸದಸ್ಯರು. ನರಸಪ್ಪ ನಾಯಕ. ಸಿದ್ದಪ್ಪ ಕ್ಯಾಸಪನಳ್ಳಿ. ಲಕ್ಷ್ಮಣ. ಅಂಜನೇಯ ನಾಯಕ. ಭೀಮರಾಯ ರಾಮಸಮುದ್ರ. ಮೋನಪ್ಪ ಯಾದಗಿರಿ. ದೊಡ್ಡಪ್ಪನಾಯಕ .ಕಾಶಪ್ಪ ದೊರೆ ಮಲ್ಲಿಕಾರ್ಜುನ್ ನೀಲಹಳ್ಳಿ ಇತರರು ಇದ್ದರು.
