ಮುಖ್ಯಗುರು ಅಮಾನತು, ಡಿಡಿಪಿಐ ಕಚೇರಿ ಎದುರು ಕಣ್ಣೀರು ಹಾಕಿದ ತಾಂಡಾ ವಿದ್ಯಾರ್ಥಿಗಳು | ಕೊನೆಗೂ ಅಮಾನತು ಆದೇಶ ಹಿಂಪಡೆದ ಶಿಕ್ಷಣ ಇಲಾಖೆ
ಯಾದಗಿರಿ: ಈ ಮುಖ್ಯಗುರು ಕರ್ತವ್ಯ ನಿಷ್ಠೆ, ಮಕ್ಕಳ ಶೈಕ್ಷಣಿಕ ಏಳ್ಗೆಗಾಗಿ ದುಡಿಮೆ, ಈ ತಾಂಡಾದ ಮಕ್ಕಳು ಪಾಲಕರ ಜೊತೆ ಗುಳೆ ಹೋಗಿದ್ದರೇ ಮುಂಬೈಗೆ ತೆರಳಿ ಪಾಲಕರ ಮನವೋಲಿಸಿ ಮರಳಿ ಶಾಲೆಗೆ ಕರೆತಂದ ಮೇರು ವ್ಯಕ್ತಿತ್ವ ಬಡ ಮಕ್ಕಳ ಬಗ್ಗೆ ಅತೀ ಕಾಳಜಿ ಹೊಂದಿರುವ ಮುಖ್ಯಗುರು…!
ಕನಕಪ್ಪ ಅಮಾನತು ಮಾಡಿರುವುದನ್ನು ಖಂಡಿಸಿ ಗುರುಮ ಠಕಲ್ ಕ್ಷೇತ್ರದ ವೆಂಕಟೇಶ ನಗರ ತಾಂಡಾ ಶಾಲಾ ವಿದ್ಯಾರ್ಥಿ ಗಳು ಕರ್ನಾಟಕ ಬಂಜಾರ ಸೇವಾ ಸಂಘದ ಪ್ರಮುಖರ ನೇತೃತ್ವ ದಲ್ಲಿ ಡಿಡಿಪಿಐ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಇದಕ್ಕೆ ಕೆ ಆರ್ ಎಸ್ ಪಕ್ಷದವರು ಭಾಗವಹಿಸಿದ್ದು ಕಂಡು ಬಂತು.
ಅಂದಹಾಗೆ ಯಾಕಪ್ಪ ಕನಕಪ್ಪ ಅವರು ಸಸ್ಪೆಂಡ್ ಆಗಿದ್ದು ಎಂದು ನೋಡೊದಾದ್ರೇ, ತಾಂಡಾದ ಮಕ್ಕಳನ್ನು ಅಧಿಕಾರಿಗಳ ಅನುಮತಿ ಪಡೆಯದೇ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು ಎನ್ನುವ ಕಾರಣಕ್ಕೆ ಅಮಾನತು ಮಾಡಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.
ಮಕ್ಕಳಿಗೆ ಅಚ್ಚು ಮೆಚ್ಚಿನ ಮುಖ್ಯ ಗುರುವಾಗಿದ್ದರಿಂದ ಏನು ಅರಿಯದ ಮಕ್ಕಳು ಮುಖ್ಯ ಗುರು ಅಮಾನತು ವಿಷಯ ತಿಳಿದು ಅಂತ್ಯತ ಮಾನಸಿಕವಾಗಿ ಕುಗ್ಗಿದ್ದರು, ಏನೂ ಮಾಡೋದು ಎನ್ನುವುದು ತೋಚದಾಗ ನೇರವಾಗಿ ಡಿಡಿಪಿಐ ಕಚೇರಿಗೆ ಬಂದಿದ್ದರು. ಪ್ರತಿಭಟನೆಯ ವೇಳೆ ಕೆಲವು ಮಕ್ಕಳು ದಣಿದು ಅಸ್ವಸ್ಥಗೊಂಡ ಘಟನೆಯೂ ನಡೆದಿದೆ. ಬಳಿಕ ಮಕ್ಕಳಿಗೆ ಪಾಲಕರು ನೀರು ಕುಡಿಸಿ ಸಮಾಧಾನ ಪಡಿಸುತ್ತಿದ್ದರು.
ಮಕ್ಕಳ ಆಕ್ರಂದನ ತಣಿಸಲು ಮುಖ್ಯ ಗುರು ಕನಕಪ್ಪ ಅವರೇ ಪ್ರತಿಭಟನಾ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಮಕ್ಕಳು ಗುರುಗಳ ಕೈ ಹಿಡಿದು ಕಣ್ಣೀರು ಹಾಕುತ್ತಿದ್ದಂತೆ ಅವರ ಕಣ್ಣಂಚು ಕೂಡ ನೆನೆದವು, ನೆರೆದವರು ಇದೆಂತಾ ಗುರು ಶಿಷ್ಯರ ಭಾವನೆ ಎಂದು ಮಾತನಾಡಿಕೊಳ್ಳುತ್ತಿದ್ದರು.
ಯಾದಗಿರಿ ತಾಲೂಕಿನ ವೆಂಕಟೇಶನಗರ ಗ್ರಾಮದ ಸ.ಹಿ.ಪ್ರಾ. ಶಾಲೆಯ ಮುಖ್ಯ ಗುರು ಕನಕಪ್ಪ ಅವರನ್ನು ಅಮಾನತ್ತುಗೊ ಳಿಸಿದ್ದು, ಈ ಶಾಲೆಯಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು, ಮುಂಬೈ, ಪುನಾ:ಕ್ಕೆ ವಲಸೆ ಹೋದ ಬಂಜಾರ ಸಮುದಾಯದ ಮಕ್ಕಳನ್ನು ಊರಿಗೆ ಕರೆದುಕೊಂಡು ಬಂದು ಶಾಲೆಗೆ ದಾಖಲು ಮಾಡಿದ್ದಾರೆ. ಆದರೆ ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದು ಕೊಂಡು ಹೋಗಿದ್ದಕ್ಕೆ ಅವರನ್ನು ಗುರಿ ಮಾಡಿ, ಅಮಾನತ್ತುಗೊ ಳಿಸಿದ್ದು, ಎಷ್ಟರ ಮಟ್ಟಿಗೆ ಸರಿ, ವಾರ್ಷಿಕ ಪರೀಕ್ಷೆ ಸಮೀಪಿಸುತ್ತಿ ದ್ದು, ಮಕ್ಕಳಿಗೆ ಪಾಠ-ಬೋಧನೆಗೆ ಹಿನ್ನಡೆ ಆಗುತ್ತದೆ. ಹಾಗಾಗಿ ಇವರ ಅಮಾನತ್ತನ್ನು ವಾಪಾಸ್ ತೆಗೆದುಕೊಂಡು, ಅಮಾನತ್ತಿ ನಿಂದ ಮುಕ್ತಗೊಳಿಸಿ, ಆದೇಶ ಹಿಂಪಡೆಯಲು ಒತ್ತಾಯಿಸಿದರು.
ಶಾಲಾ ಮಕ್ಕಳು, ಪೋಷಕರು, ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರ ಪ್ರತಿಭಟನೆಗೆ ಮಣಿದು ಶಿಕ್ಷಣ ಇಲಾಖೆ ಅಧಿಕಾರಿಗಳು ಅಮಾನತು ವಾಪಸ್ ಪಡೆಯುವಂತಾಯಿತು ಎಂದು ತಿಳಿದು ಬಂದಿದೆ.
ಸೇವಾ ಸಂಘದ ಜಿಲ್ಲಾಧ್ಯಕ್ಷ ಬಂಗಾರು ಜೆ.ಬಿ, ಕೆ.ಆರ್ ಎಸ್ ಪಕ್ಷದ ನಿಜಲಿಂಗಪ್ಪ ಪೂಜಾರಿ, ರಾಠೋಡ,ವಿಜಯ ಜಾಧವ್, ತಾರಾಸಿಂಗ್ ಚವ್ಹಾಣ,ರಾಜು ಚವ್ಹಾಣ, ಚಂದ್ರಿಬಾಯಿ ಚವ್ಹಾಣ, ಜನಾರ್ಧನ ರಾಠೋಡ, ರೇಣುಕಾ ವೆಂಕಟೇಶ ರಾಠೋಡ ಇತರರು ಇದ್ದರು.
