ಯದ್ಲಾಪೂರ ವ್ಯಕ್ತಿ ವಿದ್ಯುತ್ ಅವಘಡದಲ್ಲಿ ಸಾವು | ಶಾಸಕ ಶರಣಗೌಡ ಕಂದಕೂರರಿಂದ ಪರಿಹಾರ ಚೆಕ್ ವಿತರಣೆ

ಯಾದಗಿರಿ : ಕೆಲ ದಿನಗಳ ಹಿಂದೆ ಗುರುಮಠಕಲ್ ತಾಲೂಕಿನ ಯದ್ಲಾಪುರ್ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಅನಿಲ್ ಸಾಬಣ್ಣ ಇವರಿಗೆ ಜೆಸ್ಕಾಂ ಇಲಾಖೆಯ ವತಿಯಿಂದ ಮಂಜೂರಾದ ₹5 ಲಕ್ಷ ಪರಿಹಾರ ಧನವನ್ನು ಗುರುಮಠಕಲ್ ಮತಕ್ಷೇತ್ರದ ಯುವ ಶಾಸಕರಾದ ಶರಣಗೌಡ ಕಂದಕೂರ ಅವರು ಮೃತನ ತಂದೆಗೆ ವಿತರಿಸಿ, ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಜನತಾದಳ ಪಕ್ಷದ ಜಿಲ್ಲಾಧ್ಯಕ್ಷರಾದ ಸುಭಾಷ್ ಚಂದ್ರ ಕಟಕಟಿ, ಯದ್ಲಾಪುರ್ ಗ್ರಾಮದ ಮುಖಂಡರಾದ ಅನಂತಪ್ಪ ಬೋಯಿನ್, ಮಹೇಶ್, ಲಿಂಗಾರೆಡ್ಡಿ ಮತ್ತು ಜೆಸ್ಕಾಂ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರದ ಮಾನಪ್ಪ ಮತ್ತು ಶಾಖಾಧಿಕಾರಿಯಾದ ಗೋಳಪ್ಪ ಮತ್ತು ಸಂದೀಪ್ ಹಜಾರೆ ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!