ಡಿ. 23 ರಿಂರ 28 ರ ವರೆಗೆ ವಿವಿಧ ಆಸ್ಪತ್ರೆಗಳಲ್ಲಿ ತಪಾಸಣೆ | ಸಾಧನೆ ಸಲಕರಣೆ ವಿತರಣೆ
ಯಾದಗಿರಿ : ವಿಕಲಚೇತನರಿಗೆ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶರಣಪ್ಪ ಪಾಟೀಲ ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಅಲಿಂಕೋ ಸಂಸ್ಥೆಯ ಎಸ್.ಆರ್.ಟ್ರಸ್ಟ್ರವರು ವಿಕಲಚೇತನರನ್ನು ಪರಿಶೀಲಿಸಿ ವಿಕಲತೆಗಳಿಗೆ ಅನುಸಾರವಾಗಿ ಅವಶ್ಯವಿರುವ ಸಾಧನ ಸಲಕರಣೆಗಳನ್ನು ಸ್ಥಳದಲ್ಲಿ ವಿತರಿಸುವರು.
ಯಾದಗಿರಿ ಜಿಲ್ಲಾ ಹಾಗೂ ತಾಲೂಕ ಮಟ್ಟದಲ್ಲಿ ನಡೆಯಲಿರುವ ವೈದ್ಯಕೀಯ ಶಿಬಿರಕ್ಕೆ ಜಿಲ್ಲೆಯ ವಿಕಲಚೇತನರು ಶಿಬಿರಕ್ಕೆ ಹಾಜರಾಗಿ ತಪಾಸಣೆ ಮಾಡಿಸಿಕೊಳ್ಳಬೇಕು. ಹಾಗೂ ಅರ್ಹ ವಿಕಲಚೇತನರಿಗೆ ಸ್ಥಳದಲ್ಲೇ ಸಾಧನ ಸಲಕರಣೆಗಳನ್ನು ವಿತರಿಸಲಾಗುವುದು ಜಿಲ್ಲೆಯ ವಿಕಲಚೇತನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಮನವಿ ಮಾಡಿದ್ದಾರೆ.
2024ರ ಡಿಸೆಂಬರ್ 23 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯ ವರೆಗೆ ಯಾದಗಿರಿ ಜಿಲ್ಲಾ ಆಸ್ಪತ್ರೆದಲ್ಲಿ ಶಿಬಿರ ನಡೆಯಲಿದೆ. 2024ರ ಡಿಸೆಂಬರ್ 24 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯ ವರೆಗೆ ಗುರುಮಠಕಲ್ ತಾಲೂಕು ಆಸ್ಪತ್ರೆದಲ್ಲಿ ಶಿಬಿರ ನಡೆಯಲಿದೆ.
2024ರ ಡಿಸೆಂಬರ್ 25 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯ ವರೆಗೆ ಶಹಾಪೂರ ತಾಲೂಕು ಆಸ್ಪತ್ರೆದಲ್ಲಿ ಶಿಬಿರ ನಡೆಯಲಿದೆ. 2024ರ ಡಿಸೆಂಬರ್ 26 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯ ವರೆಗೆ ವಡಗೇರಾ ತಾಲೂಕು ಆಸ್ಪತ್ರೆದಲ್ಲಿ ಶಿಬಿರ ನಡೆಯಲಿದೆ. 2024ರ ಡಿಸೆಂಬರ್ 27 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯ ವರೆಗೆ ಸುರಪುರ ತಾಲೂಕ ಆಸ್ಪತ್ರೆದಲ್ಲಿ ಶಿಬಿರ ನಡೆಯಲಿದೆ. 2024ರ ಡಿಸೆಂಬರ್ 28 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯ ವರೆಗೆ ಹುಣಸಗಿ ತಾಲೂಕು ಆಸ್ಪತ್ರೆದಲ್ಲಿ ಶಿಬಿರ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ತಾಲೂಕ ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತರನ್ನು ಯಾದಗಿರಿ ಭೀಮರಾಯ ಮೊ.ನಂ. 9742865853, ಸುರಪುರ ಮಾಳಪ್ಪ ಮೊ.ನಂ. 9945373847, ಶಹಾಪೂರ ನಾಗರಾಜ ಮೊ.ನಂ. 8296107462 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.