ಕೋಲಿ ಸಮಾಜ ಪ.ಪಂಗಡಕ್ಕೆ ಸೇರ್ಪಡೆಯಾಗದೇ ಇರಲು ಸರ್ಕಾರಗಳೇ ಕಾರಣ
ಯಾದಗಿರಿ: ಮಾಜಿ ಮುಖ್ಯ ಸಚೇತಕ್ ದಿ.ವಿಠಲ್ ಹೇರೂರು ಅವರ ಪ್ರತಿ ವರ್ಷದಂತೆ ಈ ವರ್ಷವೂ ಕೂಡ 11 ನೇ ವರ್ಷದ ಪುಣ್ಯ ಸ್ಮರಣೆ ನಗರದ ಟೋಕ್ರೆ ಕೋಲಿ ಸಮಾಜದ ಜಿಲ್ಲಾ ಕಚೇರಿಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಮೊದಲಿಗೆ ವಿಠಲ್ ಹೇರೂರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಸಮಾಜದ ಅಭಿವೃದ್ಧಿಗೆ ತಮ್ಮ ಜೀವಮಾನವನ್ನೇ ಅರ್ಪಣೆ ಮಾಡಿದ ವಿಠಲ್ ಹೇರೂರು ಅವರ ಹೆಸರನ್ನು ಉಳಿಸಬೇಕಾಗಿದೆ ಎಂದರು.
ಇಡೀ ದೇಶದಲ್ಲೆ 16 ರಾಜ್ಯದಲ್ಲಿ ಪರಿಶಿಷ್ಟ ಜಾತಿ, 9 ರಾಜ್ಯದಲ್ಲಿ ಪರಿಶಿಷ್ಟ ಪಂಗಡದಲ್ಲಿ ಕೋಲಿ ಸಮಾಜದ ಇದೆ. ಆದರೆ, ಕರ್ನಾಟಕ ರಾಜ್ಯದಲ್ಲಿ ಹಿಂದುಳಿದ ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಗಳಿಗೆ ಸೇರ್ಪಡೆ ಮಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೇ ಕಾರಣಿಭೂತ ಎಂದು ಸಾರಿ ಸಾರಿ ಹೇಳಿದರು. ಇದಕ್ಕಾಗಿ ಹಗಲಿರುಳು ಶ್ರಮಿಸಿ ತಮ್ಮ ಜೀವನವನ್ನೇ ಸವೆಸಿದ ಧೀಮಂತ ನಾಯಕ ವಿಠ್ಠಲ್ ಹೇರೂರು ಎಂದು ಹೇಳಿದರು.
ಆದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸ್ಪಂದನೆ ನೀಡದೇ ಇರುವುದರಿಂದ ಇದುವರೆಗೆ ಇವರ ಆಸೆ ಇಡೇರದಂತಾಗಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.
ಕೆಲವು ರಾಜಕಾರಣಿಗಳು ಕುತಂತ್ರದಿಂದ ಸಮುದಾಯ ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಮುಂದೆ ಬಾರದಂತೆ ಆಗಿದೆ ಎಂದರು. ಸ್ವಾತಂತ್ರ್ಯ ನಂತರ ಇಂದಿಗೂ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡಿದ್ದಾರೆ. ಆದರೆ ಸೌಲತ್ತು ಮತ್ತು ಸಮಾಜಿಕ ನ್ಯಾಯ ಕೊಡುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ದೂರಿದರು.
ಅಂಬಿಗರ ಚೌಡಯ್ಯನವರನ್ನು ರಾಜ್ಯದಾದ್ಯಂತ ಜ್ಯೋತಿಯಾತ್ರಾ ಮಾಡುವ ಮೂಲಕ ಸಮಾಜಕ್ಕೆ ಎಲ್ಲ ಕಡೆ ಪರಿಚಯಿಸಿದ ಮಹಾನ್ ಧೀಮಂತ ಪುರುಷರಾಗಿದ್ದು, ಇವರ ಪುಣ್ಯಸ್ಮರಣೆ ಮತ್ತು ಹುಟ್ಟುಹಬ್ಬ ವನ್ನು ಪ್ರತಿಯೊಬ್ಬರು ಮಾಡಬೇಕು, ಇವರಿಂದಾಗಿ ಜಯಂತ್ಯುತ್ಸವ ಆಯಿತು. ಚೌಡಯ್ಯ ಅಭಿವೃದ್ಧಿ ನಿಗಮ, ಹಾವೇರಿಯಲ್ಲಿ ಅಂಬಿಗರ ಚೌಡಯ್ಯ ಪೀಠ ಆಗಲು ಇವರು ಕಾರಣಿಕರ್ತರಾಗಿದ್ದಾರೆೆ ಎಂದು ವಿವರಿಸಿದರು. ನಂತರ ಶರಣಪ್ಪ ಹದನೂರು ವಿಠ್ಠಲ್ ಹೇರೂರ್ ರವರ ಹೋರಾಟದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಟಿ. ರಾಮುಲು, ಜಿ ವೆಂಕಟೇಶ್, ವಿಥೇಶ್ ಕುಮಾರ್, ಆಂಜನೇಯ, ಮಾರುತಿ, ವಿಶ್ವನಾಥ್, ಸಿದ್ರಾಮಪ್ಪ ಬಾಗ್ಲಿ ,ಭಾಗಣ್ಣ, ರವೀಂದ್ರ, ಯಲ್ಲಪ್ಪ ಮಹನಂದಿ, ಮರೆಪ್ಪ, ಹಣಮಂತ, ರವಿ ಕುಮಾರ್, ದೇವೀಂದ್ರಪ್ಪ, ಮರೆಪ್ಪ ಅಂಬಿಗೇರ, ಮಲ್ಲೇಶ್, ಬಸವರಾಜ, ಯಲ್ಲಾಲಿಂಗ, ಸಾಬರೆಡ್ಡಿ, ದೇವು, ಜಗದೀಶ್, ಮಹದೇವ್, ಶಿವಪ್ಪ, ಮಲ್ಲಣ್ಣ , ಭೀಮರಾಯ, ಗುಂಜಾಲಪ್ಪ ಆಶಾನಾಳ, ವೆಂಕಟೇಶ್ ಕೌಳೂರು, ಗೋವಿಂದ, ನರಸಿಂಹ, ಶರಣು , ಸಾಬಯ್ಯ , ಶರಣು, ಶಿವರಾಜ, ಮರೆಪ್ಪ, ಮಹದೇವಪ್ಪ, ಶಿವರಾಜ, ಸಿದ್ದಪ್ಪ , ಬಾಬು ಖಾನ್, ಭೀಮರಾಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.