ಯಾದವ ಸಮಾಜ ಭಾರತೀಯ ಸೇನೆಯಲ್ಲಿ ಪ್ರತ್ಯೇಕ ಮಿಸಲಾತಿ ಪಡೆಯುವ ಹೋರಾಟವಿದು | ಎಂಎಲ್ ಸಿ ಡಿಟಿ ಶ್ರೀ ನಿವಾಸ ಅಭಿಪ್ರಾಯ
ಯಾದಗಿರಿ: ಅಖಿಲ ಭಾರತ ಯಾದವ ಮಹಾಸಭಾ ಹಾಗೂ ರಾಜ್ಯ ಗೊಲ್ಲ (ಯಾದವ) ಸಂಘದ ಗೊಲ್ಲ (ಯಾದವ) ಕಳಸ ಯಾತ್ರೆಗೆ ಜಿಲ್ಲಾ ಯಾದವ ಸಮಾಜದ ಜಿಲ್ಲಾಧ್ಯಕ್ಷ ತಾಯಪ್ಪ ಯಾದವ ಕಾಳೆಬೆಳಗುಂದಿ ನೇತೃತ್ವದಲ್ಲಿ ಶನಿವಾರ ರಾತ್ರಿ ಶ್ರದ್ಧಾ-ಭಕ್ತಿಯೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಿಕೊಳ್ಳಲಾಯಿತು.
ಗುರುಸುಣಗಿ ಕ್ರಾಸ್ ಬಳಿ ಈ ಯಾತ್ರೆ ಬರುತ್ತಿದ್ದಂತೆಯೇ ಜಿಲ್ಲೆಯ ಯಾದವ ಸಮಾಜದ ಪದಾಧಿಕಾರಿಗಳು, ಮುಖಂಡರು, ಮಹಿಳೆಯರು ಅದಕ್ಕೆ ವಿಶೇಷ ಪೂಜೆ ಸಲ್ಲಿಸಿದರು ನಂತರ ಯಾತ್ರೆ ಸುಭಾಷ ಸರ್ಕಲ್, ಶಾಸ್ತ್ರಿ ಚೌಕ್ ವರೆಗೂ ಜೈಘೋಷಗಳೊಂದಿಗೆ ಸಾಗಿಬಂತು.
ಈ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷರೂ ಆದ ಎಂಎಲ್‌ಸಿ ಡಿ.ಟಿ.ಶ್ರೀನಿವಾಸ ಅವರು, ಗೊಲ್ಲ (ಯಾದವ) ಕಳಸ ಯಾತ್ರೆಯ ಮುಖ್ಯ ಉದ್ದೇಶ 1962 ರಲ್ಲಿ ಭಾರತ-ಚೀನಾ ರೆಜಾಂಗ್ಲಾ ಕದನದಲ್ಲಿ ವೀರ ಮರಣವನ್ನಪಿದ 114 ಯಾದವ ಸಮುದಾಯದ ಹುತಾತ್ಮರಿಗೆ ಗೌರವ ಸಮರ್ಪಣೆಯಾಗಿ ಭಾರತೀಯ ಸೇನೆಯಲ್ಲಿ ಪ್ರತ್ಯೇಕ (ರೆಜಿಮೆಂಟ್) ಮೀಸಲಾತಿ ಪಡೆಯುವ ಹೋರಾಟವಾಗಿದೆ ಎಂದರು.
ಮುಂದಿನ ತಿಂಗಳು ರಾಜ್ಯದಲ್ಲಿ ನಡೆಯಲಿರುವ ಜಾತಿ ಗಣತಿ ಸಮೀಕ್ಷೆಯಲ್ಲಿ ತಮ್ಮ ಕುಟುಂಬದ ವಿವರ ಜೊತೆಗೆ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ನಮೂದು ಕಡ್ಡಾಯವಾಗಿ ಮಾಡಿಸಬೇಕೆಂದು ಜಿಲ್ಲಾಧ್ಯಕ್ಷ ತಾಯಪ್ಪ ಯಾದವ ಸಮಾಜದ ಜನರಿಗೆ ಮನವಿ ಮಾಡಿದರು.
ಸುರಪುರದಿಂದ ಯಾತ್ರೆ ಜೊತೆ ಆಗಮಿಸಿದ್ದ ರಾಜ್ಯ ಉಪಾಧ್ಯಕ್ಷ ವಿಠಲ್ ಯಾದವ ಮಾತನಾಡಿದರು.
ಭೀಮಣ್ಣಗೌಡ ಕ್ಯಾತನಾಳ್, ಪ್ರದೀಪ್ ಪುರ್ಲೆ, ನಾಗಪ್ಪ ವನಗೇರಿ, ಸುಭಾಷ ಬುಗ್ಗೆಪಲ್ಲಿ ಸೇರಿದಂತೆಯೇ ಇತರರಿದ್ದರು. ಈ ವೇಳೆ ರಾಜ್ಯಾಧ್ಯಕ್ಷ ಶ್ರೀನಿವಾಸ ಅವರಿಗೆ ಸಮಾಜದ ಪರವಾಗಿ ಜಿಲ್ಲಾಧ್ಯಕ್ಷರು ಸನ್ಮಾನಿಸಿದರು. ಯಾದವ ಕಳಸ ಯತ್ರೆ ನಂತರ ಇಲ್ಲಿಂದ ಗುರುಮಠಕಲ್‌ಗೆ ತೆರಳಿ ರಾತ್ರಿ ಅಲ್ಲಿ ಖಾಸಾಮಠದ ಶ್ರೀಗಳು ಸ್ವಾಗತಿಸಿ ನಂತರ ತೆಲಂಗಾಣ ರಾಜ್ಯಕ್ಕೆ ಬೀಳ್ಕೊಟ್ಟರು.
