ಯಂಪಾಡ, ಕಂದಕೂರ ಗ್ರಾಮಕ್ಕೆ ಸಿಇಓ ಭೇಟಿ | ವಿವಿಧ ಕಾಮಗಾರಿಗಳು ಪರಿಶೀಲಿಸಿದ ಸಿಇಓ ಲವೀಶ್ ಒರಡಿಯಾ

ಯಾದಗಿರಿ: ಗುರುಮಠಲ್ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಯಂಪಾಡ ಗ್ರಾಮ ಪಂಚಾ ಯಿತಿಯ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರ ಸಭೆ ಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಕಾಮಗಾರಿಗಳು, ಸ್ವಚ್ಛ ಭಾರತ್ ಮಿಷನ್, ಕರ ವಸೂಲಿ ಸೇರಿದಂತೆ ಇನ್ನಿತರ ವಿಷಯಗಳು ಕುರಿತು ಚರ್ಚಿಸಿದರು ಅವರು ಮಾತನಾಡಿದರು.

ನಂತರ ಕೂಸಿನ ಮನೆ, ಗ್ರಂಥಾಲಯಕ್ಕೆ ಭೇಟಿ ನೀಡಿ ಮೂಲಸೌಕರ್ಯಗಳ ಕುರಿತು ವೀಕ್ಷಿಸಿದರು. ನಂತರ ಯಂಪಾಡ ಮತ್ತು ಸುಭಾಷ್ ನಗರದಲ್ಲಿ ನಡೆಯುತ್ತಿರುವ ಹಳ್ಳ ಹುಳೆತ್ತುವ ಕಾಮಗಾರಿ ವೀಕ್ಷಿಸಿ ಕೂಲಿಕಾರ ಸಮಸ್ಯೆಗಳು ಆಲಿಸಿದರು.

ಕಂದಕೂರ ಗ್ರಾಮ ಪಂಚಾಯತಿಗೆ ತೆರಳಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಸ್ವಚ್ಛತೆ, ಮೂಲ ಸೌಕರ್ಯಗಳು ಸೇರಿದಂತೆ ಇನ್ನಿತರ ಸೌಲಭ್ಯಗಳ ಕುರಿತು ಪರಿಶೀಲಿಸಿದರು. ವೈದ್ಯಾಧಿಕಾರಿಗಳಿಗೆ ಮತ್ತು ಶುಶ್ರೂಕರಿಗೆ ಸಾರ್ವಜನಿಕರಿಗೆ ನೀಡುತ್ತಿರುವ ಚಿಕಿತ್ಸೆ ಬಗ್ಗೆ ಮತ್ತು ಅಂಬುಲೆನ್ಸ್ ಸೇವೆ ಬಗ್ಗೆ ವಿಚಾರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರಾದ ಸಿ.ಬಿ.ದೇವರಮನಿ, ಗುರುಮಠಕಲ್ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಅಂಬ್ರೇಶ್ ಪಾಟೀಲ್, ತಾಲೂಕು ಸಹಾಯಕ ನಿರ್ದೇಶಕ ರಾಮಚಂದ್ರ ಬಸೂದೆ, ತಾಂತ್ರಿಕ ಸಂಯೋಜಕ ಮುಜಾಮಿಲ್, ತಾಂತ್ರಿಕ ಸಹಾಯಕರು, ಬಿಎಫ್ಟಿಗಳು, ಜಿಕೆಎಮ್ ಮತ್ತು ಕಾಯಕ ಬಂಧುಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!