ಸಮಗ್ರ ಆಗು-ಹೋಗುಗಳ ತಿಳಿಯಲು ಡಿಜಿಟಲ್ ಮಾಧ್ಯಮ ಸಹಕಾರಿ
ಗುರುಮಠಕಲ್: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ವಿಭಾಗದಲ್ಲಿ ಆಯೋಜಿಸಿದ ಗುರುವಂದನಾ ಕಾರ್ಯಕ್ರಮದ ವೇಳೆ ಗುರುಮಠಕಲ್ ಖಾಸಾಮಠದ ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಸುದ್ದಿ ಪ್ರಕಟಿಸುವ ಬಟನ್ ಒತ್ತುವ ಮೂಲಕ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಶ್ರೀಗಳು, ಪ್ರಸ್ತುತ ಡಿಜಿಟಲ್ ಯುಗ ಸೃಷ್ಟಿಯಾಗಿದೆ. ಜನರು ಸಹ ಹೊಸ ವಿಷಯಗಳನ್ನು ತಕ್ಷಣವೇ ತಿಳಿಯಬೇಕು ಎನ್ನುವ ಮನಸ್ಥಿತಿಯಲ್ಲಿದ್ದಾರೆ ಎಂದರು.
ಗುರುಮಠಕಲ್ ನ ಅನೀಲ ಬಸೂದೆ ಸುಮಾರು ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸುತ್ತಾ, ಇದೀಗ ಆರಂಭಿಸಿರುವ ಯಾದಗಿರಿ ಧ್ವನಿ ಡಿಜಿಟಲ್ ಮಾಧ್ಯಮ ಯಶಸ್ವಿಯಾಗಿ ಪ್ರಾಮಾಣಿಕ ಕಾರ್ಯಮಾಡಲಿ ಎಂದು ಶುಭ ಹಾರೈಸಿದರು.
ಈ ವೇಳೆ ಹಿರಿಯ ಪತ್ರಕರ್ತ ಬಸವರಾಜ ಬೂದಿ, ಸಿಪಿಐ ದೇವಿಂದ್ರಪ್ಪ ಧೂಳಖೇಡ, ಪುರಸಭೆ ಮಾಜಿ ಅಧ್ಯಕ್ಷ ಪಾಪಣ್ಣ ಮನ್ನೆ, ಕೃಷ್ಣಾರೆಡ್ಡಿ ಪಾಟೀಲ್, ಸುರೇಶ್ ಅವಂಟಿ, ಅಖಂಡೇಶ್ವರಯ್ಯ ಹಿರೇಮಠ, ಚಂದುಲಾಲ ಚೌಧರಿ, ಪತ್ರಕರ್ತರ ಸಂಘದ ಅಧ್ಯಕ್ಷ ಚನ್ನಕೇಶವುಲು ಗೌಡ, ಪತ್ರಕರ್ತರಾದ ಮೊಗಲಪ್ಪ ನಾಯ್ಕಿನ್, ವಿಜಯ ಹಿರೇಮಠ ಸೇರಿ ಗಣ್ಯರು ಇದ್ದರು.