ಶಹಾಪೂರ: ತಾಲೂಕಿನ ಗೋಗಿಪೇಠ ಗ್ರಾಮದಲ್ಲಿ ಕಾರ್ತಿಕ ಮಾಸದ ಪ್ರಯುಕ್ತವಾಗಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ದಿಂದ ಬುಧುವಾರದ ವರೆಗೆ ಐದು ದಿನಗಳ ಶ್ರೀ ವೀರಭದ್ರೇಶ್ವರ ಪುರಾಣ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ರವಿವಾರ ರಂದು ಎರಡನೇ ದಿನದ ಶ್ರೀ ವೀರಭದ್ರೇಶ್ವರ ಪುರಾಣ ಪ್ರವಚನವನ್ನು ಕಲಬುರಗಿಯ ಶ್ರೀ ಸೂರ್ಯಕಾಂತ ಶಾಸ್ತ್ರೀಗಳು ದುತ್ತರಗಾಂವ ರವರು ಹೇಳಿದರು.
ಈ ಸಂದರ್ಭದಲ್ಲಿ ವೀರಭದ್ರೇಶ್ವರ ದೇವರ ಹುಟ್ಟು ಹಾಗೂ ಪವಾಡಗಳನ್ನು ಸವಿಸ್ತಾರವಾಗಿ ಭಕ್ತಾದಿಗಳಿಗೆ ತಿಳಿಸಿದರು ನಂತರ ಮುತ್ತೈದೆಯರಿಂದ ಶ್ರೀ ವೀರಭದ್ರೇಶ್ವರ ದೇವರ ತೊಟ್ಟಿಲು ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದಲ್ಲಿ ಪ್ರಧಾನ ಅರ್ಚಕ ಗುರೂಮೂರ್ತಿ ಗಣೇಚಾರಿ, ನಾಗಯ್ಯಸ್ವಾಮಿ ಗಣಚಾರಿ, ಸಂಗೀತಗಾರರಾದ ಕಲ್ಲಯ್ಯಸ್ವಾಮಿ ಪಡದಳ್ಳಿ,ತಬಲಾ ವಾದಕ ಪ್ರಾಣೇಶ ಶಹಾಪೂರ,ವೀರಶೈವ ಸಮಾಜದ ಅಧ್ಯಕ್ಷರಾದ ಶರಣಪ್ಪ ಗಿಂಡಿ, ಸಿದ್ರಾಮಪ್ಪ ಕಾಯಿ, ಸಂಗಣ್ಣ ಗುಳಗಿ, ಅಮರೇಶ ಪೂಜಾರಿ, ಸೂರ್ಯಕಾಂತ ಸುಗಂಧಿ, ಮಧುಕರ ಭಾಸುತ್ಕರ, ಚಂದ್ರಶೇಖರ ಪಾಟೀಲ, ಚಂದ್ರಯ್ಯಸ್ವಾಮಿ ರುಮಾಲ,ಸಿದ್ದು ಯಾದಗಿರಿ, ಶಿವಕುಮಾರ ಮಲ್ಲಾಡ ಹಾಗೂ ಊರಿನ ಯುವಕರು, ಮಹಿಳೆಯರು ಉಪಸ್ಥಿತರಿದ್ದರು.