ಆರ್ಯ ವೈಶ್ಯ ಸಮಾಜದಿಂದ ಕಾರ್ತೀಕ ದೀಪೋತ್ಸವ ಆಚರಣೆ

शुभं करोति कल्याणमारोग्यं धनसंपदा ।
शत्रुबुद्धिविनाशाय दीपज्योतिर्नमोऽस्तुते ॥

ಗುರುಮಠಕಲ್: ಕಾರ್ತೀಕ ಮಾಸ ಅತ್ಯಂತ ಪವಿತ್ರ ಮತ್ತು ಶ್ರೇಷ್ಠ ಮಾಸ ಎಂದು ಕರೆಯಲಾಗುತ್ತದೆಎಂದು ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ಅನಂತಯ್ಯ ಬಾಲಂಪೇಟ ಹೇಳಿದರು.

ಪಟ್ಟಣದ ಆರ್ಯ ವೈಶ್ಯ ಸಮಾಜದ ಕಲ್ಯಾಣ ಮಂಟಪ ಆವರಣದಲ್ಲಿ ದೀಪೋತ್ಸವ ಉದ್ದೇಶಿಸಿ ಮಾತನಾಡಿದರು.

ಈ ವೇಳೆ ದೀಪಾರಾಧನೆ ಮಾಡಿದರೆ ಐಶ್ವರ್ಯ, ಸಂಪತ್ತು, ಆರೋಗ್ಯ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ ಎಂದು ವಿವರಿಸಿದರು.

ಮುಖ್ಯ ಅತಿಥಿಗಳಾಗಿ ರಾಜ್ಯ ಆರ್ಯವೈಶ್ಯ ಮಹಾಸಭಾ ಕಾರ್ಯಕಾರಿಣಿ ಸಮಿತಿ ಸದಸ್ಯ ಶ್ರೀನಿವಾಸ ಓಬಳಶೆಟ್ಟಿ, ರಾಘವೇಂದ್ರ ಬಾದಾಮಿ ಸೈದಾಪುರ್ ಭಾಗವಹಿಸಿದ್ದರು.

ಆರ್ಯವೈಶ್ಯ ಸಂಘ ಉಪಾಧ್ಯಕ್ಷರ ಶ್ರೀನಿವಾಸ ನರವಿ, ಖಜಾಂಚಿ ಶ್ರೀನಿವಾಸ್ ಗುಮಡಾಲ್, ಕಾರ್ಯದರ್ಶಿ ಕಿಷ್ಟಯ್ಯ ಕೋಟರಕಿ ಹಾಗೂ ಪಟ್ಟಣದ ಆರ್ಯವೈಶ್ಯ ಸಮಾಜದವರು ಪಾಲ್ಗೊಂಡು ವಿಜೃಂಭಣೆಯಿಂದ ಆಚರಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!